Raja Hindustani: ಲಿಪ್‌ಲಾಕ್‌ ಬಗ್ಗೆ ಶಾಕಿಂಗ್‌ ವಿಷಯ ಬಾಯಿಬಿಟ್ಟ ಕರಿಷ್ಮಾ!

First Published Nov 17, 2021, 5:10 PM IST

ಆಮೀರ್ ಖಾನ್  (Raja Hindustani)ಮತ್ತು ಕರಿಷ್ಮಾ ಕಪೂರ್ (Karishma Kapoor) ಅಭಿನಯದ ರಾಜಾ ಹಿಂದೂಸ್ತಾನಿ  (Raja Hindustani) ಸಿನಿಮಾ 25 ವರ್ಷಗಳನ್ನು ಪೂರೈಸಿದೆ. ನವೆಂಬರ್ 15, 1996 ರಂದು ಬಿಡುಗಡೆಯಾದ ಈ ಚಿತ್ರವನ್ನು ಧರ್ಮೇಶ್ ದರ್ಶನ್  (Dharmesh Darshan) ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆಯನ್ನು 1965ರ ಚಲನಚಿತ್ರ ಜಬ್ ಜಬ್ ಫೂಲ್ ಖಿಲೆಯಿಂದ  (Dharmesh Darshan) ತೆಗೆದುಕೊಳ್ಳಲಾಗಿದೆ. ಆ ಚಿತ್ರದಲ್ಲಿ ಶಶಿ ಕಪೂರ್ ಮತ್ತು ನಂದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ರಾಜಾ ಹಿಂದೂಸ್ತಾನಿ ಚಿತ್ರದ ಬಜೆಟ್ ಸುಮಾರು 5.8 ಕೋಟಿ ರೂ.. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿತ್ತು ಮತ್ತು ಸುಮಾರು 73 ಕೋಟಿ ಗಳಿಸಿತು. ಈ ಚಿತ್ರಕ್ಕಾಗಿ ಕರಿಷ್ಮಾ ಕಪೂರ್ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದರು. ಕರಿಷ್ಮಾ ಅವರು ಅಮೀರ್ ಜೊತೆ ಲ್ಡ್ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಆಗ ಸದ್ದು ಮಾಡಿತ್ತು. ಈ ದೃಶ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಶವನ್ನು ಕರಿಷ್ಮಾ ಬಹಿರಂಗ ಪಡಿಸಿದ್ದಾರೆ. 

ಆ ಕಾಲದಲ್ಲಿ ಕಿಸ್ಸಿಂಗ್‌ ಸೀನ್‌ ಮಾಡಲು ಕರಿಷ್ಮಾ ಕಪೂರ್ ತುಂಬಾ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು ಮತ್ತು  ಈ ದೃಶ್ಯದ ಶೂಟಿಂಗ್‌ಗೆ ಸಂಬಂಧಿಸಿದ ಘಟನೆಯೊಂದನ್ನು ನಟಿ ಬಹಿರಂಗ ಪಡಿಸಿದ್ದಾರೆ. ಆದರೆ, ಈ ಸಿನಿಮಾದ ನಂತರ ಕರಿಷ್ಮಾ ಮತ್ತು ಆಮೀರ್ ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ.
 

ರಾಜಾ ಹಿಂದೂಸ್ತಾನಿ ಬಗ್ಗೆ ಸಾಕಷ್ಟು ನೆನಪುಗಳಿವೆ, ಆದರೆ ಈ ಸಿನಿಮಾ ಬಂದಾಗ ಜನರಲ್ಲಿ  ಕಿಸ್ಸಿಂಗ್‌ ಸೀನ್‌' ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಆದರೆ ಈ ದೃಶ್ಯವನ್ನು ಚಿತ್ರೀಕರಿಸಲು ನಮಗೆ ಮೂರು ದಿನಗಳು ಬೇಕಾಯಿತು, ಎಂಬುದು ಬಹುಶಃ ಅವರಿಗೆ ತಿಳಿದಿಲ್ಲ' ಎಂದು ಕರಿಷ್ಮಾ ಕಪೂರ್ ಹೇಳಿದ್ದರು.

'ಈ ಸೀನ್‌ ಯಾವಾಗ ಮುಗಿಯುತ್ತದೆ ಎಂದು ನಾನು ಯೋಚಿಸುತ್ತಿದ್ದೆ. ಫೆಬ್ರುವರಿ ತಿಂಗಳಿನಲ್ಲಿ ಊಟಿಯಲ್ಲಿ ಚಳಿ ಇದ್ದ ಕಾರಣ ಸಂಜೆ 6 ಗಂಟೆಗೆ ಈ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಚಳಿಗೆ ನಾನು ನಡುಗುತ್ತಿದ್ದೆ,' ಎಂದು ಕರಿಷ್ಮಾ ಅವರು ಹೇಳಿದ್ದರು.

ಕರಿಷ್ಮಾ ಕಪೂರ್ 1996 ರ ಬ್ಲಾಕ್‌ಬಸ್ಟರ್ ಸಿನಿಮಾ ರಾಜಾ ಹಿಂದೂಸ್ತಾನಿಯಲ್ಲಿ ನಾಯಕಿ ನಟಿಗಾಗಿ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ. ಈ ಹಿಂದೆ ಐಶ್ವರ್ಯ ರೈಗೆ ಈ ಸಿನಿಮಾದ ಆಫರ್ ನೀಡಿದ್ದರು ಧರ್ಮೇಶ್ ದರ್ಶನ್. ಆದರೆ ಆಗ  ಆಶ್ ಅವರು ನಟನೆಯಲ್ಲಿ ವೃತ್ತಿ ಜೀವನವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ನಿರಾಕರಿಸಿದರು.

ಇದಾದ ನಂತರ ಜೂಹಿ ಚಾವ್ಲಾ ಅವರಿಗೆ ಆಫರ್ ನೀಡಲಾಯಿತು. ಆದರೆ ಆ ದಿನಗಳಲ್ಲಿ, ಜೂಹಿ ಅಮೀರ್ ಖಾನ್ ಅವರೊಂದಿಗೆ ಯಾವುದೋ ವಿಷಯಕ್ಕಾಗಿ ಮನಸ್ತಾಪ ಹೊಂದಿದ್ದರು, ಆದ್ದರಿಂದ ಆಮೀರ್‌ ಜೊತೆ ಅವರು ಸಿನಿಮಾ ಮಾಡಲು ನಿರಾಕರಿಸಿದರು. ಇದಾದ ನಂತರ ನಿರ್ದೇಶಕರು ಪೂಜಾ ಭಟ್ ಅವರನ್ನು ತೆಗೆದುಕೊಳ್ಳಲು ಯೋಚಿಸಿದರು ಆದರೆ ಅವರೂ ಈ ಸಿನಿಮಾದಲ್ಲಿ ನಟಿಸಿಲು  ಸಾಧ್ಯವಾಗಲಿಲ್ಲ. 

ತಾನು ಇದುವರೆಗೂ ಸ್ಕ್ರೀನ್ ಶೇರ್ ಮಾಡದಂತಹ  ನಟಿಯನ್ನು ಆಯ್ಕೆ ಮಾಡುವಂತೆ ಆಮೀರ್ ನಿರ್ದೇಶಕರನ್ನು ಕೇಳಿ ಕೊಂಡರು ಮತ್ತು ಧರ್ಮೇಶ್ ಕರಿಷ್ಮಾ ಕಪೂರ್ ಅವರನ್ನು ಸಿನಿಮಾಕ್ಕೆ ಸಹಿ ಹಾಕಿದರು.

ಚಿತ್ರದ ‘ತೇರೆ ಇಷ್ಕ್ ಮೇ ನಾಚೇಂಗೆ...’ ಹಾಡಿನಲ್ಲಿ ಆಮೀರ್ ನಶೆಯಲ್ಲಿರುವಂತೆ ತೋರಿಸಲಾಗಿದೆ. ಈ ಹಾಡಿಗೆ ನಿಜವಾದ ಫೀಲ್ ತರಲು ಆಮೀರ್ ಖಾನ್ ಒಂದು ಲೀಟರ್ ವೋಡ್ಕಾ ಕುಡಿದಿದ್ದರಂತೆ.

ಆಮೀರ್ ಖಾನ್ ಕೂಡ ರಾಜಾ ಹಿಂದೂಸ್ತಾನಿ ಸಿನಿಮಾದಲ್ಲಿ ಕೆಲಸ ಮಾಡಲು ಸಿದ್ಧರಿರಲಿಲ್ಲ. ಆದರೆ ಈ ಸಿನಿಮಾ ಕಮರ್ಷಿಯಲ್ ಆಗಿ  ಚೆನ್ನಾಗಿ ಮೂಡಿಬರಲಿದೆ ಎಂದು ನಿರ್ದೇಶಕರು ಹೇಳಿದ್ದರು. ಚಿತ್ರದಲ್ಲಿ ಅಮೀರ್-ಕರಿಷ್ಮಾ
ಅವರ ಚುಂಬನದ ದೃಶ್ಯವು ಬಾಲಿವುಡ್ ಚಲನಚಿತ್ರದ ಸುದೀರ್ಘ ಚುಂಬನದ ದೃಶ್ಯವೆಂದು ಪರಿಗಣಿಸಲಾಗಿದೆ. ಈ ದೃಶ್ಯವನ್ನು ಚಿತ್ರೀಕರಿಸುವ ಮುನ್ನ ನಿರ್ದೇಶಕರು ಚಿಂತಿತರಾಗಿದ್ದರಂತೆ. 
 

ಈ ಸಿನಿಮಾದಲ್ಲಿ, ಕರಿಷ್ಮಾ ಕಪೂರ್ ಅವರ ನಟನೆ ಮತ್ತು ಮೇಕ್ ಓವರ್‌ಗೆ ಹೆಸರುವಾಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಕರಿಷ್ಮಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದರು. ಈ ಸಿನಿಮಾ 4 ಗಂಟೆ 24 ನಿಮಿಷಗಳದಾಗಿತ್ತು. ಆದರೆ ಅದನ್ನು 2 ಗಂಟೆ 54 ನಿಮಿಷಗಳಿಗೆ ಎಡಿಟ್ ಮಾಡಲಾಗಿದೆ. 

ಆಮೀರ್ ಖಾನ್ ಲಾಲ್‌ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಫೆಬ್ರವರಿ 2022 ರಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಆಮೀರ್ ಜೊತೆ ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅದೇ ಸಮಯದಲ್ಲಿ, ಕರಿಷ್ಮಾ ಕಪೂರ್ ದೀರ್ಘಕಾಲದಿಂದ ಚಲನಚಿತ್ರಗಳಿಂದ ದೂರವಿದ್ದಾರೆ.

click me!