ಪಾರ್ವತಿ ದೇವಿಯಾಗಿ ಫೇಮ್ ಆದ ಈ ನಟಿ ಎದೆ ಸೀಳಲ್ಲ, ಎದೆಯನ್ನೇ ತೋರಿಸಿದ ವೀಡಿಯೋ ವೈರಲ್!

Published : May 09, 2024, 12:52 PM ISTUpdated : May 09, 2024, 12:55 PM IST

ವಿಘ್ನಹರ್ತ ಗಣೇಶ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯಾಗಿ ಮಿಂಚಿದ್ದ ನಟಿ ಅಕಾಂಕ್ಷಾ ಪುರಿ ಬೋಲ್ಡ್ ಆಗಿದ್ದಾರೆ. ಇವರ ಬೋಲ್ಡ್ ಅವತಾರ ನೋಡಿದ್ರೆ, ಇವರೇನಾ ಪಾರ್ವತಿ ದೇವಿಯಾಗಿದ್ದು ಎಂದೆನಿಸುತ್ತೆ. ಬರೀ ಎದೆ ಸೀಳಲ್ಲ, ಅರ್ಧಕ್ಕರ್ಧ ಎದೆಯನ್ನೇ ತೋರಿಸೋ ಉಡುಗೆ ತೊಟ್ಟ ಇವರದ್ದೊಂದು ವೀಡಿಯೋ ವೈರಲ್ ಆಗಿದ್ದು, ಪಡ್ಡೆ ಹುಡುಗರ ಕಣ್ಣು ಬಾಯಿ ಬಿಟ್ಕೊಂಡು ಮತ್ತೆ ಮತ್ತೆ ಈ ರೀಲ್ಸ್ ನೋಡುತ್ತಿದ್ದಾರೆ.   

PREV
18
ಪಾರ್ವತಿ ದೇವಿಯಾಗಿ ಫೇಮ್ ಆದ ಈ ನಟಿ ಎದೆ ಸೀಳಲ್ಲ, ಎದೆಯನ್ನೇ ತೋರಿಸಿದ ವೀಡಿಯೋ ವೈರಲ್!

ಈಕೆ ಆಕಾಂಕ್ಷ ಪುರಿ (Akanksha Puri) ಹಿಂದಿ, ತಮಿಳು, ಕನ್ನಡ, ಮಲಯಾಲಂ ಸಿನಿಮಾಗಳಲ್ಲಿ, ಹಿಂದಿ ಸೀರಿಯಲ್ ಗಳಲ್ಲಿ, ಅದಕ್ಕೂ ಹೆಚ್ಚಾಗಿ ಮ್ಯೂಸಿಕ್ ಆಲ್ಬಂಗಳಲ್ಲಿ ಹೆಚ್ಚು ಹೆಸರು ಮಾಡಿದ ನಟಿ. ಆದರೂ ಈಕೆ ಜನಪ್ರಿಯತೆ ಪಡೆದದ್ದು ಪಾರ್ವತಿ ದೇವಿಯಾಗಿ. 
 

28

ನಟಿ ಮತ್ತು ಮಾಡೆಲ್ (Model) ಆಗಿ ಗುರುತಿಸಿಕೊಂಡಿರುವ ಆಕಾಂಕ್ಷಾ ಪುರಿ ವಿಘ್ನಹರ್ತ ಗಣೇಶ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯಾಗಿ, ದೈವೀಕತೆ ತುಂಬಿದ ಪಾತ್ರದ ಮೂಲಕ ಹೆಸರು ಮಾಡಿದ್ದರು. ಇದೇ ಸೀರಿಯಲ್‌ನಲ್ಲಿ ಸತಿದೇವಿಯಾಗಿಯೂ ಆಕಾಂಕ್ಷಾ ನಟಿಸಿದ್ದರು. 
 

38

ಮಾಡೆಲ್ ಆಗಿದ್ದ ಆಕಾಂಕ್ಷ ತಮಿಳಿನ ಅಲೆಕ್ಸ್ ಪಾಂಡಿಯನ್ (Alex Pandian) ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ನಂತರ ಆಕ್ಷನ್ ಸಿನಿಮಾ, ಮಲಯಾಳದ ಪ್ರೈಸ್ ದ ಲಾರ್ಡ್, ಅಮರ್ ಅಕ್ಬರ್ ಆಂಥೋನಿ, ಕನ್ನಡದಲ್ಲಿ ಲೊಡ್ಡೆ, ಹಿಂದಿಯಲ್ಲಿ ಕ್ಯಾಲೆಂಡರ್ ಗರ್ಲ್ ಸಿನಿಮಾದಲ್ಲಿ ನಟಿಸಿದ್ದಾರೆ. 
 

48

ಲೊಡ್ಡೆ 2015ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಗೆ ಅಕಾಂಕ್ಷಾ ಪುರಿ ನಾಯಕಿಯಾಗಿದ್ದರು. ಇದು ಅಕಾಂಕ್ಷಾ ಅವರ ಡೆಬ್ಯೂ ಕನ್ನಡ ಸಿನಿಮಾವಾಗಿತ್ತು. 
 

58

ಅಕಾಂಕ್ಷಾ ಇನ್ಸ್ಪೆಕ್ಟರ್ ಅವಿನಾಶ್ ಎನ್ನುವ ವೆಬ್ ಸೀರೀಸ್, ಸಿಐಡಿ, ಬಿಗ್ ಬಾಸ್ 13 ಮತ್ತು 15 ನಲ್ಲೂ ಅತಿಥಿಯಾಗಿ ಮತ್ತು ಚಾಲೆಂಜರ್ ಆಗಿ ಹಾಗೂ ಬಿಗ್ ಬಾಸ್ ಓಟಿಟಿಯಲ್ಲೂ  (Bigg Boss OTT) ಭಾಗವಹಿಸಿದ್ದರು. ಅಷ್ಟೇ ಅಲ್ಲ ಸ್ವಯಂವರ್ ವಿಕಾ ದಿ ವೋಹ್ಟಿಯಲ್ಲೂ ಸಹ ಭಾಗಿಯಾಗಿದ್ದರು. 
 

68

ಇನ್ನು 2017 ರಿಂದ ಇಲ್ಲಿಯವರೆಗೆ ಹಲವಾರು ಮ್ಯೂಸಿಕ್ ಆಲ್ಬಂಗಳಲ್ಲೂ ನಟಿಸಿದ್ದಾರೆ ಈ ಬೋಲ್ಡ್ ಬ್ಯೂಟಿ. ಆದರೆ ಈಕೆ ಎಲ್ಲದಕ್ಕಿಂತ ಹೆಚ್ಚು ಜನಪ್ರಿಯತೆ ಪಡೆದದ್ದು ಮಾತ್ರ ಪಾರ್ವತಿಯಾಗಿ. ಆದರೆ ಈ ಪಾರ್ವತಿ ದೇವಿಯ ಬೋಲ್ಡ್ ಅವತಾರ ನೋಡಿ ಪಡ್ಡೆ ಹುಡುಗರೂ ಸಹ ಬಿದ್ದು ಬಿಡ್ತಾರೆ. 
 

78

ಸೋಶಿಯಲ್ ಮೀಡಿಯಾದಲ್ಲಿ (Social Media) ತುಂಬಾನೆ ಆಕ್ಟೀವ್ ಆಗಿರುವ ಅಕಾಂಕ್ಷ ಪುರಿ ಹೆಚ್ಚಾಗಿ ತಮ್ಮ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಮತ್ತು ಬ್ಯೂಟಿ ಫುಲ್ ಫೋಟೋಗಳದ್ದೆ ಹೆಚ್ಚು ಕಾರುಬಾರು. 
 

88

ಸ್ವಿಮ್ ಸೂಟ್, ಬಿಕಿನಿ, ಬೋಲ್ಡ್ ತುಂಡುಡುಗೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಕಾಂಕ್ಷಾಗೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ 2687 ಫೋಟೋಗಳನ್ನು ಹಂಚಿಕೊಂಡಿರುವ ಈಕೆಗೆ ಸುಮಾರು 3.6 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. 
 

Read more Photos on
click me!

Recommended Stories