ಮಿಸ್ ವರ್ಲ್ಡ್ ಆಗೋಕು ಮುಂಚೆಯೇ ಐಶ್ವರ್ಯಾ ರೈಗಿತ್ತು ಸಿನಿ ಆಫರ್ಸ್!

Published : Jun 26, 2024, 05:23 PM ISTUpdated : Jun 26, 2024, 05:33 PM IST

1994 ರಲ್ಲಿ ಅವರು ವಿಶ್ವ ಸುಂದರಿ ಕಿರೀಟವನ್ನು ಪಡೆದಾಗಿನಿಂದ, ಐಶ್ವರ್ಯಾ ರೈ ಬಚ್ಚನ್ ಮನೆ ಮಾತಾಗಿದ್ದಾರೆ. ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಖ್ಯಾತಿ ಪಡೆದಿರುವ ಐಶ್ವರ್ಯಾ ರೈ ಅವರ ಹಳೆಯ ಅಪರೂಪದ ಫೋಟೋಗಳು ಇಲ್ಲಿವೆ.   

PREV
114
ಮಿಸ್ ವರ್ಲ್ಡ್ ಆಗೋಕು ಮುಂಚೆಯೇ ಐಶ್ವರ್ಯಾ ರೈಗಿತ್ತು ಸಿನಿ ಆಫರ್ಸ್!

ಇಷ್ಟು ವರ್ಷಗಳಲ್ಲಿ, ಐಶ್ವರ್ಯಾ ರೈ ಬಚ್ಚನ್ ಹಲವಾರು ಸಂದರ್ಭಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸಿದ್ದಾರೆ.

214

ಇದುವರೆಗೂ 40 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯಾ ರೈ ಅವರು  ಹಲವಾರು ಪುರಸ್ಕಾರ ಮತ್ತು ಬಿರುದುಗಳನ್ನು ಪಡೆದಿದ್ದಾರೆ.

314

 47 ವರ್ಷ ವಯಸ್ಸಿನ ಐಶ್ವರ್ಯಾ ರೈ ಬಚ್ಚನ್ ಅವರು ಇಂದಿಗೂ ತಮ್ಮ ಸೌಂದರ್ಯದಿಂದ  ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಪ್ರತಿಯೊಬ್ಬ ಅಭಿಮಾನಿಗಳು ತಿಳಿದುಕೊಳ್ಳಬೇಕಾದ  ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

414

ಐಶ್ವರ್ಯಾ ತನ್ನ ಮೊದಲ ಜಾಹೀರಾತಿನಲ್ಲಿ ನಟಿಸಿದಾಗ ಕೇವಲ 9 ನೇ ತರಗತಿಯಲ್ಲಿದ್ದರು. ಕ್ಯಾಮ್ಲಿನ್ ಪೆನ್ಸಿಲ್‌ಗಳಿಗಾಗಿ ತಮ್ಮ ಮೊದಲ ಜಾಹೀರಾತನ್ನು ಮಾಡಿದರು 

514

ನಂತರ 1993ರಲ್ಲಿ ಪೆಪ್ಸಿ ಜನಪ್ರಿಯ ಜಾಹೀರಾತಿನಲ್ಲಿ ಸೂಪರ್‌ಸ್ಟಾರ್‌ ಅಮೀರ್ ಖಾನ್ ಜೊತೆ ಕಾಣಿಸಿಕೊಂಡ ನಂತರ ಐಶ್ವರ್ಯಾ ಎಲ್ಲರ ಗಮನ ಸೆಳೆದರು.

614

ಮಿಸ್ ವರ್ಲ್ಡ್ ಕಿರೀಟವನ್ನು ಅಲಂಕರಿಸುವ ಮೊದಲೇ ಐಶ್ವರ್ಯಾ ರೈ ಅವರು ಜನಪ್ರಿಯವಾಗಿದ್ದರು. ಹಲವಾರು ಚಲನಚಿತ್ರಗಳ ಅಫರ್ಸ್ ಆ ಮೊದಲೇ ಅವರಿಗಿತ್ತು.

714

ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸುವ ಮೊದಲೇ ಅವರಿಗೆ  ಕನಿಷ್ಠ ನಾಲ್ಕು ಚಿತ್ರಗಳ ಆಫರ್ಸ್ ಇದ್ದವು. ಆದರೆ  ಮಿಸ್ ಇಂಡಿಯಾದಲ್ಲಿ ಭಾಗವಹಿಸಲು ನಿರ್ಧರಿಸಿದ ಕಾರಣ ಅವರು ಸಿನಿಮಾದಿಂದ ಹಿಂದೆ ಸರಿದರು ಎಂದು ಸ್ವತಃ ನಟಿ ಸಂದರ್ಶನವೊಂದರಲ್ಲಿ ಹೇಳಿದ್ದರು.

814

ನಾನು ಮಿಸ್ ಇಂಡಿಯಾ ಪೇಜೆಂಟ್‌ನಲ್ಲಿ ಭಾಗವಹಿಸದೇ ಇದ್ದಿದ್ದರೆ, ರಾಜಾ ಹಿಂದೂಸ್ತಾನಿ [1996] ನನ್ನ ಮೊದಲ ಚಿತ್ರವಾಗುತ್ತಿತ್ತು ಎಂದು ನಟಿ ಹಿಂದೆ ಬಹಿರಂಗ ಪಡಿಸಿದ್ದರು.

914

ಮಾಡೆಲಿಂಗ್ ಮತ್ತು ನಟನೆಯು ಬಾಲಿವುಡ್ ಐಶ್ವರ್ಯಾರ ಮೊದಲ ವೃತ್ತಿ ಆಯ್ಕೆಗಳಾಗಿರಲಿಲ್ಲ. ಆರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯಲು ಬಯಸಿದ್ದರು ಮತ್ತು ಅವರ ನೆಚ್ಚಿನ ವಿಷಯವೆಂದರೆ ಪ್ರಾಣಿಶಾಸ್ತ್ರ. 

1014

ನಂತರ, ಅವರು ಮುಂಬೈನ ರಚನಾ ಸಂಸದ್ ಅಕಾಡೆಮಿ ಆಫ್ ಆರ್ಕಿಟೆಕ್ಚರ್‌ನಲ್ಲಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವ ಆಲೋಚನೆಯನ್ನು ಸಹ ಹೊಂದಿದ್ದರು.

1114

ಕೇನ್ಸ್ ಫಿಲ್ಮ್ ಫೆಸ್ಟಿವಲ್ ತೀರ್ಪುಗಾರರಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ನಟಿ ಇವರು.  2003 ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿದ್ದರು. 

1214

ಇದಲ್ಲದೆ ಐಶ್ವರ್ಯಾ ಅವರು ಮಾವ ಅಂದರೆ ಅಮಿತಾಬ್ ಬಚ್ಚನ್, ನಂತರ   ಮೇಡಮ್ ಟುಸ್ಸಾಡ್ಸ್‌ನಲ್ಲಿ ತನ್ನ ಮೇಣದ ಪ್ರತಿಮೆಯನ್ನು ಹೊಂದಿರುವ ಎರಡನೇ ಭಾರತೀಯ ಕಲಾವಿದೆ.

1314

ನೆದರ್‌ಲ್ಯಾಂಡ್ಸ್‌ನ ಪ್ರಸಿದ್ಧ ಕ್ಯುಕೆನ್‌ಹಾಫ್ ಉದ್ಯಾನದಲ್ಲಿರುವ ವಿಶೇಷ ವಿಧದ ಟುಲಿಪ್‌ಗಳಿಗೆ 2005 ರಲ್ಲಿ ಐಶ್ವರ್ಯಾ ರೈ ಬಚ್ಚನ್ ಹೆಸರು ಇಡಲಾಯಿತು. ನೆದರ್‌ಲ್ಯಾಂಡ್‌ನ ಪ್ರವಾಸೋದ್ಯಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹ್ಯಾನ್ಸ್ ವ್ಯಾನ್ ಡ್ರೀಮ್, ಟುಲಿಪ್‌ಗಳು ಐಶ್ವರ್ಯಾ ರೈ ಅವರ ಸೌಂದರ್ಯದ ಆಚರಣೆಯಾಗಿದೆ ಎಂದು ಹೇಳಿದರು.

1414

ಇನ್ನೂ ನಟಿಯ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿರುವ ಐಶ್ವರ್ಯಾ ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ.

Read more Photos on
click me!

Recommended Stories