ಸಲ್ಮಾನ್ ಖಾನ್ ಕರಾಳ ಮುಖ ಜಗಜ್ಜಾಹೀರವಾಗಬೇಕು: ಮತ್ತೊಂದು ಬೇಡಿಕೆ ಇಟ್ಟ ಸೋಮಿ ಖಾನ್
ನಟ ಸಲ್ಮಾನ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡ್ತಿರೋ ನಟಿ ಸೋಮಿ ಅಲಿಯ ಬೇಡಿಕೆ ಏನು? ಅಷ್ಟಕ್ಕೂ ಸಲ್ಮಾನ್ ಖಾನ್ ಜೊತೆ ಇವರಿಗೆ ಇದ್ದಿದ್ದು ಅದೆಂಥ ಸಂಬಂಧ?
57 ವರ್ಷದ ಸಲ್ಮಾನ್ ಖಾನ್ ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಎಂದೇ ಹೆಸರು ಪಡೆದವರು. ಹಾಗೆಂದು ಇವರ ವಿರುದ್ಧ ಹೆಣ್ಣುಮಕ್ಕಳ ಆರೋಪವೇನೂ ಹೊಸತಲ್ಲ. ಈಗ ಕೆಲ ದಿನಗಳಿಂದ ನಟಿ ಸೋಮಿ ಅಲಿಯದ್ದೇ ಚರ್ಚೆ. ಬಾಲಿವುಡ್ ಅಂಗಳದಲ್ಲಿ ಸೋಮಿ ಮತ್ತು ಸಲ್ಮಾನ್ ಸುದ್ದಿ ಹಾಟ್ ಟಾಪಿಕ್ (Hot Topic) ಆಗಿದೆ. ಸಲ್ಮಾನ್ ಖಾನ್ನ ಮಾಜಿ ಗೆಳತಿಯೂ ಆಗಿರುವ ಸೋಮಿ, ಸಲ್ಮಾನ್ ವಿರುದ್ಧ ಮಾಡಿರುವ ಗಂಭೀರ ಆರೋಪಗಳು ಕೆಲ ದಿನಗಳಿಂದ ಭಾರಿ ಚರ್ಚೆಯಲ್ಲಿದೆ.
ಇವೆಲ್ಲಾ ಚರ್ಚೆಗಳ ನಡುವೆಯೇ ಈಗ ಸೋಮಿ (Somi Khan) ಹೊಸ ಪ್ರಸ್ತಾಪ ಮುಂದಿಟ್ಟಿದ್ದಾರೆ. ಎಂಟು ವರ್ಷಗಳ ಕಾಲ ತಮ್ಮನ್ನು ಸಲ್ಮಾನ್ ಖಾನ್ ಬಳಸಿಕೊಂಡ ಎಂದು ಹೇಳ್ತಿರೋ ಸೋಮಿ ಈಗ ಇಟ್ಟಿರೋ ಬೇಡಿಕೆ ಭಾರಿ ಸುದ್ದಿಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಥಹರೇವಾರಿ ಚರ್ಚೆಯೂ ಆಗುತ್ತಿದೆ.
ಪಠಾಣ್ ಫ್ಯಾನ್ಸ್‌ಗೆ ಡಬಲ್ ಧಮಾಕಾ: ಒಂದೇ ಬಾರಿ ಎರಡೆರಡು ಟ್ರೇಲರ್?
ಅಷ್ಟಕ್ಕೂ ಸೋಮಿ, ಇಟ್ಟಿರುವ ಬೇಡಿಕೆ ಬಹಳ ದೊಡ್ಡದೇನಲ್ಲ, ತನಗೆ ಚಿತ್ರಹಿಂಸೆ ಕೊಟ್ಟು ಬದುಕನ್ನು ನರಕ ಮಾಡಿರುವ ಸಲ್ಮಾನ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎನ್ನುವುದು ಸೋಮಿಯ ಬೇಡಿಕೆ. ಒಂದು ವೇಳೆ ಹೀಗೆ ಮಾಡದಿದ್ದರೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದೂ ಸೋಮಿ ಬೆದರಿಕೆ ಹಾಕಿದ್ದಾರೆ. "ಸಲ್ಮಾನ್ ಖಾನ್ ಎಂದಿಗೂ ಪರ್ಸನಲ್ ಆಗಿ ಕ್ಷಮೆ ಕೇಳಲಿಲ್ಲ. ಈಗ ಆತನ ಕರಾಳ ಮುಖ ಜಗಜ್ಜಾಹೀರವಾಗಿದೆ. ಹೆಣ್ಣುಮಕ್ಕಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಸಲ್ಮಾನ್, ಈಗ ಎಲ್ಲರೆದುರೂ ಕ್ಷಮೆ ಕೇಳಬೇಕು, ನನಗೆ ಆಗಿರುವ ಅನ್ಯಾಯ ಜಗಜ್ಜಾಹೀರ ಆಗಬೇಕು" ಎಂದಿದ್ದಾರೆ ನಟಿ (Actress).
ಅಷ್ಟಕ್ಕೂ ಯಾರೀ ಸೋಮಿ? ಏನಿದು ಗಲಾಟೆ? ಸಲ್ಮಾನ್ ಖಾನ್ಗೂ ಈಕೆಗೂ ಏನು ಸಂಬಂಧ? ಕ್ಷಮೆಕೋರುವಂಥ ಕೆಲಸ ಸಲ್ಲುಭಾಯಿ ಮಾಡಿದ್ದಾದರೂ ಏನು ಎಂಬ ಬಗ್ಗೆ ಒಂದಿಷ್ಟು ಡಿಟೇಲ್ಸ್ ಇಲ್ಲದೆ...
ಮೂಲತಃ ಪಾಕಿಸ್ತಾನಿ (Pakistani) ನಟಿಯಾಗಿರುವ ಸೋಮಿ ಅಲಿ ಹುಟ್ಟಿದ್ದು ಕರಾಚಿಯಲ್ಲಿ. 1976ರಲ್ಲಿ ಹುಟ್ಟಿರುವ ಈಕೆಗೆ ಈಗ 47 ವರ್ಷ ವಯಸ್ಸು. ಸೋಮಿ 16ನೇ ವಯಸ್ಸಿನಲ್ಲಿಯೇ ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದರಂತೆ. ಸಲ್ಮಾನ್ ಖಾನ್ರನ್ನು ಹುಚ್ಚು ಹುಚ್ಚಾಗಿ ಪ್ರೀತಿಸುತ್ತಿದ್ದ ಈಕೆ ಅವರನ್ನು ಮದುವೆಯಾಗುವುದಕ್ಕಾಗಿಯೇ ಅಮೆರಿಕದಿಂದ ಬಂದಿದ್ದೆ ಎಂದಿದ್ದಾರೆ. ಕೊನೆಗೂ ಅವರ ಆಸೆ ಈಡೇರಿದ್ದು, ಸಲ್ಮಾನ್‌ರೊಂದಿಗೆ ತೆರೆ ಹಂಚಿಕೊಂಡರು. 1993ರಲ್ಲಿ ಕ್ರಿಶನ್ ಅವತಾರ್ ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ಸೋಮಿ, ಅದಾದ ಬಳಿಕ ಅಂತ್, ಯಾರ್ ಗದ್ದಾರ್, ತೀಸರಾ ಕೌನ್, ಆವೋ ಪ್ಯಾರ್ ಕರನೇ, ಆಂದೋಲನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 1993ರಿಂದ 1999ರ ವರೆಗೂ ಇವರು ರಿಲೇಷನ್‌ಶಿಪ್ (Relationship) ನಲ್ಲಿದ್ದರು.
ಟ್ರೇಲರ್ ರಿಲೀಸ್ ಆಗಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದ ಜಾನ್ವಿ ಕಪೂರ್; ಹಾಟ್ ಫೋಟೋ ವೈರಲ್
ಬಳಿಕ ಸಿನಿಮಾದಿಂದ ದೂರ ಸರಿದು, ಅಮೆರಿಕದಲ್ಲಿ ನೋ ಮೋರ್ ಟಿಯರ್ಸ್ ಎಂಬ ಫೌಂಡೇಷನ್ ಶುರು ಮಾಡಿ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸುಮ್ಮನಿದ್ದ ಸೋಮಿ ಇದ್ದಕ್ಕಿದ್ದಂತೆಯೇ ಮುನ್ನೆಲೆಗೆ ಬಂದಿದ್ದಾರೆ. ಸಲ್ಮಾನ್ ಖಾನ್ ವಿರುದ್ಧ 90ರ ದಶಕದಲ್ಲಿಯೇ ಸಾಕಷ್ಟು ಆರೋಪ ಮಾಡಿದ್ದರು ಸೋಮಿ. ಆದರೆ ಆಗ ತಾವು ಹೇಳಿದ್ದು ಪ್ರಚಾರ ಆಗಲೇ ಇಲ್ಲ ಎಂಬ ಕೊರಗು ಈ ನಟಿಯದ್ದು. ಅದನ್ನು ಖುದ್ದು ಅವರೇ ಈಗ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಸೋಮಿ ಬಾಯಲ್ಲೇ ಸಲ್ಮಾನ್ ಖಾನ್ ವಿರುದ್ಧದ ಆರೋಪ ಕೇಳುವುದಾದರೆ, 'ಸಲ್ಮಾನ್ ಖಾನ್ ತನ್ನನ್ನು ಬೇಕೆಂದ ಹಾಗೆಲ್ಲಾ ಬಳಸಿಕೊಂಡ, ಅತ್ಯಾಚಾರ ಮಾಡಿದ, ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ, ನನ್ನ ಮೇಲೆ ಮದ್ಯವನ್ನು ಸುರಿದಿದ್ದ. ಹಲ್ಲೆ ನಡೆಸಿದ್ದ. ಆತನ ಹೊಡೆತದಿಂದ ಗಾಯಗಳಾಗಿದ್ದವು' ಎನ್ನುವುದು.
'ಸಲ್ಮಾನ್ ಖಾನ್ ಹೊಡೆದಾಗ ಆದ ಗಾಯಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುತ್ತಿದ್ದೆ. ನಾನು ಸ್ಟುಡಿಯೋಗೆ ಹೋದಾಗ ನಿರ್ಮಾಪಕರು ಗಮನಿಸುತ್ತಿದ್ದರು. ಬೇಕಿದ್ದರೆ ಅವರನ್ನೇ ಕೇಳಿ" ಎಂದಿರೋ ಸೋಮಿ "ಅವನೊಂದಿಗೆ ಎಂಟು ವರ್ಷ ಕಳೆದಿದ್ದೆ. ಅವುಗಳು ನನ್ನ ಪಾಲಿಗೆ ಅತ್ಯಂತ ಕೆಟ್ಟ ದಿನಗಳು. ಆತನಿಗೆ ಹಲವಾರು ಅಫೇರ್‌ಗಳಿವೆ. ಆದರೂ ನನ್ನನ್ನು ಬಳಸಿಕೊಂಡ" ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಆಕ್ಟೀವ್ ಆಗಿರುವ ಹಿನ್ನೆಲೆಯಲ್ಲಿ ಈಗ ಅದನ್ನು ಹೇಳಿಕೊಳ್ಳುತ್ತಿರುವುದಾಗಿ ಸೋಮಿ ಹೇಳಿದ್ದಾರೆ. ಇಷ್ಟೆಲ್ಲಾ ಹಿಂಸೆ ಕೊಟ್ಟಿರುವ ಸಲ್ಮಾನ್ ಖಾನ್ ಬಹಿರಂಗವಾಗಿ ಕ್ಷಮೆ (Apology) ಕೋರಬೇಕು ಎನ್ನುವುದು ಅವರ ಬೇಡಿಕೆ. ಅಂದಹಾಗೆ ಸೋಮಿ, ಅತ್ಯಾಚಾರ ಹಾಗೂ ಕೌಟುಂಬಿಕ ಹಿಂಸೆಗೆ ಒಳಗಾದ ಸಂತ್ರಸ್ತರಿಗಾಗಿ ಎನ್‌ಜಿಒವನ್ನು ಸೋಮಿ ನಡೆಸುತ್ತಿದ್ದಾರೆ. 'ನಾನು ನಿಂದನೆಗೆ ಒಳಗಾದವರಿಗೆ ಹಾಗೂ ಸಂತ್ರಸ್ತರಿಗಾಗಿ ಎನ್‌ಜಿಒ(NGO)ವನ್ನು ನಡೆಸುತ್ತಿದ್ದು, ನನ್ನ ಕಥೆ ಕೂಡ ಅವರ ಕಥೆಗಿಂತ ಬೇರೆಯಾಗಿಲ್ಲ,' ಎಂದಿರುವ ಸೋಮಿ, 'ಈಗ ನಿಜ ಸುದ್ದಿಯನ್ನು ನಿಮ್ಮೆಲ್ಲರ ಮುಂದೆ ತಂದಿದ್ದೇನೆ. ನನಗೆ ನ್ಯಾಯ ಬೇಕಿದೆ. ಬೇರೆ ಏನೂ ಮಾಡಲು ಆಗುವುದಿಲ್ಲ. ಆದ್ದರಿಂದ ಈಗಲಾದರೂ ಎಲ್ಲರ ಎದುರು ಸಲ್ಮಾನ್ ಖಾನ್ ಕ್ಷಮೆ ಕೋರಬೇಕು,' ಎಂದಿದ್ದಾರೆ.