30 ಕೆಜಿ ತೂಕ ಇಳಿಕೆ ಸಾಧ್ಯವೇ ಇಲ್ಲ, ಬೆಟ್ ಕಟ್ಟಿ 2.5 ಲಕ್ಷ ರೂ ಕಳೆದುಕೊಂಡ ಉದ್ಯಮಿ ನಿತಿನ್ ಕಾಮತ್

Published : Jun 18, 2026, 06:15 PM IST

ಉದ್ಯಮಿ ನಿತಿನ್ ಕಾಮತ್ ಬೆಟ್ ಕಟ್ಟಿ ಇದೀಗ 2.5 ಲಕ್ಷ ರೂಪಾಯಿ ಸೋತಿದ್ದಾರೆ. 30 ಕೆಜಿ ತೂಕ ಇಳಿಕೆ ಸಾಧ್ಯವೇ ಇಲ್ಲ ಎಂದಿದ್ದ ನಿತಿನ್ ಕಾಮತ್ ಇದೀಗ ತಮ್ಮ ಪರ್ಸ್‌ನಿಂದ ಹಣ ನೀಡಿದ್ದಾರೆ. ಅಷ್ಟಕ್ಕೂ ನಿತಿನ್ ಕಾಮತ್ ಬೆಟ್ ಸೋತಿದ್ದು ಹೇಗೆ?

PREV
16
ಬೆಟ್ ಕಟ್ಟಿ 2.5 ಲಕ್ಷ ರೂಪಾಯಿ ಸೋತ ನಿತಿನ್ ಕಾಮತ್

ಝಿರೋಧಾ ಸಂಸ್ಥಾಪಕರಾದ ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ಸಹೋದರರು ತಮ್ಮ ಉದ್ಯೋಗ ಜೊತೆ ಸೋಶಿಯಲಿ ಸಕ್ರಿಯರಾಗಿದ್ದಾರೆ. ಜಿರೋಧಾ ಸಂಸ್ಥೆಯಲ್ಲಿ ಉದ್ಯೋಗಿಗಳ ಜೊತೆ ಹಲವು ಚಾಲೆಂಜ್ ಹಾಕಿ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಿದ್ದಾರೆ. ಇದೀಗ ನಿತಿನ್ ಕಾಮತ್, ತಮ್ಮ ಕಚೇರಿ ಉದ್ಯೋಗಿ ಜೊತೆ ಬೆಟ್ ಕಟ್ಟಿ 2.5 ಲಕ್ಷ ರೂಪಾಯಿ ಸೋತಿದ್ದಾರೆ.

26
ಹೆಲ್ತ್ ಚಾಲೆಂಜ್

ನಿತಿನ್ ಕಾಮತ್ ಜಿರೋಧಾ ಕಂಪನಿಯಲ್ಲಿ ತಮ್ಮ ಉದ್ಯೋಗಿ ರೋಹಿತ್ ಅಗರ್ವಾಲ್ ಜೊತೆ ಚಾಲೆಂಜ್ ಹಾಕಿದ್ದರು. ಕಳೆದ ವರ್ಷ ರೋಹಿತ್ ಅಗರ್ವಾಲ್ ತೂಕ ಇಳಿಕೆ ಕುರಿತು ಚರ್ಚೆಯಾಗಿತ್ತು. ಈ ವೇಳೆ ನಿತಿನ್ ಕಾಮತ್, 30 ಕೆಜಿ ತೂಕ ಇಳಿಕೆ ಸಾಧ್ಯವಿಲ್ಲ ಎಂದಿದ್ದರು. ಇದೇ ವೇಳೆ 30 ಕೆಜಿ ತೂಕ ಇಳಿಸಿದರೆ 2.5 ಲಕ್ಷ ರೂಪಾಯಿ ಚಾಲೆಂಜ್ ಎಂದಿದ್ದರು.

36
ಚಾಲೆಂಜ್ ಸ್ವೀಕರಿಸಿ ಗೆದ್ದ ಉದ್ಯೋಗಿ

ರೋಹಿತ್ ಅಗರ್ವಾಲ್ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸತತ ಜಿಮ್ ಅಭ್ಯಾಸ, ಕಠಿಣ ಆಹಾರ ಪದ್ಧತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಪರಿಣಾಮ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡು ಫಿಟ್ ಆಗಿದ್ದಾರೆ. ಈ ಮೂಲಕ ನಿತಿನ್ ಕಾಮತ್ ಹಾಕಿದ ಜಾಲೆಂಜ್ ಗೆದ್ದಿದ್ದಾರೆ.

46
ಬೆಟ್ ಸೋತ ಮಾಹಿತಿ ನೀಡಿದ ನಿತಿನ್ ಕಾಮತ್

ಉದ್ಯೋಗಿಗೆ ನೀಡಿದ್ದ ಹೆಲ್ತ್ ಚಾಲೆಂಜ್ ಕುರಿತು ಸ್ವತಃ ನಿತಿನ್ ಕಾಮತ್ ಮಾಹಿತಿ ಹಂಚಿಕೊಂಡಿದ್ದಾರೆ. ಫಿಟ್ನೆಸ್ ಬೆಟ್‌ನಲ್ಲಿ ನಾನು ಸೋತಿದ್ದೇನೆ. ಆದರೆ ಈ ಸೋಲು ನನಗೆ ಇಷ್ಟ, ನಾನು ಹೆಚ್ಚು ಖುಷಿಯಾಗಿದ್ದೇನೆ ಎಂದು ನಿತಿನ್ ಕಾಮತ್ ಹೇಳಿಕೊಂಡಿದ್ದಾರೆ.

56
ಉದ್ಯೋಗಿಗಳಿಗೆ ಹೆಲ್ತ್ ಚಾಲೆಂಜ್

ನಿತಿನ್ ಕಾಮತ್ ತಮ್ಮ ಜಿರೋಧಾ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೆಲ್ತ್ ಚಾಲೆಂಜ್ ಹಾಕಿದ್ದಾರೆ. ಫಿಟ್ ಇಲ್ಲದ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ, ಹೆಚ್ಚು ತೂಕ ಇರುವ ಉದ್ಯೋಗಿಗಳಿ ಚಾಲೆಂಜ್ ಹಾಕಿದ್ದಾರೆ. ಇದರ ಪರಿಣಾಮ ಹಲವು ಉದ್ಯೋಗಿಗಳು 95 ಕೆಜಿ ತೂಕದಿಂದ 75 ಕೆಜಿ ತೂಕಕ್ಕೆ ಇಳಿದಿದ್ದಾರೆ.

66
ಆರೋಗ್ಯದ ಬಗ್ಗೆ ವಿಶೇಷ ಕಾಳಜಿ

ನಿತಿನ್ ಕಾಮತ್ ಹೆಲ್ತ್ ಚಾಲೆಂಜ್‌ಗೆ ಉದ್ಯೋಗಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಬಗ್ಗೆ, ಡಯಟ್, ವ್ಯಾಯಾಮದ ಬಗ್ಗೆ ನಿತಿನ್ ಕಾಮತ್ ಹೆಚ್ಚು ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಕಚೇರಿಯಲ್ಲಿ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಹಲವರು ಈ ಚಾಲೆಂಜ್ ಸ್ವೀಕರಿಸಿ ಫಿಟ್ ಆಗಿದ್ದಾರೆ ಎಂದು ಉದ್ಯೋಗಿಗಳು ಹೇಳಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories