Ohh My God: ಸುಳ್ಳು ಹೇಳಿ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಸಾರಾ ಎಲ್ಲಿಗೆ ಹೋಗಿದ್ರು? ಅಮ್ಮ ಅಮೃತಾ ಸಿಂಗ್ ಕೈನಲ್ಲಿ ಸಿಕ್ಕಿಬಿದ್ದಿದ್ದು ಹೀಗೆ!

Published : May 29, 2026, 07:53 PM IST

ಒಮ್ಮೆ ನಟಿ ಸಾರಾ ಅವರು ತಮ್ಮ ತಾಯಿಗೆ ಸಹಪಾಠಿ ಫ್ರೆಂಡ್ಸ್  ಮನೆಗೆ ಹೋಗುತ್ತಿರುವುದಾಗಿ ಹೇಳಿ ತಮ್ಮ ಸ್ನೇಹಿತೆಯ ಜೊತೆ ತಮ್ಮ ಮತ್ತೊಬ್ಬ ಫ್ರೆಂಡ್ ಭೇಟಿಯಾಗಲು ಮುಂಬೈನ ಲೋಕಲ್‌ ಟ್ರೇನ್‌ನಲ್ಲಿ ಪ್ರಯಾಣ ಮಾಡಿದ್ದರು. ಆದರೆ, ಅವರ ಅಮ್ಮನ ಕೈಲಿ ಸಿಕ್ಕಿಬಿದ್ದಿದ್ದು ಹೀಗೆ ನೋಡಿ..!

PREV
17

ಸಾರಾ ಅಲಿ ಖಾನ್ (Sara Ali Khan) ಕಪಿಲ್ ಶರ್ಮಾ (Kapil Sharma) ಸಂದರ್ಶನವೊಂದರಲ್ಲಿ ತಾವು ತಮ್ಮ ಅಮ್ಮನಿಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ಘಟನೆಯೊಂದನ್ನು ಕಪಿಲ್ ಶೋದಲ್ಲಿ ಹಂಚಿಕೊಂಡಿದ್ದಾರೆ.

27

ಒಮ್ಮೆ ಬಾಲ್ಯದಲ್ಲಿ ಸಾರಾ ಅವರು ತಮ್ಮ ತಾಯಿಗೆ ಫ್ರೆಂಡ್ಸ್ ಸಹಪಾಠಿ ಮನೆಗೆ ಹೋಗುತ್ತಿರುವುದಾಗಿ ಹೇಳಿ ತಮ್ಮ ಸ್ನೇಹಿತೆಯ ಜೊತೆ ತಮ್ಮ ಮತ್ತೊಬ್ಬ ಫ್ರೆಂಡ್ ಭೇಟಿಯಾಗಲು ಮುಂಬೈನ ಲೋಕಲ್‌ ಟ್ರೇನ್‌ನಲ್ಲಿ ಪ್ರಯಾಣ ಮಾಡಿದ್ದರು.

37

ಆ ವೇಳೆ ಅದೇ ಟ್ರೇನ್‌ನಲ್ಲಿದ್ದ ಜರ್ನಲಿಸ್ಟ್ ಒಬ್ಬರು ಸಾರಾ ಅವರು ಲೋಕಲ್‌ ಟ್ರೇನ್‌ ಒಳಗೆ ಇರುವ ಫೋಟೋವನ್ನು ತೆಗೆದು ಅದನ್ನು ಸಾರಾ ಅಮ್ಮ ಅಮೃತಾಸಿಂಗ್‌ಗೆ (Amrita Singh) ಅವರಿಗೆ ಕಳುಹಿಸಿ, ಕಾಲ್ ಮಾಡಿ, 'ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ, ಸಿಂಪಲ್‌ ಆಗಿ ಬೆಳೆಸಿದ್ದೀರಿ, ಅವಳು ಜನಸಾಮಾನ್ಯರಂತೆ ಲೋಕಲ್ ಟ್ರೇನ್‌ನಲ್ಲಿ ಪ್ರಯಾಣ ಮಾಡ್ತಾ ಇರೋದನ್ನು ನಿನ್ನೆ ನೋಡಿದ್ದೇನೆ' ಎಂದು ಹೇಳಿದ್ದಾರೆ.

47

ಆ ವಿಷಯ ನನಗೆ ಗೊತ್ತಿರಲಿಲ್ಲ. ಮಾರನೇ ದಿನ ನನ್ನ ಅಮ್ಮ ಅಮೃತಾ 'ನಿನ್ನೆ ಎಲ್ಲಿಗೆ ಹೋಗಿದ್ದೆ?' ಎಂದು ಕೇಳಿದಾಗ ನಾನು 'ನಿನಗೆ ಹೇಳಿದ್ನಲ್ಲಾ, ನನ್ನ ಕ್ಲಾಸ್‌ಮೇಟ್ ಮನೆಗೆ ಹೋಗಿದ್ದೆ' ಎಂದು ಹೇಳಿದ್ದೆ.

57

ಆಗ ಅಮ್ಮ ಅವರು ಕಳಿಸಿದ ಲೋಕಲ್ ಟ್ರೇನ್ ಜರ್ನಿ ಫೋಟೋ ತೋರಿಸಿ 'ಹೌದಾ, ಇಲ್ನೋಡು ನಿನ್ನ ಫೋಟೋ ನನಗೆ ಬಂದಿದೆ' ಎಂದು ಹೇಳುತ್ತ 'ರೆಡ್‌ ಹ್ಯಾಂಡ್‌' ಆಗಿ ನನ್ನನ್ನು ಹಿಡಿದವರಂತೆ ಫೋಟೋ ತೋರಿಸಿ ಹೇಳಿದ್ದರು. ಆಗ ಸೈಲೆಂಟ್ ಆಗಿ ಇರೋದನ್ನು ಬಿಟ್ಟರೆ ನನಗೆ ಬೇರೆ ದಾರಿ ಇರಲಿಲ್ಲ' ಎಂದಿದ್ದಾರೆ.

67

ಜೊತೆಗೆ, ಆಮೇಲೆ ಕೂಡ ಅದೆಷ್ಟೋ ಬಾರಿ ನಾನು ಅಮ್ಮನಿಗೆ ಸುಳ್ಳು ಹೇಳಿ ಎಲ್ಲೆಲ್ಲಿಗೂ ಸುತ್ತಾಡಲು ಹೋಗುತ್ತಿದ್ದೆ. ಆದರೆ ಆ ಫೋಟೋಗಳೆಲ್ಲಾ ಇನ್ನೂ ಯಾರಿಗೆ ಸಿಕ್ಕಿಲ್ಲ' ಎಂದು ಹೇಳಿ ಇಡೀ ಶೋದಲ್ಲಿಇದ್ದ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ.

77

ಸಾರಾ ಅಲಿ ಖಾನ್ ಭಾಗವಹಿಸಿದ್ದ ಆ ಶೋದಲ್ಲಿ ಅಂದು ಬಾಲಿವುಡ್ 'ಕಿಲಾಡಿ' ಖ್ಯಾತಿಯ ನಟ ಅಕ್ಷಯ್ ಕುಮಾರ್ ಕೂಡ ಭಾಗಿಯಾಗಿದ್ದರು. ಸಾರಾ ಅವರ ಸಿಂಪ್ಲಿಸಿಟಿ ಹಾಗೂ ಮುಗ್ಧತೆಯಿಂದ ಕೂಡಿದ ಮಾತುಗಳು ಅಲ್ಲಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories