1988ರಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೊಸ ಮಖವೊಂದು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿತ್ತು. ತನ್ನ ಚಾಕೊಲೇಟ್ ಬಾಯ್ ಲುಕ್ ಮತ್ತು ಆಕರ್ಷಕ ಸ್ಮೈಲ್‌ನೊಂದಿಗೆ, ಹುಡುಗ ತನ್ನ ಚೊಚ್ಚಲ ಚಿತ್ರ ಖಯಾಮತ್ ಸೆ ಕಯಾಮತ್ ತಕ್‌ನಲ್ಲಿ ತನ್ನ ದುರಂತ ಪ್ರೇಮಕಥೆಯೊಂದಿಗೆ ಎಲ್ಲರನ್ನೂ ಕಣ್ಣೀರು ಸುರಿಸುವಂತೆ ಮಾಡಿ ಮನಸ್ಸು ಗೆದ್ದರು. ಇದು ಬೇರೆ ಯಾರು ಅಲ್ಲ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್.
ಆಮೀರ್ ಅವರ ಸೋದರಸಂಬಂಧಿ ಮನ್ಸೂರ್ ಖಾನ್ ಅವರು ಬಾಲ್ಯದಲ್ಲಿ 'ಬಹಳ ಶಾಂತ ಮತ್ತು ನಾಚಿಕೆ ಸ್ವಭಾವದ' ಹುಡುಗ ಎಂದು ನೆನಪಿಸಿಕೊಳ್ಳುತ್ತಾರೆ. ಕಯಾಮತ್ ಸೆ ಕಯಾಮತ್ ತಕ್, ಹಮ್ ಹೇ ರಹೀ ಪ್ಯಾರ್ ಕೆ ಮತ್ತು ದಿಲ್ ಮುಂತಾದ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದ ನಂತರ, ಸರ್ಫರೋಶ್, ಲಗಾನ್, ದಿಲ್ ಚಾಹ್ತಾ ಹೈ, ರಂಗ್ ದೇ ಬಸಂತಿ ನಂತಹ ಚಲನಚಿತ್ರಗಳನ್ನು ನೀಡಲು ಆಮೀರ್ ತನ್ನ ಕಂಫರ್ಟ್ ಜೋನ್‌ನಿಂದ ಹೊರ ಬಂದರು.
ನಿಧಾನವಾಗಿ, ತನ್ನ ವಿಶಿಷ್ಟವಾದ, ಸೃಜನಾತ್ಮಕ ಆಲೋಚನೆಗಳೊಂದಿಗೆ ಟ್ರೆಂಡ್‌ಸೆಟರ್ ಆದ ನಟ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂಬ ಟ್ಯಾಗ್ ಅನ್ನು ಗಳಿಸಿ ಕೊಂಡರು. ಗಜನಿ ಚಿತ್ರದ ಮೂಲಕ ಬಾಲಿವುಡ್‌ಗೆ 100 ಕೋಟಿ ರೂ ಕ್ಲಬ್‌ಗೆ ಪರಿಚಯಿಸಿದವರು ಇವರು. ಅಸಾಂಪ್ರದಾಯಿಕ ವಿಷಯಗಳನ್ನು ವಿವರಿಸಲು ಎತ್ತಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಆಮೀರ್ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ತಮ್ಮದೇ ಆದ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ಆಮೀರ್ ಖಾನ್ ಅವರಿಗೆ ಚೆಸ್ ಆಡುವುದು ಅವರ ಫೇವರೇಟ್ ಟೈಮ್‌ಪಾಸ್ ಎಂದು ಸೂಪರ್‌ಸ್ಟಾರ್ ಬಹಿರಂಗಪಡಿಸಿದ್ದರು. ವಾಸ್ತವವಾಗಿ, ಆರು ವರ್ಷದವರಿಗಿದ್ದಾಗ ತನ್ನ ಅಜ್ಜಿಯಿಂದ ಈ ಆಟವನ್ನು ಆಡಲು ಕಲಿತರು. ಇತ್ತೀಚೆಗೆ ವಿಶ್ವ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಅವರ ಬಯೋ ಪಿಕ್‌ನಲ್ಲಿ ಆಮೀರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ಹೇಳಿದರು.
ದೇವ್ ಆನಂದ್ ಅವರು ಪ್ಯಾರ್ ಕಾ ತರಾನಾದಲ್ಲಿ ಆಮೀರ್ ನಟಿಸಲು ಬಯಸಿದ್ದರು 1997 ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಲೆಜೆಂಡ್ ನಟ-ನಿರ್ಮಾಪಕ ಇದನ್ನು ಬಹಿರಂಗಪಡಿಸಿದರು. ದೇವ್ ಆನಂದ್ ಅವರು ಅಮೀರ್‌ಗೆ ಈ ಚಿತ್ರವನ್ನು ಆಫರ್ ಮಾಡಿದ್ದರು, ಆದರೆ ಅವರು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆಂದರೆ ಅವರು ಆ ಸಮಯದಲ್ಲಿ ಕೋಪನ್ ಹ್ಯಾಗನ್ ನಲ್ಲಿ ಚಿತ್ರದ ಚಿತ್ರೀಕರಣದ ಡೇಟ್‌ಗಳನ್ನು ಹೊಂದಿದ್ದರು.
ಎಕ್ಸ್‌ಪ್ರೆಸ್‌ಫುಡೀ.ಕಾಮ್‌ನೊಂದಿಗಿನ ಚಾಟ್‌ನಲ್ಲಿ ಅವರು ಬಿರಿಯಾನಿ ಮತ್ತು ಶಾಹಿ ರೋಗನ್ ಜೋಶ್ ಅವರ ಫೇವರೇಟ್ ಪುಡ್ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರು ಈಗ ಸಸ್ಯಾಹಾರಿ ಆಹಾರವನ್ನು ತಿನ್ನುವುದನ್ನು ಎಂಜಾಯ್ ಮಾಡುತ್ತಾರೆ ಎಂದೂ ಹೇಳಿದ್ದರು
ಆಮೀರ್ ಅವರ ಸಹೋದರ ಫೈಸಲ್ ಖಾನ್ ಅವರು ತಮ್ಮ ಸಂದರ್ಶನವೊಂದರಲ್ಲಿ ಅವರು ಮತ್ತು ಆಮೀರ್ ತಮ್ಮ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಪೀಠೋಪಕರಣಗಳು, ಗೋಡೆಗಳು ಮತ್ತು ಫ್ಯಾನ್ ಸೇರಿದಂತೆ ಸಂಪೂರ್ಣ ಮನೆಯನ್ನು ಬಲೂನ್‌ಗಳಿಂದ ಅಲಂಕರಿಸುತ್ತಾರೆ ಎಂದು ಹೇಳಿದ್ದರು.