ಆತ ಮಹಾ ಮೋಸಾಗರ, ನಟಿ ಆರ್ಯಾಳನ್ನು ಎಲ್ಲಾ ರೀತಿ ಬಳಸಿ ಬಿಟ್ಟು ಹೋದ, ನೋವಿನ ಕತೆ ಬಹಿರಂಗ

Published : Mar 09, 2026, 10:58 PM IST

ಆತ ಮಹಾ ಮೋಸಾಗರ, ನಟಿ ಆರ್ಯಾಳನ್ನು ಎಲ್ಲಾ ರೀತಿ ಬಳಸಿ ಬಿಟ್ಟು ಹೋದ, ನೋವಿನ ಕತೆ ಬಹಿರಂಗ,ನಟಿ ಆರ್ಯಾಳ ಮಾಜಿ ಪ್ರಿಯಕರನ ಬಗ್ಗೆ ಹಲವು ಶಾಕಿಂಗ್ ಮಾಹಿತಿಗಳನ್ನು ನಿರ್ದೇಶಕ ಬಹಿರಂಗಪಡಿಸಿದ್ದಾರೆ. 

PREV
15
ಹೇಗೆ ಬೇಕೋ ಹಾಗೆ ಬಳಸಿಕೊಂಡು ಬಿಟ್ಟು ಹೋದ

ನಿರೂಪಕಿಯಾಗಿ ಬಳಿಕ ಸಿನಿಮಾ ಮೂಲಕ ಜನರ ಮನಗೆದ್ದ ನಟಿ ಆರ್ಯಾ ಬಾಬು ಮಾಜಿ ಪ್ರಿಯಕರನ ಕುರಿತ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮಾಜಿ ಪ್ರಿಯಕರ ಮಹಾ ಮೋಸಗಾರ. ಆತ ಆರ್ಯಾ ಬಾಬುವನ್ನು ಎಲ್ಲಾ ರೀತಿ ಬಳಸಿಕೊಂಡ. ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದು ಹೇಗೆ ಬೇಕೋ ಹಾಗೇ ಬಳಸಿ ಕೈಕೊಟ್ಟ ಎಂದು ನಿರ್ದೇಶ ಅಲೆಪ್ಪಿ ಆಶ್ರಫ್ ಬಹಿರಂಗಪಡಿಸಿದ್ದಾರೆ.

25
ಸಿನಿಮಾಗೂ ಮೀರಿದ ಲವ್ ಸ್ಟೋರಿ

ಮಲಯಾಳಂನ ಜನಪ್ರಿಯ ನಟಿ ಮತ್ತು ನಿರೂಪಕಿ ಆರ್ಯ ಬಾಬು, ಬಡಾಯಿ ಬಂಗ್ಲಾವ್' ಶೋ ಮೂಲಕ ಇವರು ಮನೆಮಾತಾದರು. ಬಳಿಕ ಸಿನಿಮಾ ಮತ್ತು ನಿರೂಪಣೆಯಲ್ಲಿ ತಮ್ಮದೇ ಆದ ಜಾಗ ಗಿಟ್ಟಿಸಿಕೊಂಡರು. ಬಿಗ್ ಬಾಸ್ ಶೋನಲ್ಲೂ ಸ್ಪರ್ಧಿಸಿ ಗಮನ ಸೆಳೆದಿದ್ದರು. ಇದೀಗ ನಿರ್ದೇಶಕ ಆಲೆಪ್ಪಿ ಅಶ್ರಫ್, ಆರ್ಯ ಅವರ ಹಳೆಯ ಲವ್ ಸ್ಟೋರಿ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಹೇಳಿದ್ದಾರೆ. ಸಿನಿಮಾದ ವಿಲನ್‌ಗಳನ್ನೂ ಮೀರಿಸುವ ಹಾಗೆ ಆರ್ಯ ಮಾಜಿ ಬಾಯ್‌ಫ್ರೆಂಡ್ ನಟಿಸಿದ್ದ ಆತ ಎಂದು ಅಶ್ರಫ್ ಆರೋಪಿಸಿದ್ದಾರೆ.

35
ಪಾಪದ ಹುಡುಗಿಗೆ ಗೊತ್ತೇ ಆಗಲಿಲ್ಲ

ಆರ್ಯ ಅವರ ಮುಗ್ಧ ಪ್ರೀತಿಯನ್ನು ಆಕೆಯ ಬಾಯ್‌ಫ್ರೆಂಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಆದರೆ ಈ ಸತ್ಯ ಆ ಪಾಪದ ಹುಡುಗಿಗೆ ಗೊತ್ತೇ ಇರಲಿಲ್ಲ. ಆತ ಸಿನಿಮಾದ ಖಳನಾಯಕರನ್ನೂ ಮೀರಿಸುವ ನಟ. ಆತನಿಗಾಗಲೇ ಅದಾಗಲೇ ಎರಡು ಬಾರಿ ಡೈವೋರ್ಸ್ ಆಗಿತ್ತು. ಮೂರು ವರ್ಷಗಳ ಕಾಲ ಪ್ರೀತಿ, ಲಿವಿಂಗ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಆರ್ಯಳನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು, ಕೊನೆಗೆ ಯಾವುದೇ ಕನಿಕರವಿಲ್ಲದೆ ಬಿಟ್ಟುಹೋದ. ಬಿಗ್ ಬಾಸ್ ಮನೆಯಲ್ಲಿ 75 ದಿನಗಳ ಕಾಲ ಕಳೆದು ಹೊರಬಂದಾಗ ಆರ್ಯ ಮೊದಲು ಫೋನ್ ಮಾಡಿದ್ದು ತನ್ನ ಮಗಳಿಗೋ, ಮನೆಗಲ್ಲ. ಬದಲಿಗೆ ಆ ಮಹಾ ಮೋಸಗಾರನಿಗೆ ಎಂದು ಅಶ್ರಫ್ ಹೇಳಿದ್ದಾರೆ.

45
ಆರ್ಯ ಗೆಳತಿ ಜೊತೆ ಮೋಸಗಾರನ ಹೊಸ ಬದುಕು

ಆರ್ಯಗೆ ತನ್ನ ಮನಸ್ಸನ್ನೇ ಚೂರುಚೂರು ಮಾಡುವ ಆಘಾತಕಾರಿ ಸತ್ಯ ಗೊತ್ತಾಗುವ ಕಾಲ ಮಿಂಚಿತ್ತು. ಆತ, ಆರ್ಯನೇ ಪರಿಚಯ ಮಾಡಿಕೊಟ್ಟಿದ್ದ ಆಕೆಯ ಆತ್ಮೀಯ ಗೆಳತಿಯ ಜೊತೆ ಹೊಸ ಜೀವನ ಶುರು ಮಾಡಿದ್ದ. ತನ್ನನ್ನು ಮೋಸಗೊಳಿಸಿದ ಆ ಮಾಜಿ ಪ್ರಿಯಕರನ ಬಗ್ಗೆ ಮಾತನಾಡುವಾಗ ಆರ್ಯ ಇವತ್ತಿಗೂ ಗದ್ಗದಿತರಾಗುತ್ತಾರೆ. ಆ ಜಾಗದಲ್ಲಿ ಬೇರೆ ಯಾವುದಾದರೂ ದುರ್ಬಲ ಹುಡುಗಿ ಇದ್ದಿದ್ದರೆ, ಅದರ ಅಂತ್ಯ ದೊಡ್ಡ ದುರಂತದಲ್ಲಿ ಆಗುತ್ತಿತ್ತು. ಇಲ್ಲಿ ನಾವು ಆರ್ಯ ಎಂಬ ಹೆಣ್ಣಿನ ಗಟ್ಟಿತನವನ್ನು ನೋಡಬೇಕು" ಎಂದು ಅಶ್ರಫ್ ವಿವರಿಸಿದ್ದಾರೆ.

55
ಭಾರಿ ನಾಟಕ ಆಡಿದ್ದ ಮಾಜಿ ಪ್ರಿಯಕರ

ಈ ಹಿಂದೆ ಹಲವು ಸಂದರ್ಶನಗಳಲ್ಲಿ ಆರ್ಯ ಕೂಡ ತಮ್ಮ ಹಳೆಯ ಪ್ರೀತಿಯ ಬಗ್ಗೆ ಮಾತನಾಡಿದ್ದರು. "ನಾನು ಬಿಗ್ ಬಾಸ್‌ಗೆ ಹೋಗುವ ಮುನ್ನ ಅವನಿಗೆ ಕರೆ ಮಾಡಿದ್ದೆ. ಅಷ್ಟು ದಿನ ನಿನ್ನನ್ನು ನೋಡಲು ಆಗುವುದಿಲ್ಲವಲ್ಲ ಎಂದು ಅವನು ಅಳುತ್ತಿದ್ದ. ಆ 75 ದಿನಗಳಲ್ಲಿ ಏನಾಯಿತೋ ನನಗೆ ಗೊತ್ತಿಲ್ಲ. ನಂತರ ಸಮಸ್ಯೆಯೇನೆಂದು ನಾನು ಪತ್ತೆ ಹಚ್ಚಿದೆ. ಅವನಿಗೂ ನನ್ನ ಫ್ರೆಂಡ್‌ಗೂ ಸಂಬಂಧ ಶುರುವಾಗಿತ್ತು. ಆ ಸತ್ಯ ತಿಳಿದಾಗ ಅವರಿಬ್ಬರನ್ನೂ ಶೂಟ್ ಮಾಡಿ ಸಾಯಿಸಬೇಕು ಎನಿಸಿತ್ತು" ಎಂದು ಆರ್ಯ ಹೇಳಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories