ಸುಸೇನ್ ಖಾನ್ ಅವರ ಹುಟ್ಟುಹಬ್ಬದಂದು (Happy Birthday), ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಪ್ರೀತಿ ಮತ್ತು ಶುಭಾಶಯಗಳು ಹರಿದು ಬಂದವು. ಗೋವಾದಲ್ಲಿ ನಡೆದ ಪಾರ್ಟಿಯಲ್ಲಿ ಸುಸೇನ್ ತನ್ನ ಕ್ಲೋಸ್ ಫ್ರೆಂಡ್ಸ್ ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಸೇರಿದಂತೆ ಇತರರೊಂದಿಗೆ ಉಪಸ್ಥಿತರಿದ್ದರು.
ಸುಸೇನ್ ಈ ಹಿಂದೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನು ಮದುವೆಯಾಗಿದ್ದರು ಆದರೆ ನಂತರ ಬೇರ್ಪಟ್ಟರು. ಆದರೆ, ಇಬ್ಬರ ನಡುವೆ ಇನ್ನೂ ಉತ್ತಮ ಸಂಬಂಧ ಉಳಿಸಿಕೊಂಡಿದ್ದಾರೆ ಮತ್ತು ಅವರ ಮಕ್ಕಳಾದ ಹೃದಾನ್ ರೋಶನ್ ಮತ್ತು ಹ್ರೇಹಾನ್ ರೋಶನ್ ಸಹ-ಪೋಷಕರಾಗಿದ್ದಾರೆ.
ಅರ್ಸ್ಲಾನ್ ಗೋನಿ ಮತ್ತು ಸುಸೇನ್ ಖಾನ್ ಇಬ್ಬರೂ ಈಗ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುಸೇನ್‌ಗೆ ಹತ್ತಿರವಿರುವ ಮೂಲವು ಬಹಿರಂಗಪಡಿಸಿದೆ ಎಂದು ಪಿಂಕ್ವಿಲ್ಲಾದ ವರದಿಗಳು ಹೇಳುತ್ತವೆ. ಸುಸೇನ್ ಮತ್ತು ಆರ್ಸ್ಲಾನ್ ಟಿವಿ ಇಂಡಸ್ಟ್ರಿಯ ಕಾಮನ್ ಫ್ರೆಂಡ್ಸ್ ಮೂಲಕ ಭೇಟಿಯಾದರು ಮತ್ತು ತುಂಬಾ ಹತ್ತಿರವಾಗಿದ್ದಾರೆ ಎಂದು ವರದಿಯಾಗಿದೆ.
'ಅವರು ಕೇವಲ ಸ್ನೇಹಿತರಿಗಿಂತ ಹೆಚ್ಚು ಎಂಬುದು ಅವರ ಒಡನಾಟದಿಂದ ಸ್ಪಷ್ಟವಾಗಿದೆ. ಇಬ್ಬರೂ ಟಿವಿ ಇಂಡಸ್ಟ್ರಿಯಾ ತಮ್ಮ ಸ್ನೇಹಿತರೊಂದಿಗೆ ಆಗಾಗ್ಗೆ ಸುತ್ತಾಡುತ್ತಾರೆ. 2014 ರಲ್ಲಿ ಹೃತಿಕ್ ಜೊತೆಯ ಸುಸೇನ್ ಬ್ರೇಕಪ್ ಅನ್ನು ಪರಿಗಣಿಸಿ ಅವರು ನಿಧಾನವಾಗಿ ಮುಂದುವರೆಯುತ್ತಿದ್ದಾರೆ ಎಂದು ಅಪ್ತ ಮೂಲ ಇನ್ನಷ್ಟು ಅವರ ಬಗ್ಗೆ ಹೇಳಿದೆ.
ಆದರೆ, ಈ ವದಂತಿಗಳು ಮತ್ತು ವರದಿಗಳ ಬಗ್ಗೆ ಸುಸೇನ್ ಅಥವಾ ಆರ್ಸ್ಲಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ವರ್ಷಗಳ ಹಿಂದೆ, ಹೃತಿಕ್ ರೋಷನ್ ಸುಸೇನ್ ಅವರನ್ನು ಮರುಮದುವೆ ಮಾಡಿಕೊಳ್ಳುವ ಬಗ್ಗೆ ಕೇಳಿದಾಗ, 'ಇಂದು ನಾನು ಮರುಮದುವೆಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲ, ನಾನು ತೃಪ್ತಿ ಹೊಂದಿದ್ದೇನೆ' ಎಂದು ಹೇಳಿದರು.