ತಂಗಿ, ಬಿಟ್ಟೋಗೋ ಹೆಂಡ್ತಿ ಸೀನ್ ಮಾಡ್ತಾಳೆ ಅಂತ ಐಶ್ವರ್ಯ ರೈ ಕೈಯಿಂದ 5 ಸಿನಿಮಾ ಕಿತ್ಕೊಂಡ್ರಾ ಶಾರುಖ್ ಖಾನ್?
ಐಶ್ವರ್ಯ ರೈ ಜೊತೆ ಸಿನಿಮಾ ಮಾಡೋಕೆ ಇಷ್ಟ ಇಷ್ಟ ಅಂತ ಹೇಳಿ ಸಿನಿಮಾ ಕಿತ್ತುಕೊಂಡಿದ್ದು ಯಾಕೆ? ಇಲ್ಲಿದೆ ನೋಡಿ ಫುಲ್ ಮಾಹಿತಿ.
ಐಶ್ವರ್ಯ ರೈ ಜೊತೆ ಸಿನಿಮಾ ಮಾಡೋಕೆ ಇಷ್ಟ ಇಷ್ಟ ಅಂತ ಹೇಳಿ ಸಿನಿಮಾ ಕಿತ್ತುಕೊಂಡಿದ್ದು ಯಾಕೆ? ಇಲ್ಲಿದೆ ನೋಡಿ ಫುಲ್ ಮಾಹಿತಿ.
ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಜೋಡಿಯಾಗಿ ನಟಿಸಿರುವ ಸಿನಿಮಾ ನೋಡಲು ಒಂದು ಸಮಯದಲ್ಲಿ ಅಭಿಮಾನಿಗಳು ಮುಗ್ಗಿಬೀಳುತ್ತಿದ್ದರು.
ಯಾದರೆ ಇದ್ದಕ್ಕಿದ್ದಂತೆ ಐಶ್ವರ್ಯ ರೈ ಮತ್ತು ಶಾರುಖ್ ಸಿನಿಮಾಗಳು ಕಡಿಮೆ ಆಯ್ತು. ಇಬ್ಬರೂ ಒಟ್ಟುಗೆ ಕಾಣಿಸಿಕೊಳ್ಳುವುದು ಕಡಿಮೆ ಆಯ್ತು. ನಿಜಕ್ಕೂ ಏನಿರಬಹುದು ಕಾರಣ ಎಂದು ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವೇ ಇದು.
'ಮೊದಲ ಸಿನಿಮಾ ಜೋಶ್‌ನಲ್ಲಿ ಐಶ್ವರ್ಯಾ ತಂಗಿಯ ಪಾತ್ರ ಮಾಡಿದ್ದರು. ಎರಡನೇ ಸಿನಿಮಾ ದೇವದಾಸ್ ಸಿನಿಮಾದಲ್ಲಿ ಐಶ್ವರ್ಯ ನನ್ನನ್ನು ಬಿಟ್ಟು ಹೋಗುತ್ತಾರೆ'
'ಮೂರನೇ ಸಿನಿಮಾ 'ಮೊಹಬ್ಬತೆಂ'ಯಲ್ಲಿ ದೆವ್ವದ ಪಾತ್ರ ಮಾಡಿದ್ದರು. ಆದರೆ ಆಕೆಯೊಂದಿಗೆ ನನಗೆ ಆನ್‌ಸ್ಕ್ರೀನ್‌ನಲ್ಲಿ ರೊಮಾನ್ಸ್ ಮಾಡುವ ಅವಕಾಶ ಮಾತ್ರ ಸಿಗಲಿಲ್ಲ. ಈ ವಿಚಾರವಾಗಿ ನನಗೆ ಬಹಳ ಬೇಸರ ಇದೆ'ಎಂದು ಶಾರುಖ್ ಹೇಳಿದ್ದಾರೆ.
ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡದಿದ್ದರೂ ಕೂಡ ಆಗಾಗ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾಗಳ ಪ್ರೀಮಿಯರ್ ಶೋಗಳಲ್ಲಿ ಭೇಟಿ ಮಾಡುತ್ತಿದ್ದರು. ಮಕ್ಕಳಾದ ಮೇಲೆ ಇವರಿಬ್ಬರು ಭೇಟಿ ಮಾಡುವ ಶೈಲಿ ಸಿಕ್ಕಾಪಟ್ಟೆ ಬದಲಾಗಿದೆ ಅಂತಿದ್ದಾರೆ.
ಹೌದು! ಇಷ್ಟು ದಿನ ಸಿನಿಮಾ ಸೆಟ್ ಅಥವಾ ಸಿನಿಮಾ ಕೆಲಸಗಳಿಗೆ ಭೇಟಿ ಮಾಡುತ್ತಿದ್ದವರು ಈಗ ತಮ್ಮ ಮಕ್ಕಳನ್ನು ಸ್ಕೂಲ್‌ಗೆ ಬಿಡಲು ಬಂದಾಗ ಎದುರು ಬದುರು ಭೇಟಿ ಮಾಡಲು ಶುರು ಮಾಡಿದ್ದಾರಂತೆ.