ಆಮೀರ್ ಖಾನ್ ಫೋಟೋ ವೈರಲ್; ವಯಸ್ಸಾಯಿತು ಎಂದ ನೆಟ್ಟಿಗ್ಗರು!
ಇತ್ತೀಚೆಗೆ ಬಾಂದ್ರಾದ ಡಬ್ಬಿಂಗ್ ಸ್ಟುಡಿಯೊ ಹೊರಗೆ ಆಮೀರ್ ಖಾನ್ (Aamir Khan) ಕಾಣಿಸಿಕೊಂಡರು. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ. ಆದರೆ ಅವರ ಸ್ಥಿತಿಯನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಆಮೀರ್ ಅವರ ಕೆನ್ನೆಗಳು ಒಳ ಹೋಗಿವೆ ಮತ್ತು ಗಡ್ಡದ ಕೂದಲು ಕೂಡ ಬಿಳಿಯಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಈ ವೇಳೆ ಅವರು ಕೆಂಪು ಬಣ್ಣದ ಶಾರ್ಟ್ಸ್ ಮತ್ತು ಚಪ್ಪಲಿ ಧರಿಸಿದ್ದರು. ಆಮೀರ್ ಅವರನ್ನು ಈ ಸ್ಥಿತಿಯಲ್ಲಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅವರಿಗೆ ಮುದುಕ ಎಂದು ಕರೆಯುತ್ತಿದ್ದಾರೆ ಮತ್ತು ಕೆಲವರು ಅವರು ಭಾರತದಲ್ಲಿ ಸುರಕ್ಷಿತವಾಗಿಲ್ಲ ಎಂದೂ ಕಾಲೆಳೆಯುತ್ತಿದ್ದಾರೆ. ಇದರ ಜೊತೆಗೆ ಮುಂಬೈನ ಬೇರೆ ಬೇರೆ ಸ್ಥಳಗಳಲ್ಲಿ ಯಾವ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ ನೋಡಿ.