ಆಜ್ ಕಿ ರಾತ್ ಮಾದಕತೆಗೆ ಹೊಸ ದಾಖಲೆ ಸೃಷ್ಟಿ, ಸ್ತ್ರೀ 2 ಸಿನಿಮಾದ ಈ ಹಾಡು ಹಾಗೂ ತಮನ್ನಾ ಡ್ಯಾನ್ಸ್ ಭಾರಿ ಸದ್ದು ಮಾಡಿತ್ತು. ಇದೀಗ ಈ ಆಜ್ ಕಿ ರಾತ್ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ತಮನ್ನಾ ಭಾಟಿಯಾ ಧನ್ಯವಾದ ಹೇಳಿದ್ದಾರೆ.
ಸ್ತ್ರೀ 2 ಸಿನಿಮಾದ ಆಜ್ ಕಿ ರಾತ್ ಹಾಡು ಹಾಗೂ ನಟಿ ತಮನ್ನಾ ಭಾಟಿಯಾ ಡ್ಯಾನ್ಸ್ ಭರ್ಜರಿ ಮೋಡಿ ಮಾಡಿದೆ. ಈ ಹಾಡಿನಲ್ಲಿ ತಮನ್ನಾ ಮಾದಕತೆ, ಅದ್ಭುತ ಡ್ಯಾನ್ಸ್ ಹಲವರ ಆ್ಯಂಥಮ್ ಸಾಂಗ್ ಆಗಿ ಹೊರಹೊಮ್ಮಿತ್ತು. ಪಡ್ಡೆ ಹುಡುಗರಿಗೆ ತಮನ್ನಾ ಭಾಟಿಯಾ ಪ್ರತಿ ಹೆಜ್ಜೆಗಳು ಕನಸಿನಲ್ಲೂ ಕನವರಿಸುವಂತೆ ಮಾಡಿತ್ತು. ಇದೀಗ ಇದೇ ಆಜ್ ಕಿ ರಾತ್ ಹೊಸ ದಾಖಲೆ ಬರೆದಿದೆ.
26
ಏನಿದು ಆಜ್ ಕಿ ರಾತ್ ದಾಖಲೆ
ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ ಆಜ್ ಕಿ ರಾತ್ ಹಾಡು ಇದೀಗ ಬರೋಬ್ಬರಿ 1 ಬಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಯೂಟ್ಯೂಬ್‌ನಲ್ಲಿ ಆಜ್ ಕಿ ರಾತ್ 1 ಬಿಲಿಯನ್ ವೀಕ್ಷಣೆ ಗಡಿ ದಾಟಿದೆ. ಪ್ರತಿ ದಿನ ಆಜ್ ಕಿ ರಾತ್ ಹಾಡು ವೀಕ್ಷಣೆ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದೆ.
36
ಧನ್ಯವಾದ ಹೇಳಿದ ತಮನ್ನಾ ಭಾಟಿಯಾ
ಆಜ್ ಕಿ ರಾತ್ ಸಾಂಗ್ ಹೊಸ ದಾಖಲೆ ಬರೆಯುತ್ತಿದ್ದಂತೆ ತಮನ್ನಾ ಭಾಟಿಯಾ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ಹೇಳಿದ್ದಾರೆ. ಆಜ್ ಕಿ ರಾತ್ ಹಾಡು ಶೂಟಿಂಗ್ ಮುಗಿಸಿ ಮೊದಲು ತಮನ್ನಾ ವೀಕ್ಷಿಸುತ್ತಿರುವ ಕ್ಲಿಪ್ ಶೇರ್ ಮಾಡಿದ್ದಾರೆ. ಇದೇ ವೇಳೆ ಮೊದಲ ವೀಕ್ಷಣೆಯಿಂದ ಇದೀಗ 1 ಬಿಲಿಯನ್ ವೀಕ್ಷಣೆ. ನಿಮ್ಮಲ್ಲರ ಪ್ರೀತಿಗೆ ಧನ್ಯವಾದ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ.
ಕಾಮಿಡಿ ಹಾರರ್ ಸ್ತ್ರೀ 2 ಸಿನಿಮಾ ಅದ್ಭುತ ಯಶಸ್ಸು ಸಿಕ್ಕಿತ್ತು. ಇದಕ್ಕೆ ಆಜ್ ಕಿ ರಾತ್ ಹಾಡಿನ ಕೂಡುಗೆಯೂ ಇದೆ. ಮಧುಬಂತಿ ಬಗ್ಚಿ ಹಾಗೂ ದಿವ್ಯ ಕುಮಾರ್ ಹಾಡಿರುವ ಈ ಹಾಡಿಗೆ ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಸಚಿನ್ ಜಿಗರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
56
ವಾ ನು ಕಾವಲಯ ಹಾಡಿನ ಬೆನ್ನಲ್ಲೇ ಆಜ್ ಕಿ ರಾತ್
ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ವಾ ನು ಕಾವಾಲಯ್ಯ ಐಟಂ ಸಾಂಗ್ ಭಾರಿ ಸದ್ದು ಮಾಡಿತ್ತು. ಈ ಹಾಡಿನಲ್ಲಿ ತಮನ್ನಾ ಡ್ಯಾನ್ಸ್‌ಗೆ ಹಲವರು ಮನಸೋತಿದ್ದರು.ಇದರ ಬಳಿಕ ಆಜ್ ಕಿ ರಾತ್ ಬಿಡುಗಡೆಯಾಗಿತ್ತು. ಇದು ಹಿಂದಿನ ದಾಖಲೆಗಳನ್ನು ಪುಡಿ ಮಾಡಿ ಹೊಸ ಇತಿಹಾಸ ಬರೆದಿದೆ.
ವಾ ನು ಕಾವಲಯ ಹಾಡಿನ ಬೆನ್ನಲ್ಲೇ ಆಜ್ ಕಿ ರಾತ್
66
ತಮನ್ನಾ ಭಾಟಿಯಾ ಮುಂದಿನ ಸಿನಿಮಾ ಯಾವುದು
ಅಭಿಮಾನಿಗಳು ತಮನ್ನಾ ಭಾಟಿಯಾ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. VVAN (ವ್ವಾನ್) ಅನ್ನೋ ಸಿನಿಮಾ ಮೂಲಕ ತಮನ್ನಾ ಭಾಟಿಯಾ ತೆರೆಗೆ ಬರಲು ಸಜ್ಜಾಗಿದ್ದಾರೆ. ದೀಪಕ್ ಮಿಶ್ರಾ ಹಾಗೂ ಅರುಣಬ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರ ಕಾಣಿಸಿಕೊಂಡಿದ್ದಾರೆ. ಮೇ 15ಕ್ಕೆ ಈ ಸಿನಿಮಾ ತೆರೆ ಕಾಣಲಿದೆ.
ತಮನ್ನಾ ಭಾಟಿಯಾ ಮುಂದಿನ ಸಿನಿಮಾ ಯಾವುದು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.