2025ರಲ್ಲಿ ಸಂಪತ್ತು ಡಬಲ್‌ ಮಾಡಿದ ಟಾಪ್‌-10 ಷೇರುಗಳು, ಇದರಲ್ಲಿ ನಿಮ್ಮ ಹೂಡಿಕೆ ಇದ್ಯಾ?

Published : Jan 01, 2026, 06:44 PM IST

2025ರಲ್ಲಿ ಭಾರತೀಯ ಷೇರು ಮಾರುಕಟ್ಟೆಯು ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿ ಸಿಂಗಲ್-ಡಿಜಿಟ್ ಲಾಭವನ್ನು ಕಂಡರೂ, ಕೆಲವು ಷೇರುಗಳು ಹೂಡಿಕೆದಾರರಿಗೆ ಅದ್ಭುತ ಲಾಭವನ್ನು ನೀಡಿವೆ. ಫೋರ್ಸ್ ಮೋಟಾರ್ಸ್, ಎಲ್&ಟಿ ಫೈನಾನ್ಸ್, ಮತ್ತು ಹಿಂದೂಸ್ತಾನ್ ಕಾಪರ್ ಸೇರಿದಂತೆ 10 ಕಂಪನಿಗಳು ಭರ್ಜರಿ ರಿಟರ್ನ್ಸ್‌ ನೀಡಿವೆ.

PREV
112
ನಿಫ್ಟಿ ಸಿಂಗಲ್‌ ಡಿಜಿಟ್‌ ಲಾಭ

ಭಾರತದ ಷೇರು ಸೂಚ್ಯಂಕಗಳು 2025 ರಲ್ಲಿ ಸಿಂಗಲ್‌ ಡಿಜಿಟ್‌ ಲಾಭದೊಂದಿಗೆ ಮುಕ್ತಾಯಗೊಂಡವು, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಬಲವಾದ ರಾಲಿಗಿಂತ ಹಿಂದುಳಿದವು. ನಿಫ್ಟಿ 10% ಕ್ಕಿಂತ ಸ್ವಲ್ಪ ಹೆಚ್ಚು ಏರಿಕೆ ಕಂಡಿತು ಮತ್ತು ಸೆನ್ಸೆಕ್ಸ್ 9% ರಷ್ಟು ಏರಿಕೆಯಾಯಿತು.

212
ಟಾಪ್‌-10 ಷೇರುಗಳು

ಹೆಚ್ಚೇನೂ ಲಾಭ ನೀಡದ ವರ್ಷದಲ್ಲಿ ಕೆಲವು ಷೇರುಗಳು ಮಾತ್ರ ಹೂಡಿಕೆದಾರರ ಹಣವನ್ನು ಡಬಲ್‌ ಮಾಡಿದೆ. ಅಂಥ 10 ಷೇರುಗಳ ಲಿಸ್ಟ್‌ ಇಲ್ಲಿದೆ.

312
Force Motors

ಫೋರ್ಸ್‌ ಮೋಟಾರ್ಸ್‌ ಕಂಪನಿಯ ಷೇರು 2025ರಲ್ಲಿ ಬರೋಬ್ಬರಿ ಶೇ.251.8ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿಸೆಂಬರ್‌ 31 ರಂದು ಫೋರ್ಸ್‌ ಮೋಟಾರ್ಸ್‌ ಷೇರು ಬೆಲೆ 6512.5 ರೂಪಾಯಿಗೆ ಮುಕ್ತಾಯ ಕಂಡಿತ್ತು. 2025ರ ಡಿಸೆಂಬರ್‌ 31 ರಂದು ಪ್ರತಿ ಷೇರಿಗೆ 20,566 ರೂಪಾಯಿಯಲ್ಲಿ ಅಂತ್ಯ ಕಂಡಿದೆ.

412
L&T Finance

ಫೋರ್ಸ್‌ ಮೋಟಾರ್ಸ್‌ನಂತೆ ಗರಿಷ್ಠ ಲಾಭ ನೀಡಿದ ಇನ್ನೊಂದು ಕಂಪನಿ L&T Finance. ಕಳೆದ ವರ್ಷ ಇದು ಹೂಡಿಕೆದಾರರಿಗೆ ಶೇ. 132.9ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿಸೆಂಬರ್‌ 31ಕ್ಕೆ ಈ ಕಂಪನಿಯ ಪ್ರತಿ ಷೇರು 135.6ರಲ್ಲಿ ಮುಕ್ತಾಯ ಕಂಡಿದ್ದರೆ, 2025ರ ಡಿಸೆಂಬರ್‌ 31ರಂದು 316 ರೂಪಾಯಿಯಲ್ಲಿ ಮುಕ್ತಾಯ ಕಂಡಿದೆ.

512
Hindustan Copper

ಜಗತ್ತಿನಲ್ಲಿ ತಾಮ್ರದ ಬೆಲೆಗಳು ಏರಿಕೆ ಆಗುತ್ತಿವೆ. ಇದು Hindustan Copper ಕಂಪನಿಯ ಮೇಲೆ ಪರಿಣಾಮ ಬೀರಿದ್ದು, ಕಳೆದ ವರ್ಷದಲ್ಲಿ ಶೇ. 109ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿ.31ಕ್ಕೆ ಪ್ರತಿ ಷೇರಿಗೆ 248 ರೂಪಾಯಿ ಇದ್ದರೆ, 2025ರ ಡಿಸೆಂಬರ್‌ 31ಕ್ಕೆ 518.3 ರೂಪಾಯಿಗೆ ಮುಕ್ತಾಯ ಕಂಡಿದೆ.

612
Aditya Birla Capital

ಬಿರ್ಲಾ ಸಮೂಹದ ಉದ್ಯಮ ಆದಿತ್ಯ ಬಿರ್ಲಾ ಕ್ಯಾಪಿಟಲ್‌ ಕಳೆದ ವರ್ಷ ಶೇ. 101.2ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿ.31ಕ್ಕೆ ಪ್ರತಿ ಷೇರಿಗೆ 177.8 ರೂಪಾಯಿ ಇದ್ದರೆ, 2025ರ ಡಿಸೆಂಬರ್‌ 31ಕ್ಕೆ 357.7 ರೂಪಾಯಿಗೆ ಮುಕ್ತಾಯ ಕಂಡಿದೆ.

712
RBL Bank

ರತ್ನಾಕರ ಬ್ಯಾಂಕ್‌ ಲಿಮಿಟೆಡ್‌ ಅಥವಾ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿ ಎಮಿರೇಟ್ಸ್‌ ಎನ್‌ಬಿಡಿ ಹೂಡಿಕೆ ಮಾಡಿದ್ದು, ಇನ್ವೆಸ್ಟರ್ಸ್‌ಗಳ ಹಿತ ಕಾದಿದೆ. ಕಳೆದ ವರ್ಷ ಇದು ಶೇ. 99.9ರಷ್ಟು ರಿಟರ್ನ್ಸ್ ನೀಡಿದೆ. 2024ರ ಡಿ.31ಕ್ಕೆ 158 ರೂಪಾಯಿ ಹಾಗೆ ಮಾರಾಟವಾಗಿದ್ದ ಷೇರು 2025ರ ಡಿ.31ಕ್ಕೆ ಪ್ರತಿ ಷೇರಿಗೆ 315.8ಕ್ಕೆ ಏರಿಕೆ ಆಗಿದೆ.

812
GMDC

ಗುಜರಾತ್‌ ಮಿನರಲ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಕಳೆದ ವರ್ಷ ಶೇ.86.1ರಷ್ಟು ರಿಟರ್ನ್ಸ್ ನೀಡಿದೆ. 2024ರ ಡಿ.31ಕ್ಕೆ 321.8ರ ಆಸುಪಾಸಿನಲ್ಲಿದ್ದ ಷೇರು, 2025ರ ಡಿ.31ಕ್ಕೆ 598.8 ರೂಪಾಯಿಗೆ ಏರಿಕೆ ಆಗಿದೆ.

912
Laurus Labs

ಫಾರ್ಮಾ ಕಂಪನಿಯ ಪ್ರಮುಖ ಷೇರು ಲೌರಸ್‌ ಲ್ಯಾಬ್ಸ್‌. ಕಳೆದ ವರ್ಷ ಶೇ. 83.8ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿ.31ಕ್ಕೆ 602.7ರೂಪಾಯಿಯಲ್ಲಿದ್ದ ಷೇರು, 2025ರ ಡಿ.31ಕ್ಕೆ 1108 ರೂಪಾಯಿಗೆ ಏರಿಕೆ ಆಗಿದೆ.

1012
Authum Investment & Infra

ಆಥುಮ್‌ ಇನ್ವೆಸ್ಟ್‌ಮೆಂಟ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಷೇರುಗಳು, ಸೆಕ್ಯುರಿಟೀಸ್, ಮ್ಯೂಚುಯಲ್ ಫಂಡ್‌ಗಳು ಇತ್ಯಾದಿಗಳಲ್ಲಿ ಹೂಡಿಕೆ ಮತ್ತು ಸಾಲಗಳನ್ನು ನೀಡುತ್ತದೆ. ಕಳೆದ ವರ್ಷ ಇದು ಶೇ. 83.8 ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿ.31ಕ್ಕೆ 1,704.7 ರೂಪಾಯಿ ಇದ್ದ ಷೇರು ಬೆಲೆ, 2025ರ ಡಿ.31ಕ್ಕೆ 3,133.4 ರೂಪಾಯಿಗೆ ಏರಿಕೆ ಆಗಿದೆ.

1112
Navin Fluorine Intl

ನವೀನ್ ಫ್ಲೋರಿನ್ ಇಂಟರ್ನ್ಯಾಷನಲ್ ಲಿಮಿಟೆಡ್ ಪ್ರಾಥಮಿಕವಾಗಿ ಫ್ರಿಜ್‌ ಗ್ಯಾಸ್‌, ಅಜೈವಿಕ ಫ್ಲೋರೈಡ್‌ ಉತ್ಪಾದನೆ ಮಾಡುವ ಕಂಪನಿ. ಕಳೆದ ವರ್ಷದಲ್ಲಿ ಶೇ. 82.4ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿ. 31ಕ್ಕೆ 3,245.8 ಇದ್ದ ಷೇರು ಬೆಲೆ, 2025ರ ಡಿ.31ರ ವೇಳೆಗೆ 5,920 ರೂಪಾಯಿಗೆ ಏರಿಕೆ ಆಗಿದೆ.

1212
MCX

MCX ಅಥವಾ Multi Commodity Exchange of India Ltd ಕಳೆದ ವರ್ಷ ಇನ್ವೆಸ್ಟರ್ಸ್‌ಗಳಿಗೆ ಶೇ. 78.6ರಷ್ಟು ರಿಟರ್ನ್ಸ್‌ ನೀಡಿದೆ. 2024ರ ಡಿ.31ಕ್ಕೆ 6,234.1 ರೂಪಾಯಿ ಇದ್ದ ಷೇರು ಬೆಲೆ, 2025ರ ಡಿ.31ಕ್ಕೆ 11,136 ರೂಪಾಯಿಗೆ ಏರಿಕೆ ಆಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories