ಬಾಲಿವುಡ್‌ನಲ್ಲಿ ವೆಡ್ಡಿಂಗ್ ಸೀಸನ್ ಜೋರಾಗಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಡಿಸೆಂಬರ್ ಮದುವೆಗೆ ಈಗಾಗಲೇ ಹೈಲೈಟ್ ಆಗಿದ್ದಾರೆ. ಮತ್ತೊಂದೆಡೆ, ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಚಂಡೀಗಢದಲ್ಲಿ ಅದ್ದೂರಿ ಸಮಾರಂಭದೊಂದಿಗೆ ಮದುವೆಯಾಗಿದ್ದಾರೆ.
ಇದೀಗ ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ರಾತ್ರಿ, ಅನುಷ್ಕಾ, ಆದಿತ್ಯ ಮತ್ತು ಅವರ ಕುಟುಂಬಗಳು ಮತ್ತು ಸ್ನೇಹಿತರಿಗಾಗಿ ನಗರದಲ್ಲಿ ಸೂಪರ್ ಸಂಗೀತ್ ಕಾರ್ಯಕ್ರಮ ಆಯೋಜಿಸಿತ್ತು. ಬಹಳಷ್ಟು ಸೆಲೆಬ್ರಿಟಿಗಳು ಸಮಾರಂಭದ ಕಳೆ ಹೆಚ್ಚಿಸಿದ್ದಾರೆ.
ಆಲಿಯಾ ಭಟ್, ಕ್ರಿಸ್ಟಲ್ ಡಿಸೋಜಾ, ವಾಣಿ ಕಪೂರ್, ಭಾಗ್ಯಶ್ರೀ, ರವೀನಾ ಟಂಡನ್, ಭೂಮಿ ಪೆಡ್ನೇಕರ್ ಮತ್ತು ಇತರರು ಎಲ್ಲಾ ಸ್ಟೈಲಿಷ್ ಲುಕ್‌ನಲ್ಲಿದ್ದರು. ತಮ್ಮ ಅತ್ಯುತ್ತಮ ಉಡುಗೆಯಲ್ಲಿ ಶೈನ್ ಆಗಿದ್ದಾರೆ. ಆದರೂ ಆಲಿಯಾ ಭಟ್ ಅವರ ಆಧುನಿಕ ಶೈಲಿಯ ಲೆಹೆಂಗಾ-ಚೋಲಿಗಾಗಿ ನಟಿ ಟ್ರೋಲ್ ಮಾಡಲ್ಪಟ್ಟರು.
ಕ್ರಾಸ್ ನೆಕ್ಡ್ ಬ್ಲೌಸ್ ಆಗಿದ್ದು, ಬೆನ್ನನ್ನು ತೆರೆದಿತ್ತು. ಬ್ರಹ್ಮಾಸ್ತ್ರ ನಟಿ ಗಿಣಿ ಹಸಿರು ಮತ್ತು ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು. ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಅವರ ಸಂಗೀತದ ಆಲಿಯಾ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಬಹಳಷ್ಟು ಫ್ಯಾಶನ್ ಉತ್ಸಾಹಿಗಳು ಆಕೆಯ ಸ್ಟೈಲಿಂಗ್ ಅನ್ನು ಇಷ್ಟಪಟ್ಟಿದ್ದಾರೆ. ಆದರೆ ಬಹುಪಾಲು ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಿದ್ದಾರೆ.
ಸಾಂಪ್ರದಾಯಿಕ ಉಡುಪಿಗೆ RIP ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ವರ್ಷದ ಫ್ಯಾಷನ್ ದುರಂತ ಪ್ರಶಸ್ತಿ MISS ALIA BHATTT ಎಂದು ಕಾಮೆಂಟ್ ಮಾಡಿದ್ದಾರೆ.
ನೆಟಿಜನ್‌ಗಳಲ್ಲಿ ಒಬ್ಬರು ನಟಿಯನ್ನು ಬಿಗ್ ಬಾಸ್ OTT ನ ಉರ್ಫಿ ಜಾವೇದ್‌ಗೆ ಹೋಲಿಸಿದ್ದಾರೆ. ನಟಿಯ ಬ್ಲೌಸ್ ಉರ್ಫಿ ಜಾವೇದ್ ಫ್ಯಾಷನ್ ಹೋಲುತ್ತದೆ. ಕೆಲವರು ವಾಂತಿ ಮಾಡುವ ಎಮೋಜಿಗಳನ್ನು ಸಹ ಹಾಕಿದ್ದಾರೆ.
ಉರ್ಫಿ ಪಾರ್ಟ್ 2 ಎಂದು ನಟಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು ಆಲಿಯಾ ತಮ್ಮ ಬ್ಲೌಸ್ ಸ್ಟೈಲ್‌ನಿಂದಾಗಿ ಟೀಕೆಗೆ ಗುರಿಯಾಗಿದ್ದಾರೆ