Life after Divorce: ಮೊದಲ ಪತ್ನಿಯೊಂದಿಗೆ ಮರಳುತ್ತಾರಾ ಆಮೀರ್? 3ನೇ ಮದ್ವೆಯಾಗುತ್ತಾರೋ?

Published : Nov 17, 2021, 04:55 PM IST

ಆಮೀರ್ ಖಾನ್ (Aamir Khan) ಅವರ ಮೊದಲ ಪತ್ನಿ ರೀನಾ ದತ್ತಾ (Reena Dtta) ಅವರ ಮನೆಯ ಹೊರಗೆ ಕಾಣಿಸಿಕೊಂಡಿರುವುದು ದೊಡ್ಡ ಸುದ್ದಿ ಮಾಡುತ್ತಿದೆ. ಅದೂ ಅಲ್ಲದೇ ಅಮೀರ್ ವಿಚಿತ್ರ ಬಟ್ಟೆಗಳನ್ನು ತೊಟ್ಟು, ಮೊದಲ ಮನೆಗೆ ಹೋಗಿರುವುದು ಮತ್ತಷ್ಟು ಕಮೆಂಟ್ಸ್‌ಗೆ ದಾರಿ ಮಾಡಿ ಕೊಟ್ಟಿದೆ. ಸಹಜವಾಗಿ ಆಮೀರ್ ಟ್ರೋಲ್ ಆಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಆಮೀರ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಗೆ (Kiran Rao) ವಿಚ್ಛೇದನ ನೀಡಿದ್ದರು. ಎರಡನೇ ಹೆಂಡತಿಯನ್ನು ಬಿಟ್ಟು ಹೋದ ಆಮೀರ್ ಈಗ ಮೊದಲ ಹೆಂಡತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಈಗ ಅವರು ಮೂರನೇ ಮದುವೆಯಾಗಲು ಸಿದ್ಧರಾಗುತ್ತಿದ್ದಾರೆ, ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಆಮೀರ್‌ಗೆ ಸಂಬಂಧಿಸಿದ ಗಾಸಿಪ್ ಇದು.

PREV
19
Life after Divorce: ಮೊದಲ ಪತ್ನಿಯೊಂದಿಗೆ ಮರಳುತ್ತಾರಾ ಆಮೀರ್? 3ನೇ ಮದ್ವೆಯಾಗುತ್ತಾರೋ?

ಆಮೀರ್‌ ತಮ್ಮ ಮೊದಲ ಪತ್ನಿ ರೀನಾ ದತ್‌ ಅವರ ಮನೆ ಹೊರಗೆ ಕಾಣಿಸಿಕೊಂಡಿದ್ದಾರೆ. ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ತಿಳಿ ಬಣ್ಣದ ಟೀ ಶರ್ಟ್ ಮತ್ತು ಸಡಿಲವಾದ ಪೈಜಾಮವನ್ನು ಧರಿಸಿದ್ದಾರೆ. ಮಾಸ್ಕ್, ಕನ್ನಡಕ ಮತ್ತು ಚಪ್ಪಲಿ ಧರಿಸಿದ್ದಾರೆ.

 
 

29

ಆಮೀರ್ ಖಾನ್ ಅವರನ್ನು ಇಂತಹ ಸ್ಥಿತಿಯಲ್ಲಿ ನೋಡಿದ ಒಬ್ಬರು 'ಅವರು ರಣವೀರ್ ಸಿಂಗ್ ಅವರ ಬಟ್ಟೆಗಳನ್ನು ಧರಿಸಿ ಏಕೆ ತಿರುಗುತ್ತಿದ್ದಾರೆ' ಎಂದಿದ್ದಾರೆ. ನಿಮಗೆ ರಣವೀರ್ ಸಿಂಗ್ ಬಟ್ಟೆ ಎಲ್ಲಿಂದ ಬಂತು?' ಎಂದು ಮತ್ತೊಂದು ಯೂಸರ್‌ ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು' ಬಾಯ್‌ ಈ ಚೋಲಿ ಮತ್ತು ಘಾಗ್ರಾದಲ್ಲಿ ಇರುವುದು ಯಾರು?' ಎಂದಿದ್ದಾರೆ. 

39

'ಬಾಯ್‌, ಡಿವೋರ್ಸ್‌ ನಂತರ ಕಿರಣ್ ರಾವ್ ಅವರ ಸಲ್ವಾರ್ ವಾಪಸ್ಸು ಕೊಡಬಾರದಾ? ಎಂದು ಒಬ್ಬರು ಬರೆದಿದ್ದಾರೆ. 'ಕಿರಣ್ ಬಟ್ಟೆಯನ್ನೇ ಹಾಕಿಕೊಳ್ಳುವುದಾದರೆ, ವಿಚ್ಛೇದನದ ಅಗತ್ಯ ಏನಿತ್ತು, ಅವರು ಹೀಗೆ ಡ್ರೆಸ್‌ ಧರಿಸುತ್ತಿದ್ದರು' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ರೀನಾಳ ಮನೆಗೆ ಹೋಗಿ, ಅವರ  ಸಲ್ವಾರ್ ಧರಿಸಿ ಬಂದ' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ

49

ಶ್ರದ್ಧಾ ಕಪೂರ್ (Shraddha Kapoor) ಜುಹುನಲ್ಲಿ ತಮ್ಮ ಡ್ಯಾನ್ಸ್‌ ಕ್ಲಾಸ್‌ ಹೊರಗೆ ಕಾಣಿಸಿಕೊಂಡರು. ಈ ವೇಳೆ ಅವರು ಕಪ್ಪು ಡ್ರೆಸ್‌ ಧರಿಸಿದ್ದ ಶ್ರದ್ಧಾ ಮುಖಕ್ಕೆ ಮಾಸ್ಕ್ ಹಾಕಿ ಕ್ಯಾಮರಾಮನ್ ಗೆ ಪೋಸ್ ಕೊಟ್ಟರು.

59

ಮುಂಬೈನ ಜುಹುನಲ್ಲಿ ಸನ್ನಿ ಲಿಯೋನ್ (Sunny Leone) ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಕಪ್ಪು ಟಿ-ಶರ್ಟ್ ಮತ್ತು ಪಿಂಕ್‌ ಬಣ್ಣದ ಪೈಜಾಮಾವನ್ನು ಧರಿಸಿದ್ದರು ಹಾಗೂ ಸನ್ನಿ ಕನ್ನಡಕ ಕೂಡ ಧರಿಸಿದ್ದರು. ಸನ್ನಿ ಈ ಸಮಯದಲ್ಲಿ ತುಂಬಾ ಸಂತೋಷದಿಂದ ಕಾಣುತ್ತಿದ್ದರು.

69

ದಕ್ಷಿಣ ನಟಿ ರಶ್ಮಿಕಾ ಮಂದಣ್ಣ (Rashmika Mandanna)ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲದೆ, ತೆರೆದ ಕೂದಲು ಮತ್ತು ಶಾರ್ಟ್‌ ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ಕ್ಯಾಮೆರಾಮನ್‌ಗಳನ್ನು ತಪ್ಪಿಸಿಕೊಂಡರುವುದು ಕಂಡುಬಂದಿದೆ.

79

ದಕ್ಷಿಣ ನಟಿ ಲಕ್ಷ್ಮಿ ರೈ (Laxmi Rai) ಕೂಡ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಕಪ್ಪುಔಟ್‌ಫಿಎಎ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದ ಲಕ್ಷ್ಮಿ ಅವರು ಕನ್ನಡಕವನ್ನು ಸಹ ಧರಿಸಿದ್ದರು ಹಾಗೂ ಈ ನಟಿ ನಗುನಗುತ್ತಾ ಛಾಯಾಗ್ರಾಹಕರಿಗೆ ಪೋಸ್ ಕೊಟ್ಟರು.

89

ವರ್ಸೋವಾದಲ್ಲಿರುವ ಸಲೂನ್‌ನ ಹೊರಗೆ ಖುಷಿ ಕಪೂರ್ (Khushi Kapoor) ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ  ಕ್ಯಾಶುಯಲ್ ಲುಕ್‌ನಲ್ಲಿದ್ದ ಖುಷಿ ಮಾಸ್ಕ್‌ ಕೂಡ ಧರಿಸಿದ್ದರು. ಖುಷಿಯ ಜೊತೆ ಅವರ ಫ್ರೆಂಡ್‌ ಸಹ ಇದ್ದರು. 

99

ಉರ್ಫಿ ಜಾವೇದ್ (Urfi Javed)  ಮುಂಬೈನ ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಉರ್ಫಿ ತುಂಬಾ ಬೋಲ್ಡ್ ಡ್ರೆಸ್ ತೊಟ್ಟಿದ್ದರು. ಈ ಡ್ರೆಸ್‌ನಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

Read more Photos on
click me!

Recommended Stories