Netflix Networking Party: ನೆಟ್‌ಫ್ಲಿಕ್ಸ್‌ ನೆಟ್‌ವರ್ಕಿಂಗ್ ಪಾರ್ಟಿಯಲ್ಲಿ ಆಮೀರ್‌ ಖಾನ್‌, ಕಿರಣ್‌ ರಾವ್‌

First Published | Feb 19, 2023, 3:49 PM IST

ನೆಟ್‌ಫ್ಲಿಕ್ಸ್ ಇಂಡಿಯಾ ನಿನ್ನೆ ಸಂಜೆ  ಪಾರ್ಟಿಯನ್ನು ಆಯೋಜಿಸಿದೆ. ಇದರಲ್ಲಿ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಆಮೀರ್‌ ಖಾನ್‌, ಅನಿಲ್‌  ಕಪೂರ್‌ ಮುಂತಾದವರ ಜೊತೆ ಯಂಗ್‌ ನಟನಟಿಯರಾದ  ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ಕೊಂಕಣಾ ಸೇನ್ ಶರ್ಮಾ, ಭೂಮಿ ಪೆಡ್ನೇಕರ್ ಮತ್ತು ಇತರರು ಕಾಣಿಸಿಕೊಂಡರು. ಈ ಇವೆಂಟ್‌ ಕೆಲವು ಪೋಟೋಗಳು ಇಲ್ಲಿವೆ.

ನೆಟ್‌ಫ್ಲಿಕ್ಸ್ ಇಂಡಿಯಾ ಮುಂಬೈ ನಗರದಲ್ಲಿ ನೆಟ್‌ವರ್ಕಿಂಗ್ ಪಾರ್ಟಿಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅಮೀರ್ ಖಾನ್, ಕರಣ್ ಜೋಹರ್ ಮತ್ತು ಇತರರು ಸೇರಿದಂತೆ ಬಾಲಿವುಡ್ ಸೆಲೆಬ್ರಟಿಗಳು ಭಾಗವಹಿಸಿದ್ದರು

ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಕೊನೆಯದಾಗಿ ಕರೀನಾ ಕಪೂರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಂತರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.

Tap to resize

ಕೆಂಪು ಪ್ರಿಟೆಂಡ್‌ ಕುರ್ತಾ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಅಮೀರ್ ಖಾನ್‌ ಕಾಣಿಸಿಕೊಂಡಿದ್ದರು.  ಪಾರ್ಟಿಯಲ್ಲಿ ಆಮೀರ್‌ ಖಾನ್‌ ಅವರ ಮಾಜಿ ಪತ್ನಿ ಕಿರಣ್‌ ರಾವ್‌ ಸಖತ್‌ ಸ್ಟೈಲಿಶ್ ಆಗಿ ಕಾಣುತ್ತಿದ್ದರು. 

ಈವೆಂಟ್‌ನಲ್ಲಿ ಇಶಾನ್ ಖಟ್ಟರ್ ಅವರು ಬೂದು-ಕಂದು ಬಣ್ಣದ ಜಾಕೆಟ್‌ನಲ್ಲಿ ಸರಳವಾದ ಟೀ-ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ನೊಂದಿಗೆ ಪೇರ್ ಮಾಡಿಕೊಂಡು ಸಖತ್‌ ಹ್ಯಾಂಡ್‌ಸಮ್‌ ಕಾಣುತ್ತಿದ್ದರು. 

ಬಾಲಿವುಡ್‌ ಸೆಲಬ್ರೆಟಿಗಳು ಮಾತ್ರವಲ್ಲ ಜೊತೆಗೆ ಸೌತ್‌ ನಟಿ ಕೀರ್ತಿ ಸುರೇಶ್ ಸಹ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಕೀರ್ತಿ ಪ್ರಿಂಟೆಡ್ ಹಾಲ್ಟರ್-ನೆಕ್ ಗೌನ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. 

ಕಪ್ಪು ಬ್ರಾಲೆಟ್‌ ಜೊತೆ ನೆಟೆಡ್ ಓವರ್‌ಕೋಟ್ ಮತ್ತು ರಫಲ್ ಕಪ್ಪು ಸ್ಕರ್ಟ್‌ಗೆ ಪೇರ್‌ ಮಾಡಿಕೊಂಡ ಭೂಮಿ ಪೆಡ್ನೇಕರ್  ಸಖತ್‌ ಗಾರ್ಜಿಯಸ್‌ ಆಗಿ ಕಾಣುತ್ತಿದ್ದರು. ನ್ಯೂಡ್‌ ಪೀಚ್ ಲಿಪ್ ಶೇಡ್‌ನೊಂದಿಗೆ ಅವಳು ಮಿನಿಮ್ ಮೇಕಪ್ ಲುಕ್‌ ಹೊಂದಿದ್ದರು.

ರಾಕುಲ್ ಪ್ರೀತ್ ಸಿಂಗ್  ಜಾಕಿ ಭಗ್ನಾನಿ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ರಾಕುಲ್ ಶಾರ್ಟ್‌ ಕಪ್ಪು ಡ್ರೆಸ್ ಉಡುಪಿನಲ್ಲಿ ಕ್ಲಾಸಿಯಾಗಿ ಕಾಣುತ್ತಿದ್ದರೆ ಬಾಲಿವುಡ್ ನಿರ್ಮಾಪಕ ಜಾಕಿ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನೊಂದಿಗೆ ಚಾಕೊಲೇಟ್ ಕಂದು ಬಣ್ಣದ ಜಾಕೆಟ್ ಧರಿಸಿದ್ದರು.

ನೆಟ್‌ಫ್ಲಿಕ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಕೃತಿ ಸನೋನ್, ಹಸಿರು ಹಾಲ್ಟರ್ ನೆಕ್ ಗ್ರೀನ್  ಡ್ರೆಸ್ ಆಯ್ಕೆ ಮಾಡಿಕೊಂಡಿದ್ದರು.  ಹೈ ಬನ್ ಮತ್ತು ಸ್ಟೇಟ್‌ಮೆಂಟ್ ಬೆಳ್ಳಿಯ ಕಿವಿಯೋಲೆಯೊಂದಿಗೆ ಸಖತ್ತಾಗಿ ಮಿಂಚಿದ್ದಾರೆ

ಪಾರ್ಟಿಯಲ್ಲಿ ಸೋನಾಕ್ಷಿ ಸಿನ್ಹಾ ಪ್ರಕಾಶಮಾನವಾದ ಕೆಂಪು ಉಡುಪಿನಲ್ಲಿ ಸಖತ್‌  ಚಿಕ್ ಆಗಿ ಕಾಣಿಸಿಕೊಂಡರು. ಅವರು ಪಾರ್ಟಿಯಲ್ಲಿ ಮ್ಯಾಚಿಂಗ್ ಹ್ಯಾಂಡ್‌ಬ್ಯಾಗ್, ಸಾಫ್ಟ್ ಕರ್ಲ್ಸ್ ಹೇರ್‌ಡೋ ಮತ್ತು ನ್ಯೂಡ್‌ ಲಿಪ್‌ಕಲರ್‌ ಜೊತೆ ಸಿಲ್ವರ್‌ ಕಿವಿಯೋಲೆಯನ್ನು ಮ್ಯಾಚ್‌ ಮಾಡಿಕೊಂಡಿದ್ದರು

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜ್‌ಕುಮಾರ್ ರಾವ್ ಮತ್ತು ಅವರ ಪತ್ನಿ, ನಟಿ ಪತ್ರಲೇಖಾ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡರು. . ರಾಜ್‌ಕುಮಾರ್ ರಾವ್ ಕಪ್ಪು ಮುದ್ರಿತ ಶರ್ಟ್‌ ಜೊತೆ ನೀಲಿ ಡೆನಿಮ್ ಪ್ಯಾಂಟ್ ಮತ್ತು ಒಂದು ಜೊತೆ ಕಪ್ಪು ಬೂಟುಗಳನ್ನು ಪೇರ್‌ ಮಾಡಕೊಂಡಿದ್ದರು  ಮತ್ತೊಂದೆಡೆ, ಪತ್ರಲೇಖಾ ಕೆಂಪು ಮತ್ತು ನೇವಿ ನೀಲಿ ಪ್ರಿಂಟ್ರೆಡ್‌  ಉಡುಗೆಯಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.

ಪ್ರಸ್ತುತ ದಿ ನೈಟ್ ಮ್ಯಾನೇಜರ್ ಎಂಬ ತಮ್ಮ ಶೋಗಾಗಿ ಪ್ರಶಂಸೆಯ ಪಡೆಯುತ್ತಿರುವ ಅನಿಲ್, ತಿಳಿ ನೀಲಿ ಬಣ್ಣದ ಸೂಟ್‌ನಲ್ಲಿ ಸಖತ್‌ ಹ್ಯಾಂಡ್ಸ್‌ಮ್‌ ಆಗಿ ಕಾಣುತ್ತಿದ್ದರು. ಮಗಳು ರಿಯಾ ಕಪೂರ್ ಅವರೊಂದಿಗೆ ಅನಿಲ್‌ ಕಪೂರ್‌ ಆಗಮಿಸಿದ್ದರು.

Latest Videos

click me!