2026ರಲ್ಲಿ ಧುರಂಧರ್ 2 ಮೂಲಕ ಬಾಲಿವುಡ್ ಸಿನಿಮಾದಲ್ಲಿ ಹಂಗಾಮ ಸೃಷ್ಟಿಯಾಗಿದೆ. ಇದೀಗ 2026ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್‌ಗಳು ಇಲ್ಲ.
2026ರಲ್ಲಿ ಹಲವು ಬಹುನಿರೀಕ್ಷಿತ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೇವಲ ಫ್ಯಾನ್ಸ್ ಮಾತ್ರವಲ್ಲ ದೇಶದ ಎಲ್ಲಾ ಚಿತ್ರರಂಗ ಎದರು ನೋಡುತ್ತಿದೆ. ಈ ಪೈಕಿ ರಾಮಾಯಣ, ಟಾಕ್ಸಿಕ್, ಕಿಂಗ್, ಜನ ನಾಯಗನ್ ಸೇರಿದಂತೆ ಹಲವು ಸಿನಿಮಾಗಳು ಸರದಿ ಸಾಲಿನಲ್ಲಿದೆ. ಆದರೆ IMDb ರೇಟಿಂಗ್ ಪ್ರಕಾರ ಜನರ ಕಾಯುತ್ತಿರುವ ಸಿನಿಮಾ ಇದ್ಯಾವುದು ಅಲ್ಲ.
26
ಜನರ ಬಹುನಿರೀಕ್ಷಿತ ಸಿನಿಮಾ ಯಾವುದು?
ಧುರಂಧರ್ 2 ಭರ್ಜರಿ ಯಶಸ್ಸಿನ ಬಳಿಕ ಇದೀಗ ಅಭಿಮಾನಿಗಳು ಕೆಲ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಜನರ ಪ್ರಕಾರ ಅತೀ ಹೆಚ್ಚು ಕುತೂಹಲ ಮೂಡಿಸಿದ, ಅತೀ ಹೆಚ್ಚಿನ ಅಭಿಮಾನಿಗಳು ಕಾಯುತ್ತಿರುವ ಸಿನಿಮಾ ಯಾವುದು ಅನ್ನೋದನ್ನು IMDb ರೇಟಿಂಗ್ ಮೂಲಕ ಹೇಳಿದೆ. IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಸಿನಿಮಾ ಮೈನೆ ವಾಪಸ್ ಆವುಂಗಾ.
36
ಇಮ್ತಿಯಾಜ್ ಅಲಿ ಸಿನಿಮಾಗೆ ಎಷ್ಟು ಮಂದಿ ಕಾಯುತ್ತಿದ್ದಾರೆ
ಸಿನಿ ಪ್ರೇಕ್ಷಕರು ತಾವು ಯಾವ ಸಿನಿಮಾಗಾಗಿ ಕಾಯುತ್ತಿದ್ದಾರೆ ಅನ್ನೋದನ್ನು ಮತದ ಮೂಲಕ ಹೇಳಿದ್ದಾರೆ. IMDb ರೇಟಿಂಗ್ ಪ್ರಕಾರ ಇಮ್ತಿಯಾಜ್ ಅಲಿ ನಿರ್ದೇಶನದ ಮೈನಿ ವಾಪಸ್ ಆವುಂಗಾ ಸಿನಿಮಾಗೆ ಶೇಕಡಾ 23.3ರಷ್ಟು ಅಭಿಮಾನಿಗಳು ನೋಡಲು ಬಯಸಿದ್ದಾರೆ. ದಿಲ್ಜಿತ್ ದೋಸಾಂಜ್, ಶಾರ್ವರಿ, ವೆದಾಂಗ್ ರೈನಾ ಸೇರಿದಂತೆ ತಾರಾಬಣ ಈ ಸಿನಿಮಾದಲ್ಲಿದೆ.
ದೇಶದ ಅಭಿಮಾನಿಗಳು ಕಾಯುತ್ತಿರುವ ಸಿನಿಮಾಗಳ ಪೈಕಿ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಎರಡನೇ ಸ್ಥಾನದಲ್ಲಿದೆ. ಟಾಕ್ಸಿಕ್ ಸಿನಿಮಾ ವೀಕ್ಷಣೆ ಮಾಡಲು ಶೇಕಡಾ 15.4ರಷ್ಟು ಮಂದಿ ವೋಟ್ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾದ ಟ್ರೇಲರ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಸಿನಿಮಾ ಬಿಡುಗಡೆ ವಿಳಂಬ ಎಂದಾಗ ಹಲವರು ನಿರಾಸೆ ಪಟ್ಟಿದ್ದಾರೆ. ಇದೀಗ ಟಾಕ್ಸಿಕ್ ರಿಲೀಸ್‌ಗೆ ಕಾಯುತ್ತಿದ್ದಾರೆ.
56
ಟಾಪ್ 10 ಲಿಸ್ಟ್‌ನಲ್ಲಿಲ್ಲ ರಾಮಾಯಣ
ಭಾರತೀಯ ಸಿನಿಮಾದಲ್ಲಿ ಅತೀ ದೊಡ್ಡ ಬಜೆಟ್, ಅತೀ ಹೆಚ್ಚು ತಂತ್ರಜ್ಞಾನ ಬಳಕೆ, ಕಲಾವಿದರ ಬಳಕೆ, ಅತೀ ಹೆಚ್ಚು ಸಂಭಾವನೆ ಸೇರಿದಂತೆ ಹಲವು ರೀತಿಯಲ್ಲಿ ಸದ್ದು ಮಾಡಿರುವ ರಾಮಾಯಣ ಸಿನಿಮಾ ಈ ಟಾಪ್ 10 ಲಿಸ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಈ ರೇಟಿಂಗ್ ಸದ್ಯದ ಟ್ರೆಂಡ್ ಪ್ರಕಾರ ನೀಡಲಾಗಿದೆ. ರಾಮಯಾಣ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಕಾರಣ ಸದ್ಯ 2-3 ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು ಈ ರೇಟಿಂಗ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.
66
ಹೊಸ ದಾಖಲೆ ಬರೆಯುತ್ತಾ ಟಾಕ್ಸಿಕ್
ಯಶ್ ಟಾಕ್ಸಿಕ್ ಸಿನಿಮಾ IMDb ರೇಟಿಂಗ್‌ನಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಕುತೂಹಲ ಹೆಚ್ಚಾಗುತ್ತಿದೆ. ಕೆಜಿಎಫ್ ಬಳಿಕ ಯಶ್ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಇತ್ತ ಟಾಕ್ಸಿಕ್ ಕೂಡ ಭಾರಿ ವಿಳಂಬವಾಗಿದೆ. ಇಷ್ಟು ಹೊತ್ತು ಕಾದಿರುವ ಅಭಿಮಾನಿಗಳಿಗೆ ಯಶ್ ಅಚ್ಚರಿ ಜೊತೆಗೆ ಹೊಸ ದಾಖಲೆ ಸಿನಿಮಾ ನೀಡುತ್ತಾರ ಅನ್ನೋ ಚರ್ಚೆಗಳು ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.