22 ವರ್ಷದ ಮಗನಿರುವಾಗಲೇ ಚಿರಯುವಕನ ಜೊತೆ 52ರ ನಟಿ Malaika Arora ಲವ್? ರೊಮ್ಯಾಂಟಿಕ್‌ ವಿಡಿಯೋ ವೈರಲ್

Published : Mar 10, 2026, 09:11 AM IST

Actress Malaika Arora: ಬಾಲಿವುಡ್‌ನಲ್ಲಿ ಫಿಟ್‌ನೆಸ್‌ ಕಾಯ್ದುಕೊಂಡಿರುವ ನಟಿ ಮಲೈಕಾ ಅರೋರ ಅವರು ವೈಯಕ್ತಿಕ ಜೀವನದಲ್ಲಿ ಭಾರೀ ಸದ್ದು ಮಾಡಿದ್ದಾರೆ. ಈಗಾಗಲೇ ಡಿವೋರ್ಸ್‌ ಪಡೆದಿರುವ ಮಲೈಕಾ ಅರೋರ ಅವರು Splitsvilla ಸ್ಪರ್ಧಿ ಸೋರಬ್‌ ಬೇಡಿ ಜೊತೆಗೆ ಪಾರ್ಟಿ ಮಾಡಿರುವ ಫೋಟೋ ವೈರಲ್‌ ಆಗ್ತಿದೆ. 

PREV
15
ಪಾರ್ಟಿ ಮಾಡಿದ್ರು

ಇವರಿಬ್ಬರು ನಿಜಕ್ಕೂ ಪ್ರೀತಿಯಲ್ಲಿದ್ದಾರಾ? ಅಥವಾ ಉತ್ತಮ ಬಾಂಧವ್ಯದ ಫೋಟೋನಾ ಎಂಬ ಡೌಟ್‌ ಕೂಡ ಇದೆ. ಜುಹುದಲ್ಲಿರುವ ಮಲೈಕಾ ಅರೋರ ಅವರ ರೆಸ್ಟೋರೆಂಟ್‌ನಲ್ಲಿ ಇವರಿಬ್ಬರು ಪಾರ್ಟಿ ಮಾಡಿದ್ದಾರೆ.

25
ಪ್ರೇಮಿಗಳ ದಿನದ ಆಚರಣೆ

ಪ್ರೇಮಿಗಳ ದಿನದಂದು ಮಲೈಕಾ ಅರೋರ ಅವರು ಬಾಯ್‌ಫ್ರೆಂಡ್‌ ಜೊತೆಗಿದ್ದರು ಎನ್ನಲಾಗಿದೆ. ಮಲೈಕಾ ಅರೋರ ಅವರ ಜೊತೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆಯುತ್ತಿದ್ದುದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

35
ದೊಡ್ಡ ಚರ್ಚೆ ಮಾಡ್ತಾರೆ

"ಯಾರ ಜೊತೆ ಎಲ್ಲೇ ಹೋದರೂ, ಮಾತನಾಡಿದರೂ ಕೂಡ ಜನರು ಏನಾದರೊಂದು ಮಾತನಾಡುತ್ತಾರೆ. ಅದನ್ನೇ ದೊಡ್ಡ ಚರ್ಚೆ ಮಾಡ್ತಾರೆ, ನಾನು ಇದಕ್ಕೆಲ್ಲ ಪುಷ್ಠಿ ಕೊಡೋದಿಲ್ಲ. ಇದರಿಂದ ಏನೂ ಆಗೋದಿಲ್ಲ" ಎಂದು ಮಲೈಕಾ ಅರೋರ ಅವರು ಹೇಳಿದ್ದಾರೆ.

45
ನನ್ನ ತಾಯಿ ಹೇಳ್ಕೊಂಡು ನಗ್ತಾರೆ

"ನಾನು ಬಹುಕಾಲದ ಗೆಳೆಯನ ಜೊತೆಗೋ ಅಥವಾ ಮದುವೆ ಆಗಿರೋ ಫ್ರೆಂಡ್‌ ಹಳೆಯ ಫ್ರೆಂಡ್‌ ಮ್ಯಾನೇಜರ್‌ಅಥವಾ ಯಾರದ್ದಾದರೂ ಜೊತೆ ನಾನು ಹೊರಗಡೆ ಹೋದರೆ, ಆ ವ್ಯಕ್ತಿ ಜೊತೆ ನನ್ನನ್ನು ಲಿಂಕ್‌ ಮಾಡಲಾಗುತ್ತದೆ. ನಾವು ಇದರ ಬಗ್ಗೆ ಮಾತನಾಡಿಕೊಂಡು ನಗುತ್ತೇವೆ, "ಈಗ ಯಾರು ಬೇಬಿ? ಇದರ ಬಗ್ಗೆ ಮಾತಾಡ್ತಿರೋರು ಯಾರು? ಎಂದು ನನ್ನ ತಾಯಿ ಕಾಲ್‌ ಮಾಡಿ ಮಾತನಾಡುತ್ತಾರೆ. ನಿಜಕ್ಕೂ ಈಗ ಇದು ನಗುವ ವಿಚಾರ ಆಗಿದೆ" ಎಂದು ಮಲೈಕಾ ಅರೋರ ಹೇಳಿದ್ದಾರೆ.

55
ವೈಯಕ್ತಿಕ ಜೀವನವೇ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್

"ನನ್ನ ರಿಲೇಶನ್‌ಶಿಪ್‌ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತೇವೆ, ಇದೇ ದೊಡ್ಡ ವಿಚಾರ ಆಗುವುದು. ನನ್ನ ವೈಯಕ್ತಿಕ ಜೀವನ ಈಗ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಿದೆ. ನಾನು ಯಾವುದನ್ನೂ ಕೂಡ ಸಾಬೀತುಪಡಿಸಬೇಕಾಗಿಲ್ಲ ಎಂಬ ಸ್ಟೇಜ್‌ನಲ್ಲಿದ್ದೇನೆ. ಆದರೆ ನನಗೆ ಖುಷಿ ಸಿಗುವುದನ್ನೇ ಮಾಡಬೇಕು, ಅದನ್ನು ಜನರು ನೋಡಬೇಕು" ಎಂದು ಮಲೈಕಾ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories