ಸಾಮಾನ್ಯವಾಗಿ ಹೀಗೆ ವ್ಯಾಪಾರಸ್ಥರ ಮಕ್ಕಳು ತಮ್ಮ ವ್ಯವಹಾರಗಳನ್ನೇ ನೋಡಿಕೊಳ್ಳುತ್ತಾರೆ. ಆದ್ರೆ ಜೈನಬ್ ಅದರಿಂದ ದೂರವಿದ್ದಾರೆ. ಸ್ವಂತವಾಗಿ ಬೆಳೆಯಬೇಕು ಅನ್ನೋ ಹಂಬಲ ಇದೆ. ತನ್ನದೇ ಆದ ಕಲೆಯನ್ನ ಪ್ರದರ್ಶಿಸುವ ಪ್ರಯತ್ನ ಮಾಡ್ತಿದ್ದಾರೆ.
ಅವರು ಚಿತ್ರಕಲಾವಿದೆ. ಹೊಸ ಟ್ರೆಂಡ್‌ಗಳನ್ನ ತಮ್ಮ ಕಲೆಯಲ್ಲಿ ತೋರಿಸುತ್ತಾ, ಚಿತ್ರಗಳನ್ನ ಬಿಡಿಸಿ ಪ್ರದರ್ಶಿಸುತ್ತಿದ್ದಾರೆ. ಹೈದರಾಬಾದ್‌ನಲ್ಲೂ ಹಲವು ಪ್ರದರ್ಶನಗಳನ್ನ ನೀಡಿದ್ದಾರೆ. ಹಲವು ಬಾರಿ ಎಕ್ಸಿಬಿಷನ್‌ಗಳನ್ನೂ ಏರ್ಪಡಿಸಿದ್ದಾರೆ. ಅಷ್ಟೇ ಅಲ್ಲ, ಭಾರತದ ಪ್ರಮುಖ ನಗರಗಳಲ್ಲಿ, ಇತರ ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ.