ಸಂಭಾವನೆ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಮತ್ತೊಂದು ಶಾಕ್‌? ಏನಿದು ಹೊಸ ವಿಷ್ಯ!

Published : Jun 07, 2025, 06:29 PM IST

ನಾನು ಪ್ರಭಾಸ್‌ ಅವರಷ್ಟೇ ಸಂಭಾವನೆ ನಿರೀಕ್ಷಿಸುತ್ತೇನೆ. ಸ್ಪಿರಿಟ್‌ ಸಿನಿಮಾ ತಂಡ ಇದಕ್ಕೊಪ್ಪದಿದ್ದಾಗ ಆ ಟೀಮ್‌ನಿಂದ ಹೊರನಡೆದೆ ಎಂಬರ್ಥದಲ್ಲಿ ದೀಪಿಕಾ ಮಾತನಾಡಿದ್ದರು.

PREV
15

ಈಗಾಗಲೇ ಪ್ರಭಾಸ್‌ ನಟನೆಯ ‘ಸ್ಪಿರಿಟ್‌’ ಸಿನಿಮಾದಿಂದ ಆಚೆ ಬಂದಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ‘ಕಲ್ಕಿ 2’ ಸಿನಿಮಾದ ಬಾಗಿಲು ಮುಚ್ಚಲಿದೆಯೇ?

25

ನಟಿ ದೀಪಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಪ್ರಭಾಸ್‌ ಅವರಿಗಿಂತ ಹೆಚ್ಚು ಅಥವಾ ಅವರಿಗೆ ಸರಿ ಸಮವಾಗಿ ನನ್ನ ತಾರಾಮೌಲ್ಯವಿದೆ. ಹೀಗಾಗಿ ನಾನು ಅವರಷ್ಟೇ ಸಂಭಾವನೆ ನಿರೀಕ್ಷಿಸುತ್ತೇನೆ. ಸ್ಪಿರಿಟ್‌ ಸಿನಿಮಾ ತಂಡ ಇದಕ್ಕೊಪ್ಪದಿದ್ದಾಗ ಆ ಟೀಮ್‌ನಿಂದ ಹೊರನಡೆದೆ’ ಎಂಬರ್ಥದಲ್ಲಿ ಮಾತನಾಡಿದ್ದರು.

35

ಅದು ಪ್ರಭಾಸ್‌ ನಾಯಕನಾಗಿರುವ ದೀಪಿಕಾ ಮುಖ್ಯಪಾತ್ರದಲ್ಲಿರುವ ‘ಕಲ್ಕಿ 2’ ಸಿನಿಮಾ ಟೀಮ್‌ ಮೇಲೂ ಪರಿಣಾಮ ಬೀರಿದಂತಿದೆ. ಸದ್ಯದಲ್ಲೇ ದೀಪಿಕಾ ಅವರಿಗೆ ಈ ಸಿನಿಮಾದಿಂದಲೂ ಗೇಟ್‌ಪಾಸ್‌ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.

45

ಆದರೆ ಸಿನಿಮಾ ಮೂಲಗಳು ಇದನ್ನು ನಿರಾಕರಿಸಿವೆ. ಈಗಿನ್ನೂ ‘ಕಲ್ಕಿ 2’ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳಷ್ಟೇ ಆರಂಭವಾಗಿದ್ದು, ದೀಪಿಕಾ ಅವರನ್ನು ಹೊರಹಾಕುವ ಬಗ್ಗೆ ಯಾವೊಂದು ಚರ್ಚೆಯೂ ನಡೆದಿಲ್ಲ ಎಂದಿವೆ.

55

ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ ಮತ್ತು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸುಮಾರು 600 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ 'ಕಲ್ಕಿ 2898 AD' ಚಿತ್ರವು ವೈಜ್ಞಾನಿಕ ಮತ್ತು ಪೌರಾಣಿಕ ಕಥಾಹಂದರವನ್ನು ಹೊಂದಿದೆ.

Read more Photos on
click me!

Recommended Stories