ಬಾಲಿವುಡ್‌ನ ಟಾಪ್‌ ನಟರು ರಿಜೆಕ್ಟ್ ಮಾಡಿದ್ದ ಸಿನ್ಮಾ ಬಾಕ್ಸಾಫೀಸ್ ಹಿಟ್‌; 4 ರಾಷ್ಟ್ರೀಯ ಪ್ರಶಸ್ತಿ ಪಡೆದ ಹೆಗ್ಗಳಿಕೆ

Published : Dec 04, 2023, 10:57 AM ISTUpdated : Dec 04, 2023, 11:04 AM IST

ಬರೋಬ್ಬರಿ 16 ಕೋಟಿ ಬಜೆಟ್‌ನ ಆ ಸಿನಿಮಾವನ್ನು ಬಾಲಿವುಡ್‌ನ ಟಾಪ್‌ ನಟ-ನಟಿಯರು ರಿಜೆಕ್ಟ್‌ ಮಾಡಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಸಕ್ಸಸ್ ಆಗುವುದರ ಜೊತೆಗೆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವೆಂದು ಗುರುತಿಸಿಕೊಂಡಿತು.. ಭರ್ತಿ 4 ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿತು. ಯಾವುದು ಆ ಸಿನಿಮಾ, ರಿಜೆಕ್ಟ್‌ ಮಾಡಿದ ನಟರು ಯಾರೆಲ್ಲಾ?

PREV
110
ಬಾಲಿವುಡ್‌ನ ಟಾಪ್‌ ನಟರು ರಿಜೆಕ್ಟ್ ಮಾಡಿದ್ದ ಸಿನ್ಮಾ ಬಾಕ್ಸಾಫೀಸ್ ಹಿಟ್‌; 4 ರಾಷ್ಟ್ರೀಯ ಪ್ರಶಸ್ತಿ ಪಡೆದ ಹೆಗ್ಗಳಿಕೆ

1990ರ ದಶಕದಲ್ಲಿ, ಬಾಲಿವುಡ್‌ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್‌ ಖಾನ್‌, ಅಕ್ಷಯ್ ಕುಮಾರ್‌, ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ಬಚ್ಚನ್ ಮೊದಲಾದ ನಟ-ನಟಿಯರು ಹೆಚ್ಚು ಹೆಸರು ಮಾಡಿದ್ದರು. ಹಲವಾರು ಹಿಟ್‌ ಸಿನಿಮಾಗಳನ್ನು ನೀಡಿದರು. ಈ ನಟ-ನಟಿಯರು ಅಭಿನಯಿಸಿದ ಚಲನಚಿತ್ರಗಳು ಬಾಕ್ಸಾಫೀಸಿನಲ್ಲಿ ಹಿಟ್ ಆಗುತ್ತಿತ್ತು.

210

ಆದರೆ ಬರೋಬ್ಬರಿ 16 ಕೋಟಿ ಬಜೆಟ್‌ನ ಆ ಸಿನಿಮಾವನ್ನು ಬಾಲಿವುಡ್‌ನ ಟಾಪ್‌ ನಟ-ನಟಿಯರು ರಿಜೆಕ್ಟ್‌ ಮಾಡಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಸಕ್ಸಸ್ ಆಗುವುದರ ಜೊತೆಗೆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವೆಂದು ಗುರುತಿಸಿಕೊಂಡಿತು.. ಭರ್ತಿ 4 ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿತು.

310

ಈ ಚಿತ್ರವು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರೊಬ್ಬರಿಂದ ನಿರ್ದೇಶಿಸಲ್ಪಟ್ಟಿದೆ, ಅವರು ಸ್ವತಃ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದಾರೆ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ನಟಿಸಿದ ಕೆಲವು ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ ಸಂಜಯ್ ಲೀಲಾ ಬನ್ಸಾಲಿ ಮತ್ತು ಚಿತ್ರ ಹಮ್ ದಿಲ್ ದೇ ಚುಕೇ ಸನಮ್.

410

'ಹಮ್ ದಿಲ್ ದೇ ಚುಕೆ ಸನಮ್' ಸುಂದರವಾದ ತ್ರಿಕೋನ ಪ್ರೇಮ ಕಥೆಯ ಸಿನಿಮಾವಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್, ಐಶ್ವರ್ಯಾ ರೈ ಅವರ ಗಂಡನ ಪಾತ್ರವನ್ನು ಮಾಡಿದ್ದಾರೆ. ಆದರೆ ಈ ಚಿತ್ರಕ್ಕೆ ಮೊದಲು, ನಟನಿಗೆ ಆಕ್ಷನ್ ಹೀರೋನ ಇಮೇಜ್ ಇತ್ತು.

510

ಹೀಗಾಗಿ ಬನ್ಸಾಲಿ, ಈ ಪಾತ್ರವನ್ನು ಅಜಯ್‌ ದೇವಗನ್ ಬದಲು ಅಮೀರ್ ಖಾನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಮಾಡಬೇಕೆಂದು ಬಯಿಸಿದ್ದರು. ಸಂಜಯ್ ದತ್ ಮತ್ತು ಅನಿಲ್ ಕಪೂರ್ ಅವರಿಗೂ ಆಫರ್ ನೀಡಲಾಯಿತು. 

610

ಆದರೆ ಈ ಎಲ್ಲಾ ನಟರು ವಿವಿಧ ಕಾರಣಗಳಿಗಾಗಿ ಪ್ರಸ್ತಾಪವನ್ನು ನಿರಾಕರಿಸಿದರು. ಹೀಗಾಗಿ ಸಂಜಯ್ ಲೀಲಾ ಬನ್ಸಾಲಿ, ಅಜಯ್ ದೇವಗನ್ ಅವರನ್ನು ಸಂಪರ್ಕಿಸಿದರು. ಹೀಗಾಗಿ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಅಜಯ್‌ ದೇವಗನ್ ನಟಿಸಿದ್ದಾರೆ.

710

ಈ ಚಿತ್ರವನ್ನು 16 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ನಟರ ಅಭಿನಯ ಮತ್ತು ಕಥಾಹಂದರವು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಯಿತು, ಅದು ಚಲನಚಿತ್ರವನ್ನು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗುವಂತೆ ಮಾಡಿತು. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ 52 ಕೋಟಿ ಸಂಗ್ರಹಿಸಿತು.

810

ಈ ಚಿತ್ರವು ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಪ್ರೇಮ ಸಂಬಂಧದ ಆರಂಭವನ್ನು ಗುರುತಿಸಿತು. ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ, ಇಬ್ಬರೂ ಹತ್ತಿರವಾಗಿದ್ದರು ಮತ್ತು ಡೇಟಿಂಗ್ ಪ್ರಾರಂಭಿಸಿದರು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ.

910

ಇಷ್ಟು ಮಾತ್ರವಲ್ಲದೆ ಹಲವಾರು ನಟರಿಂದ ತಿರಸ್ಕರಿಸಲ್ಪಟ್ಟ ಈ ಚಿತ್ರವು ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ನೃತ್ಯ ಸಂಯೋಜನೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಗಳಿಸಿತು.

1010

ಅತ್ಯುತ್ತಮ ನಿರ್ಮಾಣ ವಿನ್ಯಾಸ ವಿಭಾಗಗಳಲ್ಲಿ 4 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರ ಇಂದಿಗೂ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಈ ವರ್ಷಕ್ಕೆ 24 ವರ್ಷ ಪೂರೈಸಿದೆ.

Read more Photos on
click me!

Recommended Stories