ಒಂದು ಕಪ್ ಚಹಾಕ್ಕಿಂತಲೂ ಕಡಿಮೆ ಬೆಲೆ, ಜಿಯೋ ಬಳಕೆದಾರರಿಗೆ 10GB ಡೇಟಾ ಸೂಪರ್ ಆಫರ್

Published : Dec 30, 2025, 01:17 PM IST

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಡೇಟಾ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 10GB ಹೈ-ಸ್ಪೀಡ್ ಡೇಟಾ ಲಭ್ಯವಾಗಲಿದ್ದು, ತುರ್ತು ಸಮಯದಲ್ಲಿ ಹೆಚ್ಚು ಇಂಟರ್‌ನೆಟ್ ಬಳಸುವವರಿಗೆ ಇದು ಸಹಕಾರಿಯಾಗಿದೆ.

PREV
15
ಕಡಿಮೆ ಮೌಲ್ಯದಲ್ಲಿ ಒಂದೊಳ್ಳೆ ಕೊಡುಗೆ

ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗೆ ಹೊಸ ಆಫರ್‌ಗಳನ್ನು ನೀಡುತ್ತಿದೆ. ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಜಿಯೋ ಇದೀಗ ಒಂದು ಕಪ್ ಟೀ ಬೆಲೆಗಿಂತಲೂ ಕಡಿಮೆ ಮೌಲ್ಯದಲ್ಲಿ ಒಂದೊಳ್ಳೆ ಕೊಡುಗೆಯನ್ನು ತಂದಿದೆ.

25
ಇಂಟರ್‌ನೆಟ್

ಇಂದು ಮಹಾನಗರಗಳಲ್ಲಿ ಒಂದು ಕಪ್ ಟೀ ಬೆಲೆ 12 ರಿಂದ 15 ರೂ.ಆಗಿದೆ. ಆದ್ರೆ ಜಿಯೋ ಇದೀಗ ಕೇವಲ 11 ರೂ. ಬೆಲೆಯ ವಿಶೇಷ ಕೊಡುಗೆಯನ್ನು ಪರಿಚಯಿಸಿದೆ. ತುರ್ತು ಸಮಯದಲ್ಲಿ ಹೆಚ್ಚು ಇಂಟರ್‌ನೆಟ್ ಬಳಕೆದಾರರಿಗೆ ಈ ಯೋಜನೆ ಲಾಭದಾಯಕವಾಗಲಿದೆ.

35
10GB ಹೈ-ಸ್ಪೀಡ್ ಡೇಟಾ

ಕಡಿಮೆ ಬೆಲೆಗೆ ಹೆಚ್ಚು ಇಂಟರ್‌ನೆಟ್ ಬಯಸುವ ಬಳಕೆದಾರರು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜಿಯೋ ನೀಡುತ್ತಿರುವ ಪ್ಲಾನ್ ಬೆಲೆ 11 ರೂಪಾಯಿ ಆಗಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ 10GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಆದ್ರೆ ಈ ಪ್ಲಾನ್ ಕೇವಲ 1 ಗಂಟೆ ವ್ಯಾಲಿಡಿಟಿಯನ್ನು ಹೊಂದಿದೆ.

45
ಹೈಸ್ಪೀಡ್ ಡೇಟಾ

ಹೈಸ್ಪೀಡ್ ಡೇಟಾ ಹಿನ್ನೆಲೆ ಬಳಕೆದಾರರು ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಡೌಲ್‌ಲೋಡ್ ಮಾಡಿಕೊಳ್ಳಬಹುದು. ಆಫಿಸ್‌ ಕೆಲಸಕ್ಕೆ, ಕಡಿಮೆ ಸಮಯದಲ್ಲಿ ಹೆಚ್ಚು ಇಂಟರ್‌ನೆಟ್ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆ ಸಹಕಾರಿಯಾಗಲಿದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!

55
ಏರ್‌ಟೆಲ್‌ನಲ್ಲಿ 11 ರೂ. ಪ್ಲಾನ್ ಇಲ್ಲ

ಇದು ಡೇಟಾ-ಮಾತ್ರದ ಪ್ಲಾನ್, ಇದರಲ್ಲಿ ಕರೆ ಅಥವಾ SMS ಇಲ್ಲ. ನಿಮ್ಮ ಮುಖ್ಯ ಪ್ಲಾನ್ ಜೊತೆ ಡೇಟಾ ಪ್ಯಾಕ್ ಆಕ್ಟಿವ್ ಮಾಡಿಕೊಳ್ಳಬಹದು. ಎದುರಾಳಿ ನಂಬರ್ 2 ಟೆಲಿಕಾಂ ಕಂಪನಿಯಾಗಿರುವ ಏರ್‌ಟೆಲ್‌ನಲ್ಲಿ 11 ರೂ. ಪ್ಲಾನ್ ಇಲ್ಲ. ಏರ್‌ಟೆಲ್‌ನಲ್ಲಿ 22 ರೂ.ಗೆ 1GB ಡೇಟಾ ಸಿಗುತ್ತದೆ. ತುರ್ತು ಅಗತ್ಯಕ್ಕೆ ಜಿಯೋ ಪ್ಲಾನ್ ಉತ್ತಮ ಎಂದು ಬಳಕೆದಾರರು ಹೇಳುತ್ತಾರೆ.

ಇದನ್ನೂ ಓದಿ: ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆ ಜೊತೆ 3 ಹೊಸ ಪ್ಲಾನ್ ನೀಡಿದ ರಿಲಯನ್ಸ್ ಜಿಯೋ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories