ಮೊದಲ ಸಿನಿಮಾದ ಯಶಸ್ಸಿನ ಅಹಂಕಾರದಿಂದ ಹಿರಿಯ ನಟನ ಕೆಂಗಣ್ಣಿಗೆ ಗುರಿಯಾಗಿದ್ದ ಸಲ್ಮಾನ್‌ ಖಾನ್‌!

First Published | Jan 12, 2023, 5:40 PM IST

ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ (Salman Khan) ಕಳೆದ 34 ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 90 ರ ದಶಕದಲ್ಲಿ ಸಲ್ಮಾನ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅವರ ನಡವಳಿಕೆಯಿಂದ ಅನೇಕ ಬಾರಿ ಇತರ ನಟರು ಅವರ ವಿರೋಧ ತಿರುಗಿ ಬಿದ್ದಿದ್ದರು. 1991ರಲ್ಲಿ ತೆರೆಕಂಡ ‘ಸನಮ್ ಬೇವಾಫಾ’ ಸಿನಿಮಾದಲ್ಲೂ ಇಂಥದ್ದೇ ಘಟನೆ ನಡೆದಿದೆ.

'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ನಾಯಕ ನಟನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಲ್ಮಾನ್ ಅವರ ಈ ಚಿತ್ರವು ಸೂಪರ್ ಹಿಟ್ ಆಗಿತ್ತು, ಅದರ ಕಾರಣದಿಂದಾಗಿ ಅವರು ಸ್ಟಾರ್ ಪಟ್ಟವನ್ನು ಗಳಿಸಿದ್ದರು.  

ಇದರ ನಂತರ ಸಲ್ಮಾನ್‌ಗೆ 'ಸನಮ್ ಬೇವಾಫಾ' ಚಿತ್ರ ಸಿಕ್ಕಿತು, ಅದರಲ್ಲಿ ಹೊಸ ನಟಿ ಚಾಂದಿನಿ ಅವರೊಂದಿಗೆ ನಟಿಸಿದರು. ಈ ಚಿತ್ರದಲ್ಲಿ ಡ್ಯಾನಿ ಡೆನ್ಜಾಂಗ್ಪಾ ಮತ್ತು ಪುನೀತ್ ಇಸ್ಸಾರ್ ಕೂಡ ನಟಿಸಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಯಶಸ್ಸಿನ ಪರಿಣಾಮ ಅವನ ವರ್ತನೆ ಮೇಲೂ ಕಾಣಿಸುತ್ತಿತ್ತು. 

Tap to resize

ಚಿತ್ರದಲ್ಲಿ ಸಲ್ಮಾನ್ ತಂದೆಯ ಪಾತ್ರವನ್ನು ಡ್ಯಾನಿ ನಿರ್ವಹಿಸಿದ್ದಾರೆ. ಡ್ಯಾನಿ ಬಾಲಿವುಡ್‌ನ ಹಿರಿಯ ನಟರಾಗಿದ್ದರೆ, ಸಲ್ಮಾನ್ ಚಿತ್ರರಂಗಕ್ಕೆಆಗಷ್ಟೇ ಹೊಸ ಪ್ರವೇಶವನ್ನು ಪಡೆದಿದ್ದರು.

 ಒಂದು ದಿನ ಡ್ಯಾನಿ ಮತ್ತು ಸಲ್ಮಾನ್ ಚಿತ್ರದ ದೃಶ್ಯವೊಂದರಲ್ಲಿ ಒಟ್ಟಿಗೆ ಶೂಟ್ ಮಾಡಬೇಕಿತ್ತು. ಸಮಯ ಪಾಲನೆಗೆ ಹೆಸರು ವಾಸಿಯಾಗಿದ್ದ ಡ್ಯಾನಿ  ಅವರು ಸಮಯಕ್ಕೆ ಸೆಟ್ ತಲುಪಿದ್ದರು. ಆದರೆ, ಬಹಳ ಹೊತ್ತಾದರೂ ಸಲ್ಮಾನ್ ಖಾನ್ ಬರಲಿಲ್ಲ. ತಡವಾಗಿ ಸಲ್ಮಾನ್ ಸೆಟ್ ತಲುಪಿದಾಗ ಡ್ಯಾನಿ ಕೋಪಗೊಂಡರು ಮತ್ತು ಸೆಟ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ಸಲ್ಮಾನ್‌ಗೆ ಶಿಸ್ತು ಕಲಿಸಿದ್ದಾರೆ.

ಆದರೆ ಸಲ್ಮಾನ್ ಮೌನವಾಗಿರದೆ  ಡ್ಯಾನಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಸಲ್ಮಾನ್‌ನ ಕೃತ್ಯದ ಬಗ್ಗೆ ಡ್ಯಾನಿ ತುಂಬಾ ಕೋಪಗೊಂಡಿದ್ದರು. ಅವರು ಮುಂದಿನ ಯಾವುದೇ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದರು. ಸುಮಾರು 23 ವರ್ಷಗಳ ಕಾಲ ಇಬ್ಬರೂ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.
 

ಆದರೆ, ನಂತರ 2014 ರಲ್ಲಿ, ಡ್ಯಾನಿ 'ಜೈ ಹೋ' ಚಿತ್ರಕ್ಕಾಗಿ ತಮ್ಮ ನಿಯಮವನ್ನು ಮುರಿದರು. ಈ ಚಿತ್ರದಲ್ಲಿ ಇಬ್ಬರೂ 23 ವರ್ಷಗಳ ನಂತರ ಮತ್ತೆ ಒಟ್ಟಿಗೆ ಕಾಣಿಸಿಕೊಂಡರು. ಅಷ್ಟೊತ್ತಿಗಾಗಲೇ ಡ್ಯಾನಿ ಕೂಡ ತನ್ನ ಕೋಪವನ್ನು ಮರೆತಿದ್ದರು.

 ಡ್ಯಾನಿ ಕೆಲಸದ ಬಗ್ಗೆ ತುಂಬಾ ಕಟ್ಟುನಿಟ್ಟಾದ ಮತ್ತು ಶಿಸ್ತಿನ ನಟ.  ಭಾನುವಾರದಂದು ಶೂಟ್ ಮಾಡುವುದಿಲ್ಲ ಎಂಬ ನಿಯಮವಿದೆ. ಸಿಕ್ಕಿಮೀಸ್ ರಾಜಕುಮಾರಿ ಗವಾರನ್ನು ಮದುವೆಯಾದ ಡ್ಯಾನಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ರಿನ್ಜಿಂಗ್ ಮತ್ತು ಮಗಳು ಪೇಮಾ.

1971 ರ 'ಮೇರೆ ಅಪ್ನೆ' ಚಿತ್ರದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದ  ಡ್ಯಾನಿಗೆ 1972ರ ಬಿಆರ್ ಇಶಾರ ಅವರ ‘ಝರೂಟ್’ ಸಿನಿಮಾದಿಂದ ಅವರಿಗೆ ಮನ್ನಣೆ ಸಿಕ್ಕಿತು. ಈ ಚಿತ್ರದಲ್ಲಿ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಾದ ನಂತರ ಡ್ಯಾನಿ ಹಿಂತಿರುಗಿ ನೋಡಲೇ ಇಲ್ಲ.

ಕೊನೆಯದಾಗಿ 2022 ರ ಅಮಿತಾಬ್‌ ಬಚ್ಚನ್‌ ಅವರ ಜೊತೆ ಉಂಚೈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಡ್ಯಾನಿ. ಇದುವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಆರಂಭದಲ್ಲಿ ಡ್ಯಾನಿ ಕೆಲಸ ಅರಸಿ ನಿರ್ಮಾಪಕರ ಬಳಿ ಹೋದಾಗ ನಿನಗೆ ಯಾರೂ ಹೀರೋ ಕೆಲಸ ಕೊಡಲು ಸಾಧ್ಯವಿಲ್ಲ. ನಿನಗೆ ಕೆಲಸ ಸಿಗದಿದ್ದಾಗ ನನ್ನ ಬಳಿ ಬಾ, ನಿನ್ನನ್ನು ಕಾವಲುಗಾರನನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಅಪಹಾಸ್ಯ ಮಾಡಿದ್ದರು.

Latest Videos

click me!