ನಟಿ ಮಾಧುರಿ ದೀಕ್ಷಿತ್ (Actress Madhuri Dixit) ಅವರ ಡೀಪ್‌ಫೇಕ್ ವಿಡಿಯೋವೊಂದು ವೈರಲ್ ಆಗಿದ್ದು, ಅವರನ್ನು ಬೋಲ್ಡ್ ಆಗಿ ಚಿತ್ರಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ಈ ವಿಡಿಯೋ ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ನೇನೆ ಅವರ ಡೀಪ್‌ಫೇಕ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿದೆ. ನಟಿಯನ್ನು ಹೆಚ್ಚು ಬೋಲ್ಡ್ ಲುಕ್‌ನಲ್ಲಿ (Actress Bold Look video clip) ತೋರಿಸಲಾಗಿದೆ. ಮಾಧುರಿ ದೀಕ್ಷಿತ್ ಸಾರ್ವಜನಿಕ ಸಮಾರಂಭದಲ್ಲಿ ಸಭ್ಯ ಉಡುಗೆ ಮೂಲಕವೇ ಕಾಣಿಸಿಕೊಳ್ಳುತ್ತಾರೆ. 12 ಸೆಕೆಂಡ್ ವಿಡಿಯೋ ಕ್ಲಿಪ್‌ಗೆ ನಟಿಯ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
25
AI ಬಳಸಿ ಎಡಿಟ್
ಇದೇ ವರ್ಷ ಮಾರ್ಚ್ 10ರಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಮಾಧುರಿ ದೀಕ್ಷಿತ್ ಶೇರ್ ಮಾಡಿಕೊಂಡಿದ್ದರು. ಕಾರ್ಯಕ್ರಮದ ವಿಡಿಯೋ ಕ್ಲಿಪ್‌ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದ್ರೆ ಈ ಫೋಟೋ ಮತ್ತು ವಿಡಿಯೋಗಳನ್ನು AI ಬಳಸಿ ಎಡಿಟ್ ಮಾಡಲಾಗಿದೆ. AI ವಿಡಿಯೋದಲ್ಲಿ ಮಾಧುರಿ ಅವರನ್ನು ಸಿಕ್ಕಾಪಟ್ಟೆ ಬೋಲ್ಡ್ ಆಗಿ ತೋರಿಸಲಾಗಿದೆ.
35
ಫ್ಯಾಕ್ಟ್ ಚೆಕ್
ವಕೀಲೆ ಶೋನಿ ಕಪೂರ್ ಎಂಬವರು ಎಕ್ಸ್ ಖಾತೆಯಲ್ಲಿ ಡೀಪ್‌ಫೇಕ್ ವಿಡಿಯೋ ಶೇರ್ ಮಾಡಿಕೊಂಡಾಗ ವೈರಲ್ ಕ್ಲಿಪ್ ಮುನ್ನಲೆಗೆ ಬಂದಿದೆ. ಈ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿರುವ ಹಲವು ಪತ್ರಕರ್ತರು, ಇದೊಂದು ಡೀಪ್‌ಫೇಕ್ ವಿಡಿಯೋ ಆಗಿದೆ. ಎಐ ತಂತ್ರಜ್ಞಾನ ಬಳಸಿ ವಿಡಿಯೋವನ್ನು ರಚನೆ ಮಾಡಲಾಗಿದೆ. ಇದೊಂದು ಸುಳ್ಳು ಪೋಸ್ಟ್. ದಯವಿಟ್ಟು ಯಾರು ಶೇರ್ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ.
ನಟಿ ಮಾಧುರಿ ದೀಕ್ಷಿತ್ ಅವರ ಇಮೇಜ್‌ಗೆ ಕಳಂಕವನ್ನುಂಟು ಮಾಡಲು ವಿಡಿಯೋ ವೈರಲ್ ಮಾಡಲಾಗ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧುರಿ ದೀಕ್ಷಿತ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
55
ಎಐ ಆಧಾರಿತ ವಿಡಿಯೋಗಳು ವೈರಲ್
ಇತ್ತೀಚೆಗೆ ಕಾಂತಾರಾ ನಟಿ ರುಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿತ್ತು. , ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ಕತ್ರಿನಾ ಕೈಫ್, ಶಾರುಖ್ ಖಾನ್, ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಹಲವರ ಎಐ ಆಧಾರಿತ ವಿಡಿಯೋಗಳು ವೈರಲ್ ಆಗಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.