ಕೋರ್ಟ್ ಮೆಟ್ಟಿಲೇರಿದ ಅಭಿಷೇಕ್ ಬಚ್ಚನ್-ಐಶ್ವರ್ಯ ರೈ, 4 ಕೋಟಿ ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಈ ಬಾರಿ ಇಬ್ಬರು ಜೊತೆಯಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಅಷ್ಟಕ್ಕೂ ಈ ಜೋಡಿ ಯಾರ ವಿರುದ್ದ ಕೋರ್ಟ್ ಮೆಟ್ಟಿಲೇರಿದೆ? ಏನಿದು ಪ್ರಕರಣ?
ಬಾಲಿವುಡ್ ಸೆಲೆಬ್ರೆಟಿ ಜೋಡಿಗಳಾದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಕುರಿತು ಹಲವು ಉಹಾಪೋಹಗಳು, ಗಾಸಿಪ್ ಹರಿದಾಡಿದೆ. ಪ್ರಮುಖವಾಗಿ ಇವರಿಬ್ಬ ದಾಂಪತ್ಯ ಜೀವನ ಕುರಿತು ಹಲವು ಪ್ರಶ್ನೆಗಳು ಎದ್ದಿತ್ತು. ಈ ಎಲ್ಲಾ ಬೆಳವಣಿಗೆ ತಣ್ಣಗಾಗುತ್ತಿದ್ದಂತೆ ಇದೀಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ದೆಹಲಿ ಹೈಕೋರ್ಟ್ ಮೆಟ್ಟೆಲೇರಿದ್ದಾರೆ.
26
ಸೆಲೆಬ್ರೆಟಿಗಳ ಜೋಡಿಯ ದೂರೇನು?
ಯೂಟ್ಯೂಬ್ ವಿರುದ್ದ ದೂರು
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಈ ಬಾರಿ ಕೋರ್ಟ್ ಮೆಟ್ಟೇಲೇರಲು ಕಾರಣ ಎಐ ವಿಡಿಯೋ. ಯೂಟ್ಯೂಬ್ ಚಾನೆಲ್ ಒಂದರಲ್ಲಿ ಐಶ್ವರ್ಯ ರೈ ವಿರುದ್ದ ಕೆಲ ಎಐ ವಿಡಿಯೋ, ಡೀಪ್‌ಫೇಕ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗಳು ಮಿಲಿಯನ್ ವೀಕ್ಷಣೆ ಪಡೆದಿದೆ. ಸೆಲೆಬ್ರೆಟಿ ಜೋಡಿಗಳ ತೇಜೋವಧೆ ಮಾಡಲು ಮಾಡಿರುವ ಈ ವಿಡಿಯೋ ವಿರುದ್ದ ಐಶ್ವರ್ಯ ರೈ ಹಾಗೂ ಅಭಿಷೇಕ್ ಕೋರ್ಟ್ ಮೆಟ್ಟೇಲೇರಿದ್ದಾರೆ.
36
ಪರಿಹಾರ ಮೊತ್ತವೆಷ್ಟು?
4 ಕೋಟಿ ರೂಪಾಯಿ ಪರಿಹಾರ
ಯೂಟ್ಯೂಬ್ ಚಾನೆಲ್‌ನಲ್ಲಿ ಸೆಲೆಬ್ರೆಟಿ ಜೋಡಿಗಳ ವಿರುದ್ಧ ಇಲ್ಲ ಸಲ್ಲದ ಸುಳ್ಳು ಮಾಹಿತಿಗಳನ್ನು ನೀಡಲಾಗಿದೆ ಎಂದು ದೂರು ನೀಡಲಾಗಿದೆ. ಎಐ ಮೂಲಕ ವಿಡಿಯೋ, ಫೋಟೋ ಸೃಷ್ಟಿಸಲಾಗಿದೆ, ಆಡಿಯೋಗಳನ್ನು ಸೃಷ್ಟಿಸಿ ತಪ್ಪು ಮಾಹಿತಿ ನೀಡಲಾಗಿದೆ. ಈ ಮೂಲಕ ಸೆಲೆಬ್ರೆಟಿಗಳ ತೇಜೋವಧೆ ಮಾಡಲಾಗಿದೆ. ಹೀಗಾಗಿ 4 ಕೋಟಿ ರೂಪಾಯಿ ಮಾನನಷ್ಟವಾಗಿ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ತಮ್ಮ ವಿರುದ್ಧ ಎಐ ಮೂಲಕ ಸೃಷ್ಟಿಸಿ ಹರಿಬಿಡುತ್ತಿರುವ ವಿಡಿಯೋ, ಪೋಟೋ, ಮಾಹಿತಿ ಕುರಿತು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಬರೋಬ್ಬರಿ 1,500 ಪುಟಗಳ ದೂರು ನೀಡಿದ್ದಾರೆ. ವಿಡಿಯೋಗಳ ಸ್ಕ್ರೀನ್‌ಶಾಟ್ ಸೇರಿದಂತೆ ದಾಖಲೆ ಸಮೇತ ದೂರು ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಬೇರೆ ನಟಿ ಜೊತೆ ಇರುವಂತೆ, ಐಶ್ವರ್ಯ ರೈ-ಸಲ್ಮಾನ್ ಖಾನ್ ಜೊತೆಗಿರುವಂತೆ ಸೇರಿದಂತೆ ಹಲವು ವಿಡಿಯೋಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
56
ಯಾರ ವಿರುದ್ದ ದೂರು
ಯೂಟ್ಯೂಬ್ ಜೊತೆಗೆ ಗೂಗಲ್ ವಿರುದ್ಧವೂ ದೂರು
ಎಐ ಬಾಲಿವುಡ್ ಇಶ್ಕ್ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ರೀತಿಯ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಚಾನೆಲ್, ಯೂಟ್ಯೂಬ್ ಹಾಗೂ ಗೂಗಲ್ ವಿರುದ್ದವೂ ದೂರು ನೀಡಲಾಗಿದೆ. ಯೂಟ್ಯೂಬ್ ಪೇರೆಂಟ್ ಕಂಪನಿ ಗೂಗಲ್, ಹೀಗಾಗಿ ಗೂಗಲ್ ವಿರುದ್ದವೂ ದೂರು ನೀಡಲಾಗಿದೆ. ಯೂಟ್ಯೂಬ್, ಗೂಗಲ್ ಈ ರೀತಿ ಸುಳ್ಳು ಮಾಹಿತಿಯನ್ನು ಇದುವರೆಗೂ ತೆಗೆದುಹಾಕಿಲ್ಲ ಎಂದ ದೂರಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ
66
ದೆಹಲಿ ಹೈಕೋರ್ಟ್ ಆದೇಶ
ದೆಹಲಿ ಹೈಕೋರ್ಟ್ ಆದೇಶ
ದೆಹಲಿ ಹೈಕೋರ್ಟ್ ಇತ್ತೀಚೆಗೆ ಐಶ್ವರ್ಯ ರೈ ಹಾಗೂ ಪುತ್ರಿ ಆರಾಧ್ಯ ರೈ ಬಚ್ಚನ್ ಪರವಾಗಿ ಮಹತ್ವದ ಆದೇಶ ನೀಡಿತ್ತು. ವೈಯುಕ್ತಿಕ ಘನತೆ ಹಾಗೂ ಗೌಪ್ಯತೆ ಕಾಪಾಡಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಕಾರ್ಯಪ್ರವೃತ್ತರಾಗಬೇಕು, ಯಾರ ವೈಯುಕ್ತಿಕ ಮಾಹಿತಿಗೆ ಧಕ್ಕೆಯಾಗಬಾರದು ಎಂದು ಆದೇಶ ನೀಡಿತ್ತು.