ಮಿಡಲ್ ಫಿಂಗರ್‌ ಪೋಸ್ಟ್‌, ಟ್ರೋಲಿಗರ ಬಾಯಿ ಮುಚ್ಚಿಸಿದ ನಟಿ ಸಮಂತಾ!

First Published | Mar 14, 2022, 1:30 PM IST

ತೆಲುಗು ನಟಿ ಸಮಂತಾ ರುತ್ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ವಿಚಾರಕ್ಕೆ ಮತ್ತು ಫ್ಯಾಷನ್ ಆಯ್ಕೆಗೆ ಪದೇ ಪದೇ ಟ್ರೋಲ್‌ ಆಗುತ್ತಾರೆ. ತಾಳ್ಮೆಯಿಂದಲೇ ಅವರಿಗೆ ಉತ್ತರ ಕೊಟ್ಟಿರುವ ರೀತಿಗಳಿದು.............

2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಮಂತಾ ಟ್ರಿಪ್‌ನಲ್ಲಿ ಬಿಕಿನಿ ಧರಿಸಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದರು. ಈ ಫೋಟೋಗೆ ತುಂಬಾನೇ ನೆಗೆಟಿವ್ ಆಗಿ ಕಾಮೆಂಟ್‌ಗಳು ಹರಿದು ಬಂದಿತ್ತು. 

ಇನ್‌ಸ್ಟಾಗ್ರಾಂನಲ್ಲಿ ಮಿಡಲ್ ಫಿಂಗರ್‌ ಫೋಟೋ ಹಾಕಿ 'ನೀವೆಲ್ಲಾ ಹೇಳಿದ ರೀತಿಯಲ್ಲಿ ನಾನು ಮದುವೆ ನಂತರ ಜೀವನ ನಡೆಸಬೇಕು ಎಂದವರಿಗೆ ಇದು' ಎಂದು ಸ್ಯಾಮ್ ಬರೆದುಕೊಂಡಿದ್ದರು.
 

Tap to resize

'ನಿನ್ನ ಲೈಫ್‌ ನಿನಗೆ ಮಾತ್ರವಲ್ಲ ನಿನ್ನ ಮುಂದಿನ ಜನರೇಷನ್‌ ಕೂಡ ಇದೇ ಫಾಲೋ ಮಾಡುತ್ತದೆ. ನಾನು ನೋಡುತ್ತೀನಿ ಎಷ್ಟು ದಿನ ಅಕ್ಕಿನೇನಿ ಇದೆಲ್ಲಾ ಸಹಿಸುತ್ತಾನೆ' ಎಂದು ನೆಟ್ಟಿಗನೊಬ್ಬ ಸ್ಯಾಮ್ ಸ್ಟೈಲಿಷ್‌ ಫೋಟೋಗೆ ಕಾಮೆಂಟ್ ಮಾಡಿದ್ದ.

'ನಮ್ಮ ಮುಂದಿನ ಜನರೇಷನ್ ಅರ್ಥ ಮಾಡಿಕೊಳ್ಳುವುದು ನಿಮ್ಮನ್ನು ನೋಡಿ. ಕ್ಯಾರೆಕ್ಟರ್‌ನ ನೋಡಿ ಜಡ್ಜ್‌ ಮಾಡಬಾರದು ಧರಿಸುವ ಬಟ್ಟೆಯನ್ನು ನೋಡಿ ಮಾಡಬೇಕು ಎಂದು. ಈ ರೀತಿ ಯೋಚನೆ ಮಾಡುವುದಕ್ಕೆ ನಾಚಿಕೆ ಆಗಬೇಕು' ಎಂದು ಸಮಂತಾ ಉತ್ತರ ಕೊಟ್ಟಿದ್ದರು. 

ವಿಚ್ಚೇಧನ ಬಳಿಕ ಸಮಂತಾ ಅಕ್ಕಿನೇನಿ ಕುಟುಂಬದಿಂದ ಕೋಟಿಯಷ್ಟು ಲಾಭ ಪಡೆದುಕೊಂಡಿದ್ದಾರೆ ಹಾಗೆ ಹೀಗೆ ಎಂದು ಗಾಸಿಪ್ ಹಬ್ಬಿತ್ತು. ಟ್ಟಿಟರ್‌ನಲ್ಲಿ ಸಮಂತಾ ತಾಳ್ಮೆಯಿಂದ ಉತ್ತರ ಕೊಟ್ಟರು. 

'ಸಮಂತಾ ಈಗ ಡಿವೋರ್ಸಿ ಆಕೆ ಸೆಕೆಂಡ್ ಹ್ಯಾಂಡ್ ಆಗಿದ್ದಾಳೆ 50 ಕೋಟಿ ಹಣವನ್ನು ಜೆಂಟಲ್‌ಮ್ಯಾನ್ ಕುಟುಂಬದಿಂದ ಕಳ್ಳತನ ಮಾಡಿದ್ದಾಳೆ' ಎಂದು ನೆಟ್ಟಿಗನೊಬ್ಬ ಬರೆದಿದ್ದ. 'ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಸಮಂತಾ ಉತ್ತರ ಕೊಟ್ಟರು.

 ಜಂಕ್‌ ಫುಡ್‌ಗಳ ಜಾಹೀರಾತುಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. 'ಒಂದು ಸಣ್ಣ ಪ್ಯಾಕೆಟ್‌ ಕುರ್ಕುರೆ ಆದರೂ ಸಮಂತಾ ತಿನ್ನಬೇಕು. ಅವರು ಮಾತ್ರ ಸಲಾಡ್, ಒಳ್ಳೆ ಆಹಾರ ತಿಂದು ನಮಗೆ ಮಾತ್ರ ಈ ರೀತಿ ಕೆಟ್ಟ ಫುಡ್‌ ತಿನ್ನುವುದಕ್ಕೆ ಹೇಳುತ್ತಾರೆ' ಎಂದು ನೆಟ್ಟಿಗ ಟ್ವೀಟ್ ಮಾಡಿದ್ದ.

ಹೌದು ನಾನು ಜಂಕ್‌ ಫುಡ್‌ ತಿನ್ನುತ್ತೀನಿ. ಈ ಭಾನುವಾರ ನಾನು ತಿನ್ನುವ ಆಹಾರ ಫೋಟೋವನ್ನು ತಪ್ಪದೆ ನಿಮಗೆ ಕಳುಹಿಸುತ್ತೇನೆ. ನಾನು ಆರೋಗ್ಯಕರ ಆಹಾರ ಸೇವಿಸುತ್ತೇನೆ ಹಾಗೇ ಚಿಟ್‌ ದಿನಕ್ಕೂ ಕಾಯುತ್ತೇನೆ.  ಎಲ್ಲರಂತೆ ನನಗೂ ಕುರ್ಕುರೆ ಅಂದ್ರೆ ತುಂಬಾನೇ ಇಷ್ಟ ಎಂದು ಸ್ಯಾಮ್ ಉತ್ತರ ಕೊಟ್ಟಿದ್ದರು.

Latest Videos

click me!