ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ದಂಪತಿಗೆ ಒಟ್ಟು ಮೂರು ಮಕ್ಕಳು. ಲವ್-ಕುಶ್ ಅವಳಿ ಸೋದರರಾಗಿದ್ದು, ಸೋನಾಕ್ಷಿ ಸಿನ್ಹಾ ಒಬ್ಬಳೇ ಮಗಳು. ಸೋನಾಕ್ಷಿ ಮದುವೆಗೆ ಸೋದರರಾದ ಲವ್ ಮತ್ತು ಕುಶ್ ಬಂದಿಲ್ಲವಾ ಎಂಬ ಚರ್ಚೆ ಶುರುವಾಗಿವೆ.
ಹೌದು, ಸೋನಾಕ್ಷಿ-ಜಹೀರ್ ಮದುವೆ ದಿನಾಂಕ ನಿಗದಿಯಾಗುತ್ತಿದ್ದಂತೆ ಲವ್ ಸಿನ್ಹಾ ಪರೋಕ್ಷವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ತಾಯಿ ಪೂನಂ, ಸೋದರರಾದ ಲವ್-ಕುಶ್‌ರನ್ನು ಸೋನಾಕ್ಷಿ ಅನ್ ಫಾಲೋ ಮಾಡಿದ್ದರು. ಹೀಗಾಗಿ ಸೋನಾಕ್ಷಿ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಸೋನಾಕ್ಷಿ ಮದುವೆ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಎಲ್ಲಿಯೂ ಲವ್ ಮತ್ತು ಕುಶ್ ಕಾಣಿಸಿಕೊಳ್ಳದಿರೋದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಆದ್ರೆ ಲವ್ ಮತ್ತು ಕುಶ್ ಸೋದರಿ ಸೋನಾಕ್ಷಿ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಫೋಟೋ ಮತ್ತು ವಿಡಿಯೋಗಳಲ್ಲಿ ಕಾಣಿಸಿಲ್ಲ ಅಂದ್ರೆ ಮದುವೆಗೆ ಬಂದಿಲ್ಲ ಎಂದರ್ಥ ಅಲ್ಲ ಎಂದು ಲವ್ ಸಿನ್ಹಾ ಹೇಳಿದ್ದಾರೆ.
ನಾನು ತುಂಬಾ ಖಾಸಗಿ ವ್ಯಕ್ತಿ. ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲು ನಾನು ಇಷ್ಟಪಡಲ್ಲ. ನಾನು ತಂಗಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಆಕೆಯ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ ಅಂತ ಲವ್ ಸಿನ್ಹಾ ಹೇಳಿಕೊಂಡಿದ್ದಾರೆ.
ಲವ್ ಮತ್ತು ಕುಶ್ ಕಾಟಾಚಾರಕ್ಕೆ ಮದುವೆಯಲ್ಲಿ ಭಾಗಿಯಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಪೋಷಕರಾದ ಶತ್ರುಘ್ನ ಮತ್ತು ಪೂನಂ ಸಹ ಯಾವುದೇ ಸಂಭ್ರಮದಲ್ಲಿ ಭಾಗಿಯಾಗದಿರೋದ ಬಗ್ಗೆಯೂ ಚರ್ಚೆಗಳು ಶುರುವಾಗಿವೆ.
ಜೂನ್ 23ರಂದು ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಮುಂಬೈನಲ್ಲಿ ನಡೆದಿದೆ. ಮದುವೆಯಲ್ಲಿ ಜಹೀರ್ ಇಕ್ಬಾಲ್ ಪತ್ನಿ ಸೋನಾಕ್ಷಿ ಸಿನ್ಹಾಗೆ ಎರಡು ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರ್ ಕಾಣಿಕೆಯಾಗಿ ನೀಡಿದ್ದಾರೆ.