9 ಸ್ಟಾರ್‌ಗಳಿದ್ರೂ ಸಿನಿಮಾ ಸೋಲನ್ನು ತಡೆಯಲಾಗಲಿಲ್ಲ; 150 ಕೋಟಿ ಬಜೆಟ್ ಚಿತ್ರದ ಬೊಕ್ಕಸಕ್ಕೆ ಸೇರಿದ್ದೆಷ್ಟು?

Published : Mar 25, 2025, 01:23 PM ISTUpdated : Mar 25, 2025, 02:01 PM IST

Bollywood Flop Movie: ಆರು ವರ್ಷಗಳ ಹಿಂದೆ 9 ಸ್ಟಾರ್ ನಟರಿದ್ದರೂ, ಅದ್ಧೂರಿ ಸೆಟ್ ಮತ್ತು ಇಂಪಾದ ಹಾಡುಗಳಿದ್ದರೂ 'ಈ' ಸಿನಿಮಾ ಸೋತಿತು. 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಬೊಕ್ಕಸಕ್ಕೆ ಸೇರಿದ ಹಣವೆಷ್ಟು ಗೊತ್ತಾ?

PREV
15
9 ಸ್ಟಾರ್‌ಗಳಿದ್ರೂ ಸಿನಿಮಾ ಸೋಲನ್ನು ತಡೆಯಲಾಗಲಿಲ್ಲ; 150 ಕೋಟಿ ಬಜೆಟ್ ಚಿತ್ರದ ಬೊಕ್ಕಸಕ್ಕೆ ಸೇರಿದ್ದೆಷ್ಟು?

ಆರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ಬರೋಬ್ಬರಿ 9 ಸ್ಟಾರ್ ಕಲಾವಿದರಿದ್ರು. ಚಿತ್ರಕ್ಕಾಗಿ ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಹಾಡುಗಳು ಒಂದಕ್ಕಿಂತ ಒಂದ ಇಂಪಾಗಿದ್ದವು. ಆದ್ರೂ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಸೋತಿತು. 

25

ಕೆಲವೊಮ್ಮೆ ಸ್ಟಾರ್ ಕಲಾವಿದರು ಇದ್ರೆ ಅವರ ಅಭಿಮಾನಿಗಳೇ ಸಿನಿಮಾ ಗೆಲ್ಲಿಸುತ್ತಾರೆ ಎಂಬ ಮಾತನ್ನುಈ ಸಿನಿಮಾ ಸುಳ್ಳು ಮಾಡಿತ್ತು. 2019ರಲ್ಲಿ ಬಿಡುಗಡೆಯಾದ ಬಾಲಿವುಡ್ ಸೂಪರ್ ಸ್ಟಾರ್ ಗಳಿರೋ ಚಿತ್ರ 'ಕಳಂಕ' ಫ್ಲಾಪ್ ಪಟ್ಟಿಗೆ ಸೇರಿದೆ. ಈ ಸಿನಿಮಾ ಬರೋಬ್ಬರಿ 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. 

35

ಕರಣ್ ಜೋಹರ್, ಹೀರೂ ಜೋಹರ್, ಸಾಜಿದ್ ನಾದಿಯಾಡ್ಗವಾಲಾ ಮತ್ತು ಅಪೂರ್ವ ಮೆಹ್ತಾ ಜೊತೆಯಾಗಿ 'ಕಳಂಕ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಚಿತ್ರದಲ್ಲಿ ಆಲಿಯಾ ಭಟ್, ವರುಣ್ ಧವನ್, ಮಾಧುರಿ ದೀಕ್ಷಿತ್, ಸಂಜಯ್ ದತ್,  ಕೃತಿ ಸನನ್, ಸೋನಾಕ್ಷಿ ಸಿನ್ಹಾ., ಆದಿತ್ಯ ರಾಯ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ಕೃಣಾಲ್ ಕೇಮು ನಟಿಸಿದ್ದರು.

45

ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಕಳಂಕ್ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 84.60 ಕೋಟಿ ಗಳಿಸಲು ಮಾತ್ರ ಶಕ್ತವಾಯ್ತು. ಅಂತಿಮವಾಗಿ ಚಿತ್ರಕ್ಕೆ ಫ್ಲಾಪ್ ಎಂಬ ಮುದ್ರೆ ಬಿತ್ತು.  ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್ , ವರುಣ್ ಧವನ್ ನಟನೆಗೆ ಮೆಚ್ಚುಗೆ ಸಿಕ್ಕರೂ, ಬಾಕ್ಸ್ ಆಫಿಸ್‌ನಲ್ಲಿ ಸೋತಿತ್ತು.

55

ದೇಶದಾದ್ಯಂತ 146.80 ಕೋಟಿ ಕಲೆಕ್ಷನ್ ಮಾಡಿದ ಕಳಂಕ ಸಿನಿಮಾ ಮೊದಲ ದಿನ 5300 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು. ಭಾರತದಲ್ಲಿ 4 ಸಾವಿರ ಮತ್ತು ವಿದೇಶದಲ್ಲಿ 1,300 ಸ್ಕ್ರೀನ್ ಮೇಲೆ ಚಿತ್ರ ಪ್ರದರ್ಶನವಾಗಿತ್ತು. ಕಳಂಕ್ ಸಿನಿಮಾದ ಹಾಡುಗಳನ್ನು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದವು.

Read more Photos on
click me!

Recommended Stories