Published : Jun 19, 2025, 10:21 AM ISTUpdated : Jun 19, 2025, 11:03 AM IST
‘ಅಮೀರ್ ಖಾನ್ ನೋಡಿದ್ರೆ ಅರವತ್ತನೆಯ ವಯಸ್ಸಿಗೆ ಗೌರಿ ಜೊತೆ ಮದುವೆ ಆಗಲು ಹೊರಟಿದ್ದಾರೆ. ನಿಮ್ಮ ಕಥೆ ಏನು?’ ಅಂತ ಬಾಲಿವುಡ್‌ನ ಮಿ ಬ್ಯಾಚುಲರ್ ಅಂತಲೇ ಫೇಮಸ್ ಆದ ಸಲ್ಲೂ ಬಾಯ್‌ಗೆ ಪ್ರಶ್ನೆ ಕೇಳಲಾಗಿದೆ.
‘ಅಮೀರ್ ಖಾನ್ ಮಿ.ಪರ್ಫೆಕ್ಷನಿಸ್ಟ್ ಅಲ್ವಾ. ಅವ್ರು ಮದುವೆ ವಿಚಾರದಲ್ಲೂ ಅದನ್ನೇ ಹುಡುಕ್ತಿದ್ದಾರೆ. ಎಲ್ಲೀವರೆಗೆ ಪರ್ಫೆಕ್ಟ್ ಅನಿಸೋದಿಲ್ವೋ ಅಲ್ಲೀವರೆಗೆ...’ಕಾಮಿಡಿ ಶೋ ಒಂದರಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಅಮೀರ್ ಖಾನ್ ಕಾಲೆಳೆದಿದ್ದು ಹೀಗೆ.
25
‘ಅಮೀರ್ ಖಾನ್ ನೋಡಿದ್ರೆ ಅರವತ್ತನೆಯ ವಯಸ್ಸಿಗೆ ಗೌರಿ ಜೊತೆ ಮದುವೆ ಆಗಲು ಹೊರಟಿದ್ದಾರೆ. ನಿಮ್ಮ ಕಥೆ ಏನು?’ ಅಂತ ಬಾಲಿವುಡ್‌ನ ಮಿ ಬ್ಯಾಚುಲರ್ ಅಂತಲೇ ಫೇಮಸ್ ಆದ ಸಲ್ಲೂ ಬಾಯ್‌ಗೆ ಪ್ರಶ್ನೆ ಕೇಳಲಾಗಿದೆ.
35
ಅದಕ್ಕೆ ಕಾಮಿಡಿಯಾಗಿ ಉತ್ತರಿಸಿದ ಸಲ್ಮಾನ್, ‘ಅಮೀರ್ ಎಷ್ಟಾದರೂ ಪರ್ಫೆಕ್ಷನಿಸ್ಟ್ ಅಲ್ವಾ, ಮದುವೆಯಲ್ಲೂ ಮತ್ತೆ ಮತ್ತೆ ಅದನ್ನೇ ಹುಡುಕ್ತಿದ್ದಾರೆ’ ಎಂದು ಕಾಲೆಳೆದಿದ್ದಾರೆ.
ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಸಲ್ಮಾನ್ ಮಾತನಾಡಿ, ರಶ್ಮಿಕಾ ಮಂದಣ್ಣ ಅವರು ಹಾರ್ಡ್ ವರ್ಕರ್, ಆಕೆ ಅದ್ಭುತ ನಟಿ. ನಾವು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದ್ದಾಗ, ಅವರು ಬೆಳಿಗ್ಗೆ 6 ಗಂಟೆಗೆ ಸಿದ್ಧರಾಗಿ ‘ಪುಷ್ಪ 2’ ಚಿತ್ರೀಕರಣದಲ್ಲಿ ಇರುತ್ತಿದ್ದರು.
55
ಆ ಚಿತ್ರದ ಚಿತ್ರೀಕರಣ ಮುಗಿದ ನಂತರ, ಅವರು ನಮ್ಮೊಂದಿಗೆ ಶೂಟಿಂಗ್‌ಗೆ ಬರುತ್ತಿದ್ದರು. ಅವರಿಗೆ ಜ್ವರ ಬಂದಾಗಲೂ, ನಟಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದರು. ಇನ್ನೂ ಅವರು ಒಂದು ಸೆಟ್‌ನಿಂದ ಮತ್ತೊಂದು ಸೆಟ್‌ಗೆ ಹೋಗುವ ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯತ್ತಿದ್ದರು ಎಂದು ಸಲ್ಮಾನ್ ಹೇಳಿದ್ದಾರೆ.