ಜೇನು ಗೂಡು, ಚರ್ಮದ ರಂಧ್ರಗಳು ನೋಡಿದ್ರೆ ಆಗಲ್ಲ ಅಂತಾರೆ ಚಿರಂಜೀವಿ ಸೊಸೆ ಲಾವಣ್ಯ; ಏನಿದು ವಿಚಿತ್ರ ಕಾಯಿಲೆ?

Published : Mar 25, 2024, 11:42 AM IST

 ಕೊನಿಡೆಲಾ ಪ್ಯಾಮಿಲಿ ಸೊಸೆ ಲಾವಣ್ಯಗೆ ಇರುವ ಅಪರೂಪದ ಕಾಯಿಲೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
16
ಜೇನು ಗೂಡು, ಚರ್ಮದ ರಂಧ್ರಗಳು ನೋಡಿದ್ರೆ ಆಗಲ್ಲ ಅಂತಾರೆ ಚಿರಂಜೀವಿ ಸೊಸೆ ಲಾವಣ್ಯ; ಏನಿದು ವಿಚಿತ್ರ ಕಾಯಿಲೆ?

ಹಲವು ವರ್ಷಗಳ ಹಿಂದೆ ಲಾವಣ್ಯ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವಾಗ ವಿಚಿತ್ರ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕಾಯಿಲೆ ಹೆಸರು ಟ್ರಪೋಫೋಬಿಯಾ ಎನ್ನುತ್ತಾರೆ. 

26

ಇದು ಚರ್ಮದ ರಂಧ್ರಗಳು, ಜೇನು ಗೂಡು, ಕಮಲದ ಕಣ್ಣುಗಳು ರಂಧ್ರಗಳು ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುಗಳನ್ನು ನೋಡಿದರೆ ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತಾರಂತೆ. 

36

 ಸಾಕಷ್ಟು ಸಲ ಇದರಿಂದ ಹೊರ ಬರುವ ಪ್ರಯತ್ನ ಮಾಡಿದ್ದಾರೆ ಆದರೆ ಆಗಲಿಲ್ಲವಂತೆ. ಈ ವಿಚಿತ್ರ ಕಾಯಿಲೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದ್ದಂತೆ ಲಾವಣ್ಯ ಸ್ಪಷ್ಟನೆ ಕೊಟ್ಟಿದ್ದಾರೆ. 

46

ಈ ವಿಚಿತ್ರವಾದ ಕಾಯಿಲೆ ಬಗ್ಗೆ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಲಾವಣ್ಯ ಪ್ರತಿಕ್ರಿಯೆ ನೀಡಿದ್ದಾರೆ. 'ನನಗೆ ಕಾಯಿಲೆ ಇದ್ಯಾ? ನನ್ನ ಬಗ್ಗೆ ನನಗೆ ಗೊತ್ತಿರುವ ಪ್ರಕಾರ ನಾನು ತುಂಬಾ ಆರೋಗ್ಯವಾಗಿರುವೆ. ಸುಳ್ಳು ಸುದ್ದಿ ಮಾಡಬೇಡಿ' ಎಂದಿದ್ದರು.

56

6 ವರ್ಷಗಳ ಹಿಂದೆ ಮಿಸ್ಟರ್ ಅನ್ನೋ ಚಿತ್ರದಲ್ಲಿ ವರುಣ್ ಮತ್ತು ಲಾವಣ್ಯ ನಟಿಸಿದ್ದರು, ಅಲ್ಲಿಂದ ರೀಲ್‌ಗಿಂತ ರಿಯಲ್ ಲೈಫ್‌ನಲ್ಲಿ ಅವರಿಬ್ಬರ ಲವ್ ಸ್ಟೋರಿ ಶುರುವಾಯ್ತು. 

66

ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಕೊನೆಯದಾಗಿ ಹ್ಯಾಪಿ ಬರ್ತಡೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories