Samantha: ಪತ್ನಿಗೆ ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಮಾಡ್ತಿದ್ರಾ ನಾಗ ಚೈತನ್ಯ ? ಡಿವೋರ್ಸ್‌ಗೆ ಇದೇ ಕಾರಣವಾಯ್ತಾ ?

Published : Nov 16, 2021, 03:40 PM IST

Samantha : ಅತಿಯಾದ ನಿರ್ಬಂಧಗಳೇ ವಿಚ್ಚೇದನೆಗೆ ದಾರಿ ಆಯ್ತಾ ? ಪತಿಯ ಕಟ್ಟು ನಿಟ್ಟು ರೂಲ್ಸ್‌ಗಳಿಂದ ಬೇಸತ್ತರಾ ಸಮಂತಾ ?

PREV
18
Samantha: ಪತ್ನಿಗೆ ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಮಾಡ್ತಿದ್ರಾ ನಾಗ ಚೈತನ್ಯ ? ಡಿವೋರ್ಸ್‌ಗೆ ಇದೇ ಕಾರಣವಾಯ್ತಾ ?

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದನೆ ಬಗ್ಗೆ ಹಲವಾರು ಕಾರಣಗಳು ಚರ್ಚೆಯಾಗುತ್ತಲೇ ಇವೆ. ನಟಿ ಫ್ಯಾಮಿಲಿ ಮ್ಯಾನ್ 2ನಲ್ಲಿ ಬೋಲ್ಡ್ ಪಾತ್ರ ಮಾಡಿದ್ದು ನಾಗ ಚೈತನ್ಯಗೆ ಇಷ್ಟವಾಗಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಇದೇ ನಂತರ ಜಗಳವಾಗಿ ಪತಿ ಪತ್ನಿ ನಡುವಿನ ಬಿರುಕಿಗೆ ಕಾರಣವಾಗಿತ್ತು ಎಂಬ ಸುದ್ದಿ ಇತ್ತು.

28

ಆದರೆ ಈಗ ನಾಗ ಚೈತನ್ಯ ಅವರ ಹೆಚ್ಚಿನ ಕಠಿಣ ನಿಯಮಗಳೇ ಅವರ ದಾಂಪತ್ಯಕ್ಕೆ ಮುಳುವಾಗಿದೆ ಎನ್ನಲಾಗುತ್ತಿದೆ. ಇಂಥದೊದ್ದೊಂದು ಗಾಸಿಪ್ ಹರಿದಾಡುತ್ತಿದ್ದು ಇದಕ್ಕೆ ಪೂರಕವಾಗುವ ಬಹಳಷ್ಟು ಸುದ್ದಿಗಳು ಈ ಹಿಂದೆ ಕೇಳಿ ಬಂದಿತ್ತು.

38

ಅಲ್ಲು ಅರ್ಜುನ್ ಅವರ ಪುಷ್ಪಾ ಚಿತ್ರದಲ್ಲಿ ಸಮಂತಾ ತನ್ನ ಮೊದಲ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿಗಳೂ ಕೇಳಿ ಬಂದಿವೆ. ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲವಾದರೂ ಈ ತಿಂಗಳ ಕೊನೆಯ ವಾರದಲ್ಲಿ ಹಾಡು ರೆಡಿಯಾಗಲಿದೆ ಎನ್ನಲಾಗಿದೆ.

48

ಈ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಮದುವೆಯ ನಂತರ ಸಮಂತಾ ಯಾವತ್ತೂ ಸ್ಕಿನ್ ಶೋ ಮಾಡಿಲ್ಲ. ಅಕ್ಕಿನೇನಿ ಕುಟುಂಬಕ್ಕೆ ಅಪಖ್ಯಾತಿ ತರದಂತಹ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ.

58

ಇದಕ್ಕೆ ಪೂರಕವೆಂಬಂತೆ ಫ್ಯಾಮಿಲಿ ಮ್ಯಾನ್ 2 ನಟನೆಗಾಗಿ ಸಮಂತಾ ಭಾರೀ ಜನಪ್ರಿಯತೆ ಗಳಿಸಿದ್ದೂ, ಇತ್ತ ಕುಟುಂಬ ಜೀವನದ ಕುರಿತು ಗಾಸಿಪ್ ಶುರುವಾಗಿದ್ದು ಏಕಕಾಲಕ್ಕೆ.

68

ನಾಗ ಚೈತನ್ಯ ಅವರು ಸಂಪ್ರದಾಯಸ್ಥರಾಗಿದ್ದರೆ ನಟಿಯನ್ನು ಮದುವೆಯಾಗುತ್ತಿರಲಿಲ್ಲ. ಇದಲ್ಲದೆ, ಸಮಂತಾ ಈಗಾಗಲೇ ಮದುವೆಗೆ ಮುಂಚೆಯೇ ಕೆಲವು ಸಂಬಂಧಗಳಲ್ಲಿದ್ದರು ಎಂದು ಚರ್ಚಿಸುತ್ತಿದ್ದಾರೆ ನೆಟ್ಟಿಗರು.

78

ಸಮಂತಾ ವಿವಾಹಿತೆಯಾಗಿದ್ದಾಗ ತಾನು ಮಾಡಿದ ಪಾತ್ರಗಳ ಬಗ್ಗೆ ಸ್ವತಃ ಷರತ್ತುಗಳನ್ನು ವಿಧಿಸಿರಬಹುದು. ವಿಚ್ಛೇದನದ ನಂತರ ಅವಳು ಬೇರೆ ಯಾವುದರ ಬಗ್ಗೆ ಯೋಚಿಸದೆ ಪಾತ್ರಗಳನ್ನು ಒಪ್ಪುತ್ತಿರಬಹುದು ಎಂದೂ ಚರ್ಚೆಯಾಗುತ್ತಿದೆ.

88

ಫ್ಯಾಮಿಲಿ ಮ್ಯಾನ್ 2ನಲ್ಲಿ ನಟಿಯ ಬಹಳಷ್ಟು ಇಂಟಿಮೇಟ್ ಸೀನ್‌ಗಳನ್ನು ಕಟ್ ಮಾಡಲಾಗಿತ್ತು ಎನ್ನುವುದು ಸುದ್ದಿಯಾಗಿತ್ತು. ಆದರೂ ತಮ್ಮ ಬೋಲ್ಡ್ ನಟನೆಯಿಂದ ಪ್ರೇಕ್ಷಕರ ಹುಬ್ಬೇರಿಸಿದ್ದರು ನಟಿ

Read more Photos on
click me!

Recommended Stories