ನಾಯಕನಾಗಿ ಮಾತ್ರವಲ್ಲ, ಖಳನಾಯಕನಾಗಿಯೂ ಮೆಚ್ಚುಗೆ ಗಳಿಸದ ಸೂಪರ್‌ಸ್ಟಾರ್ಸ್

Published : Feb 18, 2023, 05:19 PM IST

ಬಾಲಿವುಡ್‌ನ ಸೂಪರ್‌ಸ್ಟಾರ್‌ ಪಟ್ಟ ಗಳಿಸಿರುವ ಹಲವು ನಾಯಕ ನಟರು ನೆಗೆಟಿವ್‌ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲವು ಟಾಪ್‌ ನಟಿಯರು ಕೂಡ ವಿಲನ್‌ ರೋಲ್‌ಗಳನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ .ಸೈಫ್ ಅಲಿ ಖಾನ್ ಮಾತ್ರವಲ್ಲ ಶಾರುಖ್ ಖಾನ್, ರಣವೀರ್ ಸಿಂಗ್, ಸಂಜಯ್ ದತ್, ಸುನೀಲ್ ಶೆಟ್ಟಿ, ಜಾನ್ ಅಬ್ರಹಾಂ ಸೇರಿ ಕೆಲವು ತಾರೆಯರು ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ ಇಷ್ಟೇ ಅಲ್ಲ, ಕಾಜೋಲ್ ಮತ್ತು ಪ್ರಿಯಾಂಕಾ ಚೋಪ್ರಾ ಚಿತ್ರಗಳಲ್ಲಿ ವಿಲನ್ ಪಾತ್ರವನ್ನು ಸಹ ಮಾಡಿದ್ದಾರೆ  

PREV
110
ನಾಯಕನಾಗಿ ಮಾತ್ರವಲ್ಲ, ಖಳನಾಯಕನಾಗಿಯೂ ಮೆಚ್ಚುಗೆ ಗಳಿಸದ ಸೂಪರ್‌ಸ್ಟಾರ್ಸ್

ಶಾರುಖ್ ಖಾನ್: ಮೊದಲಿಗೆ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಚಲನಚಿತ್ರಗಳಲ್ಲಿ ವಿಲನ್ ಪಾತ್ರವನ್ನು  ಶಾರುಖ್ ಖಾನ್ ನಿರ್ವಹಿಸಿದ್ದರು. ಬಾಜಿಗರ್, ಡರ್, ಅಂಜಾಂ, ಡಾನ್ ಮುಂತಾದ ಚಿತ್ರಗಳಲ್ಲಿ ಅವರು ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

210

ಸಂಜಯ್ ದತ್: ಸಂಜಯ್ ದತ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು  ಫ್ಯಾನ್ಸ್‌ ಕೂಡ  ಇಷ್ಟಪಟ್ಟಿದ್ದಾರೆ. ಖಳನಾಯಕನ ಹೊರತಾಗಿ, ಅವರು ಅಗ್ನಿಪಥ್, ಪಾಣಿಪತ್, ಕೆಜಿಎಫ್ ಚಾಪ್ಟರ್ 2, ಶಂಶೇರಾ ಮುಂತಾದ ಚಿತ್ರಗಳಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ.

310

ಜಾನ್ ಅಬ್ರಹಾಂ: ಇತ್ತೀಚೆಗಷ್ಟೇ ಬಿಡುಗಡೆಯಾದ ಪಠಾಣ್ ಚಿತ್ರದಲ್ಲಿ ಜಾನ್ ಅಬ್ರಹಾಂ ಖಳನಾಯಕನ ಪಾತ್ರದಲ್ಲಿ ನಟಿಸಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಲ್ಲದೆ, ಅವರು ಧೂಮ್ ಮತ್ತು ಶೂಟೌಟ್ ಅಟ್ ವಡಾಲಾದಲ್ಲಿ ನಕಾರಾತ್ಮಕ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ

410

 ಹೃತಿಕ್ ರೋಷನ್: ಹೃತಿಕ್ ರೋಷನ್ ಬಗ್ಗೆ ಹೇಳುವುದಾದರೆ, ಅವರು ಧೂಮ್ 2 ನಲ್ಲಿ ನಕಾರಾತ್ಮಕ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಉತ್ತಮ ಪ್ರತಿಕ್ರಿಯೆ  ಪಡೆಯಿತು. ಇದಲ್ಲದೆ, 2022 ರಲ್ಲಿ ವಿಕ್ರಮ್ ವೇದ ಚಿತ್ರದಲ್ಲಿ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು.

510

 ರಣವೀರ್ ಸಿಂಗ್ : ಪದ್ಮಾವತ್ ಚಿತ್ರದಲ್ಲಿ ರಣವೀರ್ ಸಿಂಗ್ ನಿರ್ವಹಿಸಿದ ನೆಗೆಟಿವ್ ಪಾತ್ರ ಎಲ್ಲರ ಮನ ಗೆದ್ದಿತ್ತು. ರಣವೀರ್‌ ಸಿಂಗ್‌ ಅಭಿನಯವೇ ಈ
ಸಿನಿಮಾದ ಮುಖ್ಯಾಂಶವಾಯಿತು. ಚಿತ್ರದ ನಾಯಕ ಶಾಹಿದ್ ಕಪೂರ್‌ ರಣವೀರ್ ಮುಂದೆ  ಮಬ್ಬಾದರು.

610

ಸೈಫ್ ಅಲಿ ಖಾನ್ : ಸೈಫ್ ಅಲಿ ಖಾನ್ ನಾಯಕನಿಗಿಂತ ಖಳನಾಯಕನ ಪಾತ್ರದಲ್ಲಿ ಹೆಚ್ಚು ಪ್ರಾಶಸ್ತ್ಯ ಪಡೆದಿದ್ದಾರೆ. ಓಂಕಾರ, ರೇಸ್, ರೇಸ್ 2 ಮತ್ತು ತಾನ್ಹಾಜಿಯಂತಹ ಚಿತ್ರಗಳಲ್ಲಿ ಅವರು ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದು ಸಾಕಷ್ಟು ಮೆಚ್ಚುಗೆ ಸಹ ಗಳಿಸಿದ್ದಾರೆ.

710
Kajol

ಕಾಜೋಲ್ : ಬ್ಲಾಕ್‌ಬಸ್ಟರ್ ಚಿತ್ರ ಗುಪ್ತ್‌ನಲ್ಲಿ ಕಾಜೋಲ್ ನಕಾರಾತ್ಮಕ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಾಜೋಲ್ ಪಾತ್ರದ ರಹಸ್ಯ ಬಯಲಾದಾಗ ಎಲ್ಲರಿಗೂ ಸರ್‌ಪ್ರೈಸ್‌ ಆಗಿತ್ತು.

810
Kajol

ಪ್ರಿಯಾಂಕಾ ಚೋಪ್ರಾ:
ಅದೇ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ ಐತ್ರಾಜ್ ಮತ್ತು ಸಾತ್ ಖೂನ್ ಮಾಫ್ ಚಿತ್ರಗಳಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದರು. ಐತ್ರಾಜ್ ಚಿತ್ರದ ಅವರ ಅಭಿನಯ್ಕಕಾಗಿ ಪ್ರಶಸ್ತಿ ಕೂಡ ಸಿಕ್ಕಿದೆ.

910

 ಸುನಿಲ್ ಶೆಟ್ಟಿ: ಹೀರೋ ಪಾತ್ರಗಳಲ್ಲದೆ, ಸುನೀಲ್ ಶೆಟ್ಟಿ  ಚಲನಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಧಡ್ಕನ್ ಮತ್ತು ಮೈ ಹೂ ನಾ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.

1010

ಅಕ್ಷಯ್ ಕುಮಾರ್ : ಅಕ್ಷಯ್ ಕುಮಾರ್ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳನ್ನೂ ಮಾಡಿದ್ದಾರೆ. ಅಜ್ಞಾತವಾಸ್‌, ಕಿಲಾಡಿ 420, ಇಂಟರ್ ನ್ಯಾಷನಲ್ ಕಿಲಾಡಿ, ಬಚ್ಚನ್ ಪಾಂಡೆ ಮುಂತಾದ ಚಿತ್ರಗಳಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ.

Read more Photos on
click me!

Recommended Stories