Actress Asmitha: ಬೇರೆ ಹುಡುಗಿ ಮನೇಲಿ ಸಿಕ್ಕಾಕೊಂಡ ಪತಿ; ಈಗ ಈ ನಟಿಯ ಹೊಟ್ಟೆಪಾಡಿನ ಮೇಲೆ ಕಣ್ಣಿಟ್ಟ ಕಿಡಿಗೇಡಿಗಳು!

Published : Jun 22, 2025, 02:48 PM ISTUpdated : Jun 22, 2025, 02:49 PM IST

ತಮಿಳು ನಟಿ, ಮೇಕಪ್‌ ಆರ್ಟಿಸ್ಟ್‌ ಅಷ್ಮಿತಾ ಸಂಸಾರವಂತೂ ಹಳ್ಳ ಹಿಡಿದೋಯ್ತು. ಈಗ ಕರಿಯರ್‌ನಲ್ಲೂ ಸಮಸ್ಯೆ ಆಗಿದೆ. 

PREV
16

ತಮಿಳು ನಟಿ, ಮೇಕಪ್‌ ಆರ್ಟಿಸ್ಟ್‌ ಅಷ್ಮಿತಾ ಸಂಸಾರ ಬೀದಿಗೆ ಬಂದಿದ್ದಲ್ಲದೆ, ಈಗ ಅವರ ಕರಿಯರ್‌ಗೂ ಸಮಸ್ಯೆ ಆಗಿದೆ. ಈಗಾಗಲೇ ದೊಡ್ಡ ಅಕಾಡೆಮಿ ನಡೆಸುತ್ತಿರೋ ಅಷ್ಮಿತಾ ಪತಿ ಬೇರೆ ಹುಡುಗಿಗೆ ಅಸಭ್ಯವಾಗಿ ಮೆಸೇಜ್‌ ಮಾಡಿದ್ದರು. ಪತ್ನಿ ಮೂರನೇ ಮಗುವಿಗೆ ತಾಯಿಯಾಗುತ್ತಿರುವಾಗಲೇ ಅವರು ಕಾಂಡೋಮ್‌ ಹಿಡಿದು ಓಡಾಡಿದ್ದು, ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು.

26

ಆಮೇಲೆ ಅಷ್ಮಿತಾ ಪತಿ ವಿಷ್ಣು ಅವರೇ ತನಗೆ ಅಕ್ರಮ ಸಂಬಂಧ ಇದೆ, ಅದಕ್ಕೆ ಅಷ್ಮಿತಾ ಒಪ್ಪಿಗೆ ಇದೆ ಎಂದಿದ್ದರು. ಇನ್ನು ಅಷ್ಮಿತಾಗೂ ಅಕ್ರಮ ಸಂಬಂಧ ಇದೆ ಎಂದು ಹೇಳಿದ್ದರು. ಇನ್ನು ವಿಷ್ಣು ವಿರುದ್ಧ ಅಷ್ಮಿತಾ ಕೂಡ ಆರೋಪ ಮಾಡಿದ್ದರು. ಆದರೆ ಇಷ್ಟು ವರ್ಷಗಳಿಂದ ಈ ಜೋಡಿ ತಮ್ಮ ಮಧ್ಯೆ ಭಾರೀ ಪ್ರೀತಿಯಿದೆ ಎಂಬಂತಹ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡ್ತಿತ್ತು. ಇದನ್ನು ನೋಡಿದವರೆಲ್ಲ ಈಗ ತಾವು ಬಕ್ರಾ ಆಗಿದ್ದೇವೆ ಎಂದು ಭಾವಿಸಿದ್ದಾರೆ. ಈಗ ಅಷ್ಮಿತಾ ಅವರು ವಿಶೇಷ ಪೋಸ್ಟ್‌ ಹಂಚಿಕೊಂಡು, ತಮ್ಮ ಕರಿಯರ್‌ ಹಾಳಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

36

ಅಷ್ಮಿತಾ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು “ನನ್ನ ರಕ್ತ, ಬೆವರಿನ ಶ್ರಮ, ಅವಿರತ ಪರಿಶ್ರಮದಿಂದ ಕಟ್ಟಿಕೊಂಡಿರುವ ನನ್ನ ಬ್ರಾಂಡ್‌ನ ರಕ್ಷಣೆಗಾಗಿ, ಸುತ್ತಮುತ್ತಲಿನ ಘಟನೆಗಳ ವಿರುದ್ಧ ಈಗ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಇದು ಸಹಾನುಭೂತಿಗಾಗಲೀ ಅಥವಾ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಾಗಲೀ ಅಲ್ಲ. ಇದು ನಾನು ವರ್ಷಗಳಿಂದ ಕಟ್ಟಿಕೊಂಡಿರುವುದನ್ನು ರಕ್ಷಿಸಿಕೊಳ್ಳುವುದರ ಕುರಿತು ಈ ಪೋಸ್ಟ್‌ ಹಂಚಿಕೊಳ್ತಿದ್ದೇನೆ” ಎಂದಿದ್ದಾರೆ.

46

ಶುಕ್ರವಾರದಿಂದ, Google ನಲ್ಲಿ 1-ಸ್ಟಾರ್ ರೇಟಿಂಗ್‌ಗಳಲ್ಲಿ ಒಮ್ಮೆಗೆ ಏರಿಕೆ ಕಂಡಿದ್ದೇವೆ. ಕೆಲವರು ನನ್ನ ಮೇಕಪ್ ಕ್ಲಾಸ್‌ಗೆ ಹಾಜರಾಗಿದ್ದೇವೆ ಎಂದು ಹೇಳಿಕೊಂಡು ನೆಗೆಟಿವ್‌ ಪ್ರತಿಕ್ರಿಯೆಗಳನ್ನು ಹಂಚಿಕೊಳ್ತಿದ್ದಾರೆ. ಆಳವಾಗಿ ತನಿಖೆ ಮಾಡಿದಾಗ, ಒಂದು ಪಬ್ಲಿಕ್‌ ಸ್ಟೇಜ್‌ನಲ್ಲಿ ಜನರು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ, ಕೇವಲ ಟೈಂಪಾಸ್‌ಗಾಗಿ ನನ್ನ ಬ್ರಾಂಡ್‌ಗೆ ಕಡಿಮೆ ರೇಟಿಂಗ್ ನೀಡಲು ಇತರರನ್ನು ಕೇಳುತ್ತಿದ್ದಾರೆ ಎಂದು ಗೊತ್ತಾಗಿದೆ.

56

ಜೀರೋದಿಂದ ಈ ಬ್ರಾಂಡ್‌ನ್ನು ಕಟ್ಟಿಕೊಂಡೆ, ಕಠಿಣ ಪರಿಶ್ರಮ ಮತ್ತು ಪ್ರೀತಿಯಿಂದ ಈ ಸಾಧನೆ ಮಾಡಿದೆ. ನನ್ನ ಜೀವನದ ಅತ್ಯಂತ ಕಷ್ಟಕರ ಘಟ್ಟದಲ್ಲಿರುವಾಗ, ಇದು ಸಿಕ್ಕಾಪಟ್ಟೆ ನೋವು ಕೊಟ್ಟಿದೆ. ಈ ರೀತಿ ಅನ್ಯಾಯದ ಗುರಿಯಾಗುವುದು ಸಂಪೂರ್ಣವಾಗಿ ಅನುಚಿತವಾಗಿದೆ. ಪರ್ಸನಲ್‌ ಅಟ್ಯಾಕ್‌ ಆಗ್ತಿದೆ. ಇದು ವೃತ್ತಿಪರ ದಾಳಿಯಾಗಿದ್ದು, ಗೆರೆಯನ್ನು ದಾಟಿದೆ.ಇದನ್ನು ನಾನು ಸಹಿಸಲಾರೆ ಅಥವಾ ಯಾರಿಗೂ ಸಮರ್ಥಿಸಿಕೊಳ್ಳಲು ಅಥವಾ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಲು ಅವಕಾಶ ನೀಡಲಾರೆ.

66

ನಾನು 10,000ಕ್ಕೂ ಹೆಚ್ಚು ಜನರಿಗೆ ಮೇಕಪ್ ತರಬೇತಿ ನೀಡಿದ್ದೇನೆ. ನೀವು ನನ್ನ ತರಗತಿಗಳಿಗೆ ಹಾಜರಾಗಿದ್ದರೆ ಅಥವಾ ನನ್ನ ಕ್ಲೈಂಟ್ ಆಗಿದ್ದರೆ, ದಯವಿಟ್ಟು ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಯನ್ನು Asmitha makeoverartistry ಗೆ Google ನಲ್ಲಿ, ಕೇವಲ ನೀವು ನನ್ನ ಸೇವೆಗಳನ್ನು ಪಡೆದಿದ್ದರೆ ಮಾತ್ರ, ಹಂಚಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮ ನಿಜವಾದ ವಿಮರ್ಶೆ ನನಗೆ ತುಂಬಾ ಮೌಲ್ಯವಾಗಿದೆ. ಕಷ್ಟದ ಸಮಯದಲ್ಲಿ ಇತರರನ್ನು ದುರ್ಬಳಕೆ ಮಾಡಿಕೊಳ್ಳುವಳಲ್ಲ.

Read more Photos on
click me!

Recommended Stories