ತುನಿಷಾ ಶರ್ಮಾ ಮೂಲತಃ ಚಂಡೀಗಢದವರಾಗಿದ್ದು 13ನೇ ವಯಸ್ಸಿಗೆ ಬಣ್ಣದ ಜರ್ನಿಯನ್ನು ಆರಂಭಿಸಿದ್ದರು. ಅಂದಿನಿಂದ ಬಣ್ಣದ ಪ್ರಪಂಚದಲ್ಲಿ ಕೆಲಸ ಮಾಡುತ್ತಿದ್ದಾರೆ.
ತುನಿಷಾ ಶರ್ಮಾರನ್ನು ಎಲ್ಲರೂ ಪ್ರೀತಿಯಿಂದ Tunno ಎಂದು ಕರೆಯುತ್ತಿದ್ದರು. ಹೀಗಾಗಿ ತುನಿಷಾ ಆತ್ಮಹತ್ಯೆ ಎಲ್ಲರಿಗೂ ಶಾಕ್ ಆಗಿತ್ತು.
ಫಿತೂರ್ ಚಿತ್ರದ ಮೂಲಕ ತುನಿಷಾ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ವಿಚಾರ ಅನೇಕರಿಗೆ ಗೊತ್ತಿಲ್ಲ ಏಕೆಂದರೆ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹೈಲೈಟ್ ಆಗಿದ್ದರು.
ತುನಿಷಾ ಶರ್ಮಾ ನೃತ್ಯ ತರಬೇತಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾರಣ ಡ್ಯಾನ್ಸ್ ಮಾಡಿರುವ ವಿಡಿಯೋ ಹಂಚಿಕೊಂಡು ಮನೋರಂಜನೆ ನೀಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯನ್ನು ತುನಿಷಾ ಕಳೆದುಕೊಂಡಿದ್ದಾರೆ. ಅದಾದ ಕೆಲವು ದಿನಗಳ ನಂತರ ಅಜ್ಜಿಯನ್ನು ಕಳೆದುಕೊಂಡರು. ತನ್ನನ್ನು ತಾನು ನೋಡಿಕೊಳ್ಳಲು ಎಷ್ಟು ಕಷ್ಟವಾಗುತ್ತದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡು ಭಾವುಕರಾಗಿದ್ದರು.
ತುನಿಷಾ ಖಿನ್ನತೆಯಿಂದ ಬಳಲುತ್ತಿರುವಾಗ ಸ್ನೇಹಿತ ಕನ್ವರ್ ಧಿಲ್ಲೋನ್ ತುಂಬಾನೇ ಸಹಾಯ ಮಾಡಿದ್ದಾರೆ. ಹೀಗಾಗಿ ಸ್ನೇಹಿತರ ಜೊತೆ ತುಂಬಾನೇ ಕ್ಲೋಸ್ ಆಗಿದ್ದಾರೆ.
ತುನಿಷಾ ಶರ್ಮಾ ಕೆಲವು ತಿಂಗಳುಗಳ ಕಾಲ ನಟ ಶ್ರೀಜಾನ ಖಾನ್‌ರನ್ನು ಪ್ರೀತಿಸುತ್ತಿದ್ದರು. ಬ್ರೇಕಪ್ ಮಾಡಿಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.