ಹೊಸ ವರ್ಷ ಸ್ವಾಗತಕ್ಕೆ ವಿರಾಟ್-ಅನುಷ್ಕಾ ಸಜ್ಜು; 2022ರ ಕೊನೆಯ ಸೂರ್ಯೋದಯ ವೀಕ್ಷಿಸಿದ ಫೋಟೋ ವೈರಲ್

First Published Dec 31, 2022, 2:24 PM IST

2023 ಅನ್ನು ಅದ್ದೂರಿಯಾಗಿ ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಹೊಸ ವರ್ಷಕ್ಕೆ ಇನ್ನೇನು ಕ್ಷಣ ಗಣನೆ ಪ್ರಾರಂಭವಾಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ವಿದೇಶಕ್ಕೆ ಹಾರಿದ್ದು ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. 

2023 ಅನ್ನು ಅದ್ದೂರಿಯಾಗಿ ಸ್ವಾಗತಿಸಲು ಜಗತ್ತು ಸಜ್ಜಾಗಿದೆ. ಹೊಸ ವರ್ಷಕ್ಕೆ ಇನ್ನೇನು ಕ್ಷಣ ಗಣನೆ ಪ್ರಾರಂಭವಾಗಿದೆ. 2022ರನ್ನು ಬೀಳ್ಕೊಡಲು ಎಲ್ಲರೂ ಸಿದ್ಧರಾಗಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳು ಹೊಸ ವರ್ಷವನ್ನು ವಿವಿಧ ಸ್ಥಳಕ್ಕೆ ಭೇಟಿ ಕೊಡುವ ಮೂಲಕ ಸ್ವಾಗತ ಕೋರುತ್ತಿದ್ದಾರೆ. ಬಹುತೇಕ ಬಾಲಿವುಡ್ ಮಂದೆ ಮುಂಬೈ ತೊರೆದು ವಿದೇಶಕ್ಕೆ ಹಾರಿದ್ದಾರೆ. 

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ದುಬೈಗೆ ಹಾರಿದ್ದಾರೆ. ದುಬೈನಲ್ಲಿ ಹೊಸ ವರ್ಷಾಚರಣೆ ಮಾಡುತ್ತಿದ್ದಾರೆ. 2022ಅನ್ನು ಬೀಳ್ಕೊಡಲು ಸ್ಟಾರ್ ದಂಪತಿ ಸಿದ್ಧರಾಗಿದ್ದಾರೆ. ದುಬೈನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಅನುಷ್ಕಾ ಮತ್ತು ವಿರಾಟ್ ಫೋಟೋಗಳು ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ. 

ಅಂದಹಾಗೆ ಅನುಷ್ಕಾ ಮತ್ತು ವಿರಾಟ್ ದಂಪತಿ 2022ರ ಕೊನೆಯ ಸೂರ್ಯೋದಯ ವೀಕ್ಷಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್, ಅನುಷ್ಕಾ ಮತ್ತು ಮಗಳು ವಮಿಕಾ ಮೂವರು ಸೂರ್ಯನ ಕಡೆ ಮುಖ ಮಾಡಿ ನಿಂತಿರುವ ಫೋಟೋ ಎಲ್ಲಾ ಹರಿದಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು ದುಬೈನಲ್ಲಿರುವ ಫೋಟೋವನ್ನು ಅನುಷ್ಕಾ ಹಂಚಿಕೊಂಡು ಈ ಸಿಟಿಯಲ್ಲಿ ಕೊನೆಯ ರಾತ್ರಿ ಎಂದು ಹೇಳಿದ್ದಾರೆ. ಅನುಷ್ಕಾ ದಂಪತಿ ಜೊತೆ ಇಡೀ ಕುಟುಂಬ ಕೂಡ ದುಬೈಗೆ ತೆರಳಿದೆ. ದುಬೈನ ಒಂದಿಷ್ಟು ಫೋಟೋಗಳನ್ನು ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಅಂದಹಾಗೆ ಅನುಷ್ಕಾ ಮಗಳಿಗೆ ಜನ್ಮ ನೀಡಿದ ಬಗ್ಗೆ ಸಿನಿಮಾಗೆ ವಾಪಾಸ್ ಆಗಿದ್ದಾರೆ. ಈಗಾಗಲೇ ಒಂದು ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಕ್ರಿಕೆಟ್ ಲೆಜೆಂಟ್ ಜುಲನ್ ಗೋಸ್ವಾಮಿ ಅವರ ಬಯೋಪಿಕ್ ನಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಚಕ್ದ ಎಕ್ಸ್‌ಪ್ರೆಸ್ ಎಂದು ಟೈಟಲ್ ಇಡಲಾಗಿದೆ. 
 

ಇತ್ತೀಚಿಗಷ್ಟೆ ಸಿನಿಮಾದ ಶೂಟಿಂಗ್ ಮುಗಿಸಿದ್ದು ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಚಿತ್ರೀಕರಣ ಮುಗಿಸಿ ಕೇಕ್ ಕತ್ತರಿಸಿದ ಫೋಟೋಗಳನ್ನು ಶೇರ್ ಮಾಡಿದ್ದರು. ಟೀಂ ಇಂಡಿಯಾ ಜೆರ್ಸಿ ಧರಿಸಿದ್ದ ಅನುಷ್ಕಾ ಫೋಟೋಗಳು ವೈರಲ್ ಆಗಿತ್ತು. 

ಅನುಷ್ಕಾ ಶೆಟ್ಟಿ ಮದುವೆ ಬಳಿಕ ತೆರೆಮೇಲೆ ಬಂದಿಲ್ಲ. ಕೊನೆಯದಾಗಿ ಅನುಷ್ಕಾ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾರುಖ್ ಖಾನ್ ಜೊತೆ ನಟಿಸಿದ್ದರು. ಈ ಸಿನಿಮಾ ಬಳಿಕ ಮತ್ತೆ ಅನುಷ್ಕಾ ಅಭಿನಮಾನಿಗಳ ಮುಂದೆ ಬಂದಿಲ್ಲ. ಇದೀಗ ಚಕ್ದ ಎಕ್ಸ್ ‌ಪ್ರೆಸ್ ಮೂಲಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. 
 

click me!