ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ

Published : May 09, 2024, 12:59 PM IST

ಬಾಲಿವುಡ್ ನಟಿ, ಸೋನಾಕ್ಷಿ ಸಿನ್ಹಾ ಕಳೆದ ವರ್ಷಾಂತ್ಯದಲ್ಲಿ ಮುಂಬೈನಲ್ಲಿ ಸೀ ಫೇಸಿಂಗ್ ಮನೆ ಕೊಂಡಿದ್ದಾರೆ. 26ನೇ ಮಹಡಿಯಲ್ಲಿರುವ ಮನೆಯ ಒಳಾಂಗಣ ಎಷ್ಟು ಅದ್ಭುತವಾಗಿದೆ ನೋಡಿ..

PREV
110
ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ

ಬಾಲಿವುಡ್ ನಟಿ ಸೋನಾಕ್ಷಿಯದ್ದು ಅದ್ದೂರಿ ಜೀವನಶೈಲಿ. ಐಷಾರಾಮಿ ಕಾರುಗಳಿಂದ ಹಿಡಿದು ಸೊಗಸಾದ ಬಟ್ಟೆಗಳವರೆಗೆ.. ಆಕೆಯ ಬಾಂದ್ರಾ ಮನೆ ಕೂಡಾ ಈ ಅದ್ಧೂರಿತನವನ್ನೊಳಗೊಂಡಿದೆ. 

210

ತನ್ನ ತಂದೆ ಶತ್ರುಘ್ನ ಸಿನ್ಹಾ ಅವರ ಹೆಜ್ಜೆಗಳನ್ನು ಅನುಸರಿಸಿ, ನಟಿ 2010 ರಲ್ಲಿ ದಬಾಂಗ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ, ರೌಡಿ ರಾಥೋರ್, ಡಬಲ್ ಎಕ್ಸ್‌ಎಲ್, ದಬಾಂಗ್ 3, ಲೂಟೆರಾ, ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದರು. ನಟಿ ಮಾತ್ರವಲ್ಲದೆ ಸೋನಾಕ್ಷಿ ಪ್ರೆಸ್-ಆನ್ ನೇಲ್ ಬ್ರಾಂಡ್ ಸೋಜಿಯ ಮಾಲೀಕರೂ ಆಗಿದ್ದಾರೆ.

310

ಹೀರಾಮಂಡಿ ಬಿಡುಗಡೆಯಾದಾಗಿನಿಂದ ದಬಾಂಗ್ ನಟಿ ಸೋನಾಕ್ಷಿ ಸಿನ್ಹಾ ಭಾರಿ ಗಮನ ಸೆಳೆಯುತ್ತಿದ್ದಾರೆ. ಇವರು ಕಳೆದ ವರ್ಷ ಆಗಸ್ಟ್ 29ರಂದು ಪಿರಮಿಡ್ ಡೆವಲಪರ್ಸ್ ಬಳಿ ಬಾಂದ್ರಾದ ಕೆಸಿ ರಸ್ತೆಯಲ್ಲಿರುವ ಕಟ್ಟಡದ  26ನೇ ಮಹಡಿಯಲ್ಲಿ ಮನೆ ಕೊಂಡಿದ್ದಾರೆ. 

410

2,208.77 ಚದರ ಅಡಿ ಕಾರ್ಪೆಟ್ ಪ್ರದೇಶ ಹೊಂದಿರುವ ಮನೆ, ತನ್ನ ಈಸ್ತೆಟಿಕ್ ಸೌಂದರ್ಯಕ್ಕಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಿದೆ. ಅದೂ ಅಲ್ಲದೆ, ಮುಂಬೈನ ಪ್ರತಿ ನಟನಟಿಯರೂ ಬಯಸುವಂತೆ ಇದು ಸಮುದ್ರಕ್ಕೆ ಮುಖ ಮಾಡಿದೆ.

510

ಸೋನಾಕ್ಷಿಯ ಅಂದವಾದ ಸಮುದ್ರಾಭಿಮುಖವಾದ ಮನೆಯು ಮುಂಬೈನ ಹಸ್ಲ್‌ನಿಂದ ತಪ್ಪಿಸಿಕೊಳ್ಳಲು ಪರಿಪೂರ್ಣ ಸ್ವರ್ಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

610

ಚಿತ್ರಕಲೆಯನ್ನು ಇಷ್ಟಪಡುವ ನಟಿ, ಆರ್ಟ್‌ ಸ್ಟುಡಿಯೋವನ್ನು ಮನೆಯಲ್ಲಿ ಹೊಂದಿದ್ದು, ಮಡಚಬಹುದಾದ ವಿಶೇಷತೆಯನ್ನಿದು ಹೊಂದಿದೆ. 

710

ಬಹಳಷ್ಟು ಮಡಚಬಹುದಾದ ಕಪಾಟುಗಳನ್ನು ಅಳವಡಿಸುವ ಮೂಲಕ, ಮನೆಯ ಜಾಗಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಸೋನಾಕ್ಷಿ ಸಿನ್ಹಾ. 

810

ನೀಲಿ ಬಣ್ಣದ ವಿಂಟೇಜ್ ಅಲ್ಮಿರಾದಿಂದ ಹಿಡಿದು ಕಿತ್ತಳೆ ಬಣ್ಣದ ಮಂಚದವರೆಗೆ ಮನೆಯಲ್ಲಿ ರೋಮಾಂಚಕ ವರ್ಣಗಳನ್ನು ಸೇರಿಸಲಾಗಿದೆ. 

910

ಸೋನಾಕ್ಷಿ ಅವರ ಮನೆಯ ನೆಚ್ಚಿನ ಮೂಲೆಯೆಂದರೆ ಅವರ ಬಾಲ್ಕನಿ. ಇದು ತೆರೆದ ಗಾಳಿಯ ಜಾಕುಝಿಗಿಂತ ಕಡಿಮೆಯಿಲ್ಲ. ಆಕೆಯ ಮನೆಯ ಈ ಮೂಲೆಯು ಸಮುದ್ರದ ಸುಂದರ ನೋಟವನ್ನು ನೀಡುತ್ತದೆ.

1010

ಪೂರ್ತಿ ಮನೆಯನ್ನು ಕಂದು ಮತ್ತು ಗೋಲ್ಡ್ ಟೋನ್‌ನಿಂದ ಸಿಂಗರಿಸಲಾಗಿದ್ದು ಇದು ಒಳಾಂಗಣಕ್ಕೆ ಹೆಚ್ಚು ಅದ್ಧೂರಿ ಲುಕ್ ನೀಡಿದೆ. 

click me!

Recommended Stories