ಬೆಚ್ಚಿಬೀಳಿಸಿದ ಫ್ಲಾಪ್ ಚಿತ್ರ ಲಾಲ್ ಸಿಂಗ್ ಚಡ್ಡಾದ ಅಂತರಾಷ್ಟ್ರೀಯ ಬಾಕ್ಸ್ ಆಫೀಸ್ ಕಲೆಕ್ಷನ್ !

Published : Aug 24, 2022, 04:17 PM IST

ಆಮೀರ್ ಖಾನ್ (Aamir Khan) ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ (Laal Singh Chaddha) ಆಫೀಸ್‌ನಲ್ಲಿ ಕೆಟ್ಟ ಸ್ಥಿತಿಯಲ್ಲಿದೆ. 180 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಿಡುಗಡೆಯಾದಾಗಿನಿಂದ ಕೇವಲ 56 ಕೋಟಿ ಗಳಿಸಿದೆ. ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಇಂತಹದ್ದೊಂದು ಸುದ್ದಿ ಹೊರ ಬರುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವರದಿಗಳನ್ನು ನಂಬುವುದಾದರೆ, ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆಗಿರಬಹುದು  ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಸಖತ್‌ ಸದ್ದು ಮಾಡುತ್ತಿದೆ. ಆಮೀರ್ ಖಾನ್ ಫ್ಲಾಪ್ ಫಿಲ್ಮ್ ಲಾಲ್ ಸಿಂಗ್ ಚಡ್ಡಾ ಅಂತರಾಷ್ಟ್ರೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲರನ್ನೂ ಬೆಚ್ಚಿಬೀಳಿಸುತ್ತದೆ.

PREV
18
   ಬೆಚ್ಚಿಬೀಳಿಸಿದ ಫ್ಲಾಪ್ ಚಿತ್ರ ಲಾಲ್ ಸಿಂಗ್ ಚಡ್ಡಾದ ಅಂತರಾಷ್ಟ್ರೀಯ ಬಾಕ್ಸ್ ಆಫೀಸ್ ಕಲೆಕ್ಷನ್ !

ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ಲಾಲ್ ಸಿಂಗ್ ಚಡ್ಡಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಮಾಡಿದೆ ಈ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗಳಿಕೆ ಕಂಡಿದ್ದು, ವ್ಯಾಪಾರ ಮಾಡುವಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ ಎನ್ನಲಾಗಿದೆ.
 

28

ಈ ವರ್ಷ ಆಮೀರ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಾಖಲೆಯನ್ನು ಮಾಡಿತು ಮತ್ತು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು  ಎಂದು ಹೇಳಲಾಗುತ್ತಿದೆ.ಇದು 4 ಬಾಲಿವುಡ್ ಚಿತ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದರು.
 

38

ಲಾಲ್ ಸಿಂಗ್ ಚಡ್ಡಾ ಸಿನಿಮಾವು ಗಂಗೂಬಾಯಿ ಕಥಿವಾಡಿ, ದಿ ಕಾಶ್ಮೀರ್ ಫೈಲ್ಸ್ ಮತ್ತು ಭೂಲ್ ಭುಲೈಯಾ 2 ನಂತಹ ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆಯ ವಿಷಯದಲ್ಲಿ ಸೋಲಿಸಿದೆ. 

48

ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ಒಂದು ವಾರದಲ್ಲಿ $ 7.5 ಮಿಲಿಯನ್ ಅಂದರೆ ಸುಮಾರು 60 ಕೋಟಿ ಗಳಿಸಿದೆ. ಈ ಅಂಕಿ-ಅಂಶವನ್ನು ಇಲ್ಲಿಯವರೆಗೆ ಯಾವುದೇ ಚಿತ್ರ ಮುಟ್ಟಿಲ್ಲ. ಗಂಗೂಬಾಯಿ ಕಾಠಿವಾಡಿ 59 ಕೋಟಿ, ಭೂಲ್ ಭುಲಯ್ಯ 2 47 ಕೋಟಿ ಮತ್ತು ಕಾಶ್ಮೀರ ಫೈಲ್ಸ್ ಸುಮಾರು 45 ಕೋಟಿ ವ್ಯವಹಾರ ಮಾಡಿದೆ. 


 

58

 ಬಾಲಿವುಡ್ ಹಂಗಾಮಾ ವರದಿಗಳ ಪ್ರಕಾರ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರ ಫಾರೆಸ್ಟ್ ಗಂಪ್ ನ ಹಿಂದಿ ರಿಮೇಕ್ ಲಾಲ್ ಸಿಂಗ್ ಚಡ್ಡಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹವಾ ಸೃಷ್ಟಿಸಿದೆ ಈ ಚಿತ್ರವು ಗಳಿಕೆಯ ವಿಷಯದಲ್ಲಿ ಭೂಲ್ ಭುಲೈಯಾ 2, ಗಂಗೂಬಾಯಿ ಕಥಿವಾಡಿ ಮತ್ತು ದಿ ಕಾಶ್ಮೀರ್ ಫೈಲ್ಸ್‌ನಂತಹ ಹಿಟ್ ಚಿತ್ರಗಳನ್ನು ಹಿಂದಿಕ್ಕಿದೆ. 
 

68

ಆಮೀರ್ ಅವರ ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಈ ಚಿತ್ರದೊಂದಿಗೆ ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ ಚಿತ್ರವೂ ಬಿಡುಗಡೆಯಾಗಿತ್ತು. ಎರಡೂ ಚಿತ್ರಗಳಲ್ಲಿ ಭಾರಿ ಘರ್ಷಣೆ ನಡೆದಿದ್ದು, ಇದರಿಂದಾಗಿ ಎರಡೂ ಚಿತ್ರಗಳು ಸಂಕಷ್ಟಕ್ಕೆ ಸಿಲುಕಬೇಕಾಯಿತು. ಇದಲ್ಲದೇ ಸಾಮಾಜಿಕ ಬಹಿಷ್ಕಾರದಿಂದ ಚಿತ್ರಕ್ಕೆ ಪ್ರೇಕ್ಷಕರು ಸಿಗಲಿಲ್ಲ.


 


 

78

ಚಿತ್ರದ ಫ್ಲಾಪ್ ನಂತರ, ಆಮೀರ್ ಖಾನ್ ಈಗ ಕೆಲಸದಿಂದ ವಿರಾಮ ತೆಗೆದುಕೊಂಡು ಸುಮಾರು 2 ತಿಂಗಳ ಕಾಲ ಯುಎಸ್‌ಗೆ ಹೋಗುತ್ತಿದ್ದಾರೆ. ಇಲ್ಲೇ ವಿಶ್ರಾಂತಿ ಪಡೆದು ಹೊಸ ಸಿನಿಮಾವನ್ನು ಪರಿಗಣಿಸಲಿದ್ದಾರೆ ಎನ್ನಲಾಗುತ್ತಿದೆ.

88

ಸುದ್ದಿ ಪ್ರಕಾರ, ಅಮೀರ್ ಈಗ ಸ್ಪೋರ್ಟ್ಸ್ ಡ್ರಾಮಾ ಚಿತ್ರದಲ್ಲಿ ಕೆಲಸ ಮಾಡಲು ಹೊರಟಿದ್ದಾರೆ. ಇದು ಸ್ಪ್ಯಾನಿಷ್ ಚಿತ್ರವಾಗಿದ್ದು, ಹಿಂದಿಗೆ ರಿಮೇಕ್ ಮಾಡಲು ಯೋಚಿಸುತ್ತಿದ್ದಾರೆ.

Read more Photos on
click me!

Recommended Stories