ಶಾರುಖ್ ಖಾನ್ ಮದುವೆಗೆ ಕಪ್ಪು ಬಣ್ಣದ ಸೂಟ್ ಅನ್ನು ಆಯ್ಕೆ ಮಾಡಿಕೊಂಡರು. ಸ್ಮೃತಿ ಇರಾನಿ ಮತ್ತು ಅವರ ಪತಿ ಜುಬಿನ್ ಇರಾನಿ ಅವರೊಂದಿಗೆ ಫೋಟೋಗೆ ಪೋಸ್ ನೀಡಿರುವ ಶಾರುಖ್ ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.
ಮೌನಿ ರಾಯ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಶಾರುಖ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಮೌನಿ ರಾಯ್ ತಮ್ಮ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಸಿರಿಯಲ್‌ನಲ್ಲಿ ಸ್ಮೃತಿ ಎದುರು ಮಿಹಿರ್ ವಿರಾನಿ ಪಾತ್ರದಲ್ಲಿ ನಟಿಸಿರುವ ರೋನಿತ್ ರಾಯ್ ಕೂಡ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದ ಲ್ಲಿ ಭೋಜ್‌ಪುರಿ ಸೂಪರ್‌ಸ್ಟಾರ್ ಮತ್ತು ಸಂಸದ ರವಿ ಕಿಶನ್ ಕೂಡ ಕಾಣಿಸಿಕೊಂಡಿದ್ದಾರೆ.
'ವರ್ಷಗಳ ಸ್ನೇಹ ಮತ್ತು ಪ್ರೀತಿ ಬೆಳೆಯುತ್ತಲೇ ಇದೆ, ಅಭಿನಂದನೆಗಳು ಶನೆಲ್ ಮತ್ತು ಅರ್ಜುನ್. ಮುಂದೆ ಸುಖಮಯ ವೈವಾಹಿಕ ಜೀವನವನ್ನು ಹಾರೈಸುತ್ತೇನೆ' ಎಂದು ರೋನಿತ್ ರಾಯ್ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ,
ಕಿರುತೆರೆಯ ರಾಣಿ ಏಕ್ತಾಕಪೂರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಏಕ್ತಾ ತಮ್ಮ ತಂದೆ ಬಾಲಿವುಡ್ ನಟ ಜಿತೇಂದ್ರ ಅವರ ಜೊತೆ ಹಾಜರಾಗಿದ್ದರು. ಕ್ಯೂಂಕಿ ಸಾಸು ಭೀ....ಯ ಪ್ರೊಡ್ಯೂಸರ್ ಬಾಲಾಜಿ ಫಿಲ್ಮ್ಸ್ ಆಗಿದ್ದು, ಅದರೊಡತಿ ಏಕ್ತಾ ಕಪೂರ್.
ಕೆಜಿಎಫ್ ನಟಿ ಮೌನಿ ರಾಯ್ ಮತ್ತು ಪತಿ ಸೂರಜ್ ನಂಬಿಯಾರ್ ಕುಟುಂಬದ ಸದಸ್ಯರೊಂದಿಗೆ ಕ್ಯೂಟ್ ಸ್ಮೈಲ್ ಜೊತೆ ಪೋಸ್ ನೀಡಿದ್ದಾರೆ .
ಶನೆಲ್ ಮತ್ತು ಅರ್ಜುನ್ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದರ ನಂತರ ಇಬ್ಬರೂ ಫೆಬ್ರವರಿ 2023 ರಲ್ಲಿ ಮದುವೆಯಾಗಲು ನಿರ್ಧರಿಸಿದರು
ಮಾಧ್ಯಮ ವರದಿಗಳ ಪ್ರಕಾರ, ಕೆನಡಾದ ನಿವಾಸಿಗಳಾದ ಅರ್ಜುನ್ ಮತ್ತು ಶನೆಲ್ ಅವರ ವಿವಾವು ಫೆಬ್ರವರಿ 7 ರಂದು ಹಲ್ದಿ, ಮೆಹೆಂದಿ ಮತ್ತು ಸಂಗೀತ ಸಮಾರಂಭಗಳೊಂದಿಗೆ ಪ್ರಾರಂಭವಾಯಿತು. ಈ ಜೋಡಿ ರಾಜಸ್ಥಾನದಲ್ಲಿ ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು.