ಅಮಿತಾಭ್ ಬಚ್ಚನ್ ಧರ್ಮಪತ್ನಿ, ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಅವರಿಗೆ ಇರುವ ಸಿಡುಕಿನ ಸ್ವಭಾವದ ವಿಡಿಯೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ತಳ್ಳುವುದರಿಂದ ಹಿಡಿದು, ಯಾರಾದರೂ ಮಾತನಾಡಿಸಲು ಬಂದರೂ ಗರಂ ಆಗುತ್ತಾರೆ.
28
ಹೋದಲ್ಲಿ ಬಂದಲ್ಲಿ ಆಕ್ರೋಶ
ಸಾರ್ವಜನಿಕ ಸ್ಥಳಗಳಲ್ಲಿ ಹೋದಾಗ, ಹತ್ತಿರ ಅಭಿಮಾನಿಗಳು ನಿಂತರೆ ಅಲ್ಲಿಯೇ ಎಗರಾಡುತ್ತಾರೆ. ಸಂಸತ್ತಿನಲ್ಲಿಯೂ ಹಲವಾರು ಬಾರಿ ರೇಗಾಡುವುದು, ಕೂಗಾಡುವುದನ್ನು ನೋಡಬಹುದು. ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಬಂದರಂತೂ ಮುಗಿದೇ ಹೋಯ್ತು. ಅವರನ್ನು ನೂಕಿ ಕೆಡವಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ ಜಯಾ.
38
ಪಾರ್ಟಿಯಲ್ಲಿ ಫುಲ್ ಕಿಡಿ
ಒಮ್ಮೆ ಜಯ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ಒಟ್ಟಿಗೆ ಪಾರ್ಟಿಗೆ ಹಾಜಾರಾಗಿದ್ದರು. ಹಿಂದಿನಿಂದ ಫೋಟೋಗ್ರಾಫರ್ ಐಶ್ವರ್ಯ ರೈಗೆ 'ಆಶ್ ಆಶ್' ಎಂದು ಧ್ವನಿ ಕರೆದಾಗ ಕೋಪಗೊಂಡ ಜಯಾ ಅಶ್ ಅಶ್ ಎಂದು ಕರೆಯುತ್ತಿಯಾ? ಐಶ್ವರ್ಯಾ ಜಿ ಅಥವಾ ಶ್ರೀಮತಿ ಬಚ್ಚನ್ ಎಂದು ಹೇಳು ಎಂದು ಫೋಟೋಗ್ರಾಫರ್ ಮೇಲೆ ಸಿಡುಕಿದ್ದರು.
ಅಷ್ಟೇ ಅಲ್ಲ, ಹಲವಾರು ಬಾರಿ ಜಯ ಬಚ್ಚನ್ ಮಾಧ್ಯಮಗಳ ಮೇಲೂ ಸಹ ಸಿಟ್ಟಾಗಿದ್ದಾರೆ. ಇದೇ ಕಾರಣದಿಂದ ಕುಟುಂಬದೊಂದಿಗೆ ಕಾಣಿಸಿಕೊಂಡರೂ ಸಹ ಜಯಾ ಕ್ಯಾಮೆರಾಕ್ಕೆ ಪೋಸ್ ನೀಡಲು ಹಿಂಜರಿಯುತ್ತಾರೆ ಎಂದಿದ್ದಾರೆ.
58
ಸದಾ ಗುರ್ ಎನ್ನೋ ಜಯಾ ಬಚ್ಚನ್
ಅಮಿತಾಭ್ ಅವರ ವಿರುದ್ಧದ ಗುಣ ಇವರದ್ದು. ಇದೇ ಕಾರಣಕ್ಕೆ ಅಮಿತಾಭ್ ಇವರನ್ನು ಅದ್ಹೇಗೆ ಸಹಿಸಿಕೊಳ್ಳುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ. ನಟಿ ಏಕಾಏಕಿ ಯಾಕೆ ಕೋಪ ಮಾಡಿಕೊಳ್ಳುತ್ತಾರೆ, ಕೆಲವೊಮ್ಮೆ ಚಿಕ್ಕಪುಟ್ಟ ವಿಷಯಕ್ಕೂ ರೇಗಾಡುತ್ತಾರೆ ಎನ್ನುವುದೇ ಹಲವರಿಗೆ ಯಕ್ಷಪ್ರಶ್ನೆಯಾಗಿದೆ.
68
ಅಮ್ಮನ ಬಗ್ಗೆ ಅಭಿಷೇಕ್ ಬಚ್ಚನ್
ಇದಕ್ಕೆ ಈಗ ಉತ್ತರ ಸಿಕ್ಕಿದೆ. ತಮ್ಮ ಅಮ್ಮನಿಗೆ ಇರುವ ಈ ಸಮಸ್ಯೆಯ ಬಗ್ಗೆ ಅವರ ಮಕ್ಕಳಾದ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಓಪನ್ ಆಗಿ ಮಾತನಾಡಿದ್ದಾರೆ. ತಮ್ಮ ತಾಯಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದಾಗಿ ಅವರು ಹೇಳಿದ್ದಾರೆ. ಇದಕ್ಕೆ claustrophobia ಎಂದು ಹೆಸರು ಎಂದು ಅವರು ರಿವೀಲ್ ಮಾಡಿದ್ದಾರೆ.
78
ಮಾನಸಿಕ ಕಾಯಿಲೆ ಹೀಗಿದೆ..
ಈ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಜನಸಂದಣಿಯನ್ನು ನೋಡಿದಾಗ ಇದ್ದಕ್ಕಿದ್ದಂತೆ ತೊಂದರೆಗೆ ಒಳಾಗುತ್ತಾರೆ. ಅನೇಕ ಬಾರಿ ಕೋಪಗೊಳ್ಳುತ್ತಾರೆ. ಇದು ಹೆಚ್ಚಾಗಿ ಜನಸಂದಣಿ ಹೆಚ್ಚಾದಲ್ಲಿ, ಮಾರುಕಟ್ಟೆಯಲ್ಲಿ, ಟ್ರಾಫಿಕ್ ಅಥವಾ ಲಿಫ್ಟ್‌ನಲ್ಲಿ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
88
ಅಮ್ಮನ ಬಗ್ಗೆ ಶ್ವೇತಾ ಬಚ್ಚನ್
ಮಮ್ಮಿಗೆ ಜನರ ಗುಂಪನ್ನು ನೋಡಿದಾಗ ತೊಂದರೆ ಇದೆ. ತಳ್ಳುವುದು ಅಥವಾ ಮುಟ್ಟುವುದು ಅವರಿಗೆ ಇಷ್ಟವಿಲ್ಲ. ಇದಲ್ಲದೆ, ಕ್ಯಾಮೆರಾದ ಫ್ಲ್ಯಾಷ್ ಪದೇ ಪದೇ ಕಣ್ಣುಗಳಿಗೆ ಹೊಡೆದಾಗ ಸಹ ಸಮಸ್ಯೆಗಳಾಗುತ್ತದೆ ಎಂದಿದ್ದಾರೆ ಶ್ವೇತಾ.