'IMDb' 2022ರ ಪಟ್ಟಿಯಲ್ಲಿ ಸೌತ್ ಸ್ಟಾರ್ಸ್‌; ಯಶ್ ಪಡೆದಿರುವ ಸ್ಥಾನ ಯಾವುದು?

First Published | Dec 8, 2022, 12:53 PM IST

2022 ರ ಅಂತ್ಯಕ್ಕೆ ಕೆಲವೇ ದಿನಗಳು ಉಳಿದಿವೆ, ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಅಧಿಕೃತ ಚಲನಚಿತ್ರ ಮತ್ತು ಸೆಲೆಬ್ರಿಟಿ ಇಂಡೆಕ್ಸಿಂಗ್ ಸೈಟ್, 'IMDb' 2022 ರ ಅಗ್ರ ಭಾರತೀಯ ತಾರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೃತಿಕ್ ರೋಷನ್ (Hrithik Roshan) , ಅಲ್ಲು ಅರ್ಜುನ್ (Allu Arjun) ಅವರ ಹೆಸರು ಕಾಣಬಹುದಾಗಿದೆ ಮತ್ತು ಸಮಂತಾ ರುತ್ ಪ್ರಭು (Samantha Ruth Prabhu)  ಅವರು ಈ  ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ರಕ್ಷಾ ಬಂಧನ, ಜಗ್ ಜಗ್ ಜೀಯೋ, ಬಚ್ಚನ್ ಪಾಂಡೆ, ರಾಮ್ ಸೇತು, ಲಾಲ್ ಸಿಂಗ್ ಚಡ್ಡಾ, ಮಿಲಿ, ಮತ್ತು ಮುಂತಾದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ಸೋತಿವೆ, ಇದರ ಪರಿಣಾಮವಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಮೆಚ್ಚಿಸಲು ಸಿನಿಮಾಗಳು ವಿಫಲವಾಗಿದೆ.  ಆದರೆ ಕಾಂತಾರ, ಆರ್‌ಆರ್‌ಆರ್, ಮತ್ತು ಪುಷ್ಪ: ದಿ ರೈಸ್‌ನಂತಹ ಚಲನಚಿತ್ರಗಳು ಬಂದಾಗ ಉದ್ಯಮವು ತೀವ್ರವಾಗಿ ಬದಲಾಯಿತು. ಇದು ದಕ್ಷಿಣ ಇಂಡಸ್ಟ್ರಿಯ ಬಗ್ಗೆ ಪ್ರೇಕ್ಷಕರು ತಮ್ಮ ಗ್ರಹಿಕೆಯನ್ನು ಬದಲಾಯಿಸುವಂತೆ ಮಾಡಿತು.

ಸಮಂತಾ ರುತ್ ಪ್ರಭು, ಹೃತಿಕ್ ರೋಷನ್ ಮತ್ತು ಅಲ್ಲು  ತಮ್ಮ ಬ್ಲಾಕ್‌ಬಸ್ಟರ್ ಚಲನಚಿತ್ರಳ ಮೂಲಕ ಅರ್ಜುನ್ ನಿಸ್ಸಂದೇಹವಾಗಿ 2022 ರ ಸಂಪೂರ್ಣ ವರ್ಷವನ್ನು  ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.  2022 ರ ಟಾಪ್ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ.

Tap to resize

ಸಮಂತಾ ರುತ್ ಪ್ರಭ್ರು:
ಸೌತ್‌ ಇಂಡಸ್ಟ್ರಿ ಐಕಾನ್ ಮತ್ತು ಸ್ಟಾರ್ ದಿವಾ ಸಮಂತಾ ರುತ್ ಪ್ರಭು ಅವರಿಗೆ  ಯಾವುದೇ ಪರಿಚಯದ ಅಗತ್ಯವಿಲ್ಲ. ಪುಷ್ಪ: ದಿ ರೈಸ್‌ನ 'ಊ ಅಂತವ' ಚಿತ್ರದ ಬ್ಲಾಕ್‌ಬಸ್ಟರ್ ಹಾಡಿನಲ್ಲಿನ ಆಕರ್ಷಕ ಮೂಮ್ಸ್‌ ಸಮಂತಾರ ಇನ್ನೊಂದು ಮುಖವನ್ನು ಪರಿಚಯಿಸಿದೆ.   ಪ್ರಸ್ತುತ ಸಿನಿಮಾದ ಯಶಸ್ಸನ್ನು ಆನಂದಿಸುತ್ತಿರುವ ಸಮಂತಾ ಸಖತ್‌ ಸದ್ದು ಮಾಡುತ್ತಿದ್ದಾರೆ.

ಹೃತಿಕ್ ರೋಷನ್:
ವಾರ್, ಸೂಪರ್ 30, ಗುಜಾರಿಶ್, ಬ್ಯಾಂಗ್ ಬ್ಯಾಂಗ್, ಅಗ್ನಿಪಥ್ ಮತ್ತು ಮುಂತಾದ ಬಾಲಿವುಡ್ ಚಿತ್ರಗಳಲ್ಲಿನ ಅವರ ಸೂಕ್ಷ್ಮವಾದ ಅಭಿನಯದಿಂದ ಎಲ್ಲರ ಗಮನ ಸೆಳೆಯುತ್ತಾ ಬಂದಿದ್ದಾರೆ.

ಅದೇ ರೀತಿ  ಹೃತಿಕ್ ರೋಷನ್ ಅವರು ತಮಿಳು ಬ್ಲಾಕ್‌ಬಸ್ಟರ್ 'ವಿಕ್ರಮ್ ವೇದ'ದ ಅಧಿಕೃತ ಹಿಂದಿ ರಿಮೇಕ್‌ 'ವಿಕ್ರಮ್ ವೇದಾ' ದಲ್ಲಿ  ತಮ್ಮ ವೇದ ಪಾತ್ರ ಮೂಲಕ ಮತ್ತೊಮ್ಮೆ ಮಿಂಚಿದ್ದಾರೆ.  ಮತ್ತು ಅವರ ಅಭಿನಯಕ್ಕಾಗಿ ಅಪಾರ ಪ್ರೀತಿ ಮತ್ತು ಚಪ್ಪಾಳೆಗಳನ್ನು ಗಿಟ್ಟಿಸಿದ್ದಾರೆ.
 

ಅಲ್ಲು ಅರ್ಜುನ್:
ಪುಷ್ಪ: ದಿ ರೈಸ್ ಬಿಡುಗಡೆಯ ನಂತರ  ದಕ್ಷಿಣ ಇಂಡಸ್ಟ್ರಿ ಗ್ಲೋಬಲ್ ಐಕಾನ್, ಅಲ್ಲು ಅರ್ಜುನ್  ಅವರ  ಕ್ರೇಜಿ ಸ್ಟಾರ್‌ಡಮ್‌  ಮುಂದಿನ ಲೆವಲ್‌ ತಲುಪಿದೆ . ಈ ಚಲನಚಿತ್ರವು ವರ್ಷದ  ಪ್ಯಾನ್-ಇಂಡಿಯನ್ ಹಿಟ್ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು ಈ ಸಿನಿಮಾ   ತನ್ನ ಅಭೂತಪೂರ್ವ ಯಶಸ್ಸಿನ ಮೂಲಕ ಇಡೀ ದೇಶದಲ್ಲಿ  ಬಿರುಗಾಳಿ ಎಬ್ಬಿಸಿದೆ.
 

ಅಲ್ಲದೆ, ಅಲ್ಲು ಅರ್ಜುನ್ ಅವರಿಗೆ ಈ ವರ್ಷ ಸಖತ್‌ ಅಬ್ಬರದಿಂದ ಪ್ರಾರಂಭವಾಯಿತು. ಅವರು ವಾರ್ಷಿಕ ಭಾರತೀಯ ದಿನದ ಮೆರವಣಿಗೆಯಲ್ಲಿ ಗ್ರ್ಯಾಂಡ್ ಮಾರ್ಷಲ್ ಆಗಿ ನ್ಯೂಯಾರ್ಕ್‌ನಲ್ಲಿ ನಮ್ಮ ದೇಶವನ್ನ ಪ್ರತಿನಿಧಿಸಿದ್ದಾರೆ. ಇದರ ನಂತರ ಪುಷ್ಪ: ದಿ ರೈಸ್  ಸಿನಿಮಾಕ್ಕಾಗಿ  SIIMA  ಅತ್ಯುತ್ತಮ ನಟ (ತೆಲುಗು) ಪ್ರಶಸ್ತಿಯನ್ನು ಗೆದ್ದುಕೊಂಡರು. ಅವರು ಪುಷ್ಪ: ದಿ ರೈಸ್‌ಗಾಗಿ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಯನ್ನು ಗೆದ್ದರು.

Latest Videos

click me!