ಸೆಟ್‌ನಲ್ಲಿ ಪ್ರಭಾಸ್‌ರನ್ನ ಅನುಷ್ಕಾ ಶೆಟ್ಟಿ ಏನಂತ ಕರೀತಿದ್ರು? ನಟ ನಾಚಿ ನೀರಾಗುತ್ತಿದ್ದುದು ಏಕೆ?

Published : Oct 01, 2024, 08:17 PM IST

ಡಾರ್ಲಿಂಗ್‌ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೇಮ ಕಹಾನಿ ನಡೆಯುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಇದು ಇನ್ನೂ ಕೂಡ ಒಂದು ನಿಗೂಢತೆಯಿಂದಲೇ ಇದೆ. ಆದರೆ ಸ್ವೀಟಿ ಪ್ರಭಾಸ್‌ರನ್ನ  ಸೆಟ್‌ ನಲ್ಲಿ ಇನ್ನಿಲ್ಲದಂತೆ ಕಾಡುತ್ತಿದ್ದರಂತೆ.  

PREV
18
ಸೆಟ್‌ನಲ್ಲಿ ಪ್ರಭಾಸ್‌ರನ್ನ ಅನುಷ್ಕಾ ಶೆಟ್ಟಿ ಏನಂತ ಕರೀತಿದ್ರು? ನಟ ನಾಚಿ ನೀರಾಗುತ್ತಿದ್ದುದು ಏಕೆ?

ಸೆಟ್‌ನಲ್ಲಿ ಪ್ರಭಾಸ್‌ರನ್ನ ಅನುಷ್ಕಾ ಏನಂತ ಕರೀತಿದ್ರು ಗೊತ್ತಾ? ಪಾಪ ಡಾರ್ಲಿಂಗ್‌ ತಲೆ ಎತ್ತೋ ಪರಿಸ್ಥಿತಿಯೇ ಇರಲಿಲ್ಲ! ಡಾರ್ಲಿಂಗ್‌ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೇಮಕಹಾನಿ ನಡೆಯುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಇದು ಇನ್ನೂ  ನಿಗೂಢವಾಗಿದೆ. ಆದರೆ ಸ್ವೀಟಿ ಪ್ರಭಾಸ್‌ರನ್ನ ಅನುಷ್ಕಾ ಕಾಡುತ್ತಿದ್ದರಂತೆ. ಆ ಕಥೆ ಏನೆಂದು ನೋಡೋಣ. 

28

ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಬಿಲ್ಲಾ` ಚಿತ್ರದೊಂದಿಗೆ ಈ ಜೋಡಿಯ ಜರ್ನಿ ಆರಂಭವಾಯಿತು. ಈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಒಂದೆಡೆ ಗೆಳತಿಯಾಗಿ, ಇನ್ನೊಂದೆಡೆ ನೆಗೆಟಿವ್‌ ಶೇಡ್ಸ್‌ ಇರುವ ಪಾತ್ರದಲ್ಲಿ ಅನುಷ್ಕಾ ಮಿಂಚಿದ್ದಾರೆ. ಈ ಚಿತ್ರ ಸರಾಸರಿ ಪ್ರದರ್ಶನ ಕಂಡಿತು. ಆದರೆ ನಂತರ ಬಂದ `ಮಿರ್ಚಿ` ಚಿತ್ರ ಉತ್ತಮ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಈ ಜೋಡಿಯನ್ನು ನೋಡಿದ ನಂತರ, ಎಲ್ಲರೂ ಅವರನ್ನು ಉತ್ತಮ ಜೋಡಿ ಎಂದು ಬಣ್ಣಿಸಿದರು. ಇಬ್ಬರದ್ದೂ ಎತ್ತರದ ವ್ಯಕ್ತಿತ್ವ ಒಂದೇ ರೀತಿ ಇರುವುದರಿಂದ ಅವರನ್ನು ಅತ್ಯುತ್ತಮ ಜೋಡಿ ಎಂದು ಕರೆಯಲಾಗುತ್ತಿತ್ತು. ಇದಲ್ಲದೆ, ಇಬ್ಬರ ನಡುವೆ ಉತ್ತಮ ಸ್ನೇಹವೂ ಇದ್ದುದರಿಂದ ಹಲವಾರು ವದಂತಿಗಳು ಹುಟ್ಟಿಕೊಂಡವು. 

38

ಪ್ರಭಾಸ್‌ ಮತ್ತು ಅನುಷ್ಕಾ ಸತತವಾಗಿ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದರಿಂದ, ಇಬ್ಬರ ನಡುವೆ ಪ್ರೇಮಕಹಾನಿ ನಡೆಯುತ್ತಿದೆ ಎಂಬ ವದಂತಿಗಳು ಹರಡಲು ಪ್ರಾರಂಭವಾಯಿತು. ಆಪ್ತವಾಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಇದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತು. ಪ್ರಭಾಸ್‌ ಅವರು ಅನುಷ್ಕಾ ಬಗ್ಗೆ ಮಾತನಾಡಬೇಕಾದಾಗ, ಅವರನ್ನು ಹಾಡಿ ಹೊಗಳುತ್ತಿದ್ದರು. ಅವರು ತಮ್ಮ ಅತ್ಯುತ್ತಮ ಸಹನಟಿ ಎಂದು ಹಲವು ಬಾರಿ ಹೇಳಿದ್ದಾರೆ. ಅವರ ಸೌಂದರ್ಯದ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಚರ್ಚೆ ಆರಂಭವಾಯಿತು. ಇದಲ್ಲದೆ, ಈ ಬಗ್ಗೆ ಇಬ್ಬರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಅವರಿಗೂ ಸ್ಪಷ್ಟವಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಆ ವದಂತಿಗಳು ಇಂದಿಗೂ ಕೇಳಿಬರುತ್ತಲೇ ಇವೆ.

48

 ಪ್ರಭಾಸ್‌ ಮತ್ತು ಅನುಷ್ಕಾರ ಹಳೆಯ ವಿಡಿಯೋ ವೈರಲ್‌: ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಹಲವು ಬಾರಿ ಸುದ್ದಿಗಳು ಬಂದವು. ಮದುವೆ ಫಿಕ್ಸ್‌, ಡೇಟ್‌ ಫಿಕ್ಸ್‌ ಎಂದು ವದಂತಿಗಳು ಹರಿದಾಡುತ್ತಲೇ ಇದ್ದವು. ಆಗಾಗ ಈ ವದಂತಿಗಳು ಹೊಸದಾಗಿ ಕೇಳಿ ಬರುತ್ತಲೇ ಇದ್ದವು. ಆದರೆ ಪ್ರಭಾಸ್‌ ಮತ್ತು ಅನುಷ್ಕಾ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಈ ವದಂತಿಗಳನ್ನು ಲೆಕ್ಕಿಸದೆ ಅವರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಈ ನಡುವೆ, ಅವರಿಬ್ಬರಿಗೆ ಸಂಬಂಧಿಸಿದ ಒಂದು ವಿಷಯ ಇದೀಗ ವೈರಲ್‌ ಆಗುತ್ತಿದೆ. ಪ್ರಭಾಸ್‌ ಮತ್ತು ಅನುಷ್ಕಾ ಅವರ ಹಳೆಯ ಸಂಭಾಷಣೆ ವೈರಲ್‌ ಆಗುತ್ತಿದೆ. ಪ್ರಭಾಸ್‌ರನ್ನು ಅನುಷ್ಕಾ ಕಾಡುತ್ತಿರುವುದು ಇದರಲ್ಲಿ ಹೈಲೈಟ್‌ ಆಗಿದೆ. ಏನಿದು ಆ ಕಥೆ ಎಂದು ನೋಡುವುದಾದರೆ,

58

 ಬಾಹುಬಲಿ  ಸೆಟ್‌ನಲ್ಲಿ ಪ್ರಭಾಸ್‌ರನ್ನು ಕಾಡಿದ ಅನುಷ್ಕಾ: ಪ್ರಭಾಸ್‌ ಮತ್ತು ಅನುಷ್ಕಾ ಜೋಡಿಯಾಗಿ, ಪ್ರೇಮಿಗಳಾಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನ್‌ಸ್ಕ್ರೀನ್‌ನಲ್ಲಿ ಪ್ರಣಯವನ್ನು ಅದ್ಭುತವಾಗಿ ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಅದಕ್ಕಾಗಿಯೇ ಅವರನ್ನು ಅತ್ಯುತ್ತಮ ಜೋಡಿ ಎಂದು ಕರೆಯಲಾಗುತ್ತದೆ. ಆದರೆ ಸೆಟ್‌ನಲ್ಲಿ ಅನುಷ್ಕಾ   ಪ್ರಭಾಸ್‌ರನ್ನು ಕಾಡುತ್ತಿದ್ದರಂತೆ. ಎಲ್ಲರ ಮುಂದೆ ಅವರನ್ನು ಟೀಸ್‌ ಮಾಡುತ್ತಿದ್ದರಂತೆ. ಡಾರ್ಲಿಂಗ್‌ ಪ್ರಭಾಸ್‌ ತಲೆ ಎತ್ತಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಂತೆ. ಪ್ರಭಾಸ್‌ರನ್ನು ಅನುಷ್ಕಾ,  ನನ್ನ ಬಾಬು ಎಲ್ಲಿದ್ದಾರೆ (ಮಗ) ಎಂದು ಕರೆಯುತ್ತಿದ್ದದೇ ಇದಕ್ಕೆ ಕಾರಣ. ಪ್ರೇಮಿಯಾಗಿ ನಟಿಸುತ್ತಿದ್ದ ಪ್ರಭಾಸ್‌ರನ್ನು ಅನುಷ್ಕಾ ಮಗ ಎಂದು ಏಕೆ ಕರೆಯುತ್ತಿದ್ದರು? ಎಂಬುದು ಎಲ್ಲರಿಗೂ ಅಚ್ಚರಿ ಮೂಡಿಸಿತು.  

68

ಅನುಷ್ಕಾ ಮತ್ತು ಪ್ರಭಾಸ್‌ ಎಲ್ಲಾ ಸಿನಿಮಾಗಳಲ್ಲಿಯೂ ಜೋಡಿಯಾಗಿ ನಟಿಸಿದ್ದಾರೆ. ಆದರೆ `ಬಾಹುಬಲಿ`ಯಲ್ಲಿ ಮಾತ್ರ ಜೋಡಿಯೊಂದಿಗೆ ತಾಯಿ-ಮಗನಾಗಿಯೂ ನಟಿಸಿದ್ದಾರೆ. ಮೊದಲಿಗೆ ಮಹಿಷ್ಮತಿ ಸಾಮ್ರಾಜ್ಯದ ಯುವರಾಜ ಅಮರೇಂದ್ರ ಬಾಹುಬಲಿಯಾಗಿ ಪ್ರಭಾಸ್‌ ಕಾಣಿಸಿಕೊಳ್ಳುತ್ತಾರೆ. ಅವರನ್ನು ಪ್ರೀತಿಸಿ ಮದುವೆಯಾಗುವ ದೇವಸೇನೆಯಾಗಿ ಅನುಷ್ಕಾ ನಟಿಸಿದ್ದಾರೆ. ಆದರೆ ಇವರಿಬ್ಬರಿಗೂ ಮಗ ಹುಟ್ಟುತ್ತಾನೆ. ಮಹೇಂದ್ರ ಬಾಹುಬಲಿ. ಹೀಗೆ ಎರಡನೇ ಪಾತ್ರದಲ್ಲಿ ಅನುಷ್ಕಾ ಅವರಿಗೆ ಮಗನಾಗಿ ಪ್ರಭಾಸ್‌ ಕಾಣಿಸಿಕೊಳ್ಳುತ್ತಾರೆ. ಇದನ್ನೇ ನೆಪ ಮಾಡಿಕೊಂಡು ಅನುಷ್ಕಾ ಸೆಟ್‌ನಲ್ಲಿ ಡಾರ್ಲಿಂಗ್‌ರನ್ನು ಕಾಡುತ್ತಿದ್ದರಂತೆ. ಪ್ರಭಾಸ್‌ ಕಾಣಿಸದಿದ್ದರೆ ನನ್ನ ಮಗ ಎಲ್ಲಿದ್ದಾನೆ ಎಂದು ಕರೆಯುತ್ತಿದ್ದರಂತೆ. ಎಲ್ಲರ ಮುಂದೆ ಹೀಗೆ ಮಾಡುತ್ತಿದ್ದರಂತೆ. ಇದರಿಂದ ಡಾರ್ಲಿಂಗ್‌ ನಾಚಿಕೆಪಡುತ್ತಿದ್ದರಂತೆ.

78

ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರಭಾಸ್‌ ತನ್ನನ್ನು ಕಾಡುತ್ತಿದ್ದರು ಎಂದು, ಆದರೆ ತಾನು ಅವರನ್ನು ಮಗ ಎಲ್ಲಿದ್ದಾನೆ ನನ್ನ ಮಗ ಎಲ್ಲಿದ್ದಾನೆ ಎಂದು ಕಾಡುತ್ತಿದ್ದೆ ಎಂದು ಅನುಷ್ಕಾ ಹೇಳಿದ್ದಾರೆ. `ಬಾಹುಬಲಿ` ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ನೀಡಿದ ಪ್ರಚಾರ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇದೀಗ ಅದು ವೈರಲ್‌ ಆಗುತ್ತಿದೆ. 

88

ಇದರ ನಡುವೆ ಅನುಷ್ಕಾ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಬ್ಬ ಉದ್ಯಮಿಯನ್ನು ಮದುವೆಯಾಗಲಿದ್ದಾರಂತೆ. ಈಗಾಗಲೇ ಎರಡೂ ಕುಟುಂಬಗಳ ನಡುವೆ ಮಾತುಕತೆಗಳು ನಡೆದಿವೆ. ಮದುವೆ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಎಷ್ಟು ಸತ್ಯ ಎಂಬುದು ತಿಳಿದುಬರಬೇಕಿದೆ. ಇದು ಕೂಡ ನಿಯಮಿತವಾಗಿ ಹರಿದಾಡುವ ವದಂತಿಯೇ ಅಥವಾ ಇದರಲ್ಲಿ ಸತ್ಯವಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಪ್ರಸ್ತುತ ಅನುಷ್ಕಾ.. ಕ್ರಿಶ್‌ ನಿರ್ದೇಶನದ `ಘಾಟಿ` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಭಾಸ್‌ `ದಿ ರಾಜಾ ಸಾಬ್‌` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಾರರ್ ಕಾಮಿಡಿ ಚಿತ್ರವಾಗಿದೆ. ಅಲ್ಲದೆ, ಹನು ರಾಘವಪುಡಿ ಅವರ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ `ಪೌಜಿ` ಎಂಬ ಶೀರ್ಷಿಕೆ ಇಡಲಾಗಿದೆ. ಇವುಗಳ ಜೊತೆಗೆ ಸಂದೀಪ್‌ ರೆಡ್ಡಿ ವಂಗಾ ಅವರೊಂದಿಗೆ `ಸ್ಪಿರಿಟ್‌` ಚಿತ್ರವನ್ನು ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿ ಇದೆ. ಅಷ್ಟೇ ಅಲ್ಲದೆ `ಸಲಾರ್‌ 2`, `ಕಲ್ಕಿ 2` ಚಿತ್ರಗಳನ್ನೂ ಮಾಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories