ಭಾರತೀಯರು ಮನೆಗಳಲ್ಲಿ ಇಟ್ಟಿರುವ ಚಿನ್ನದ ಮೌಲ್ಯ ಎಷ್ಟು ಗೊತ್ತಾ? ಜಿಡಿಪಿಯನ್ನೇ ಮೀರಿಸಿ ದಾಖಲೆ, ಇದರ ಮೌಲ್ಯ ಭಾರತದ ಜಿಡಿಪಿಯನ್ನೇ ಮೀರಿಸಿದೆ. ಮಾರ್ಗನ್ ಸ್ಟಾನ್ಲಿ ವರದಿ ಈ ಕುರಿತು ರೋಚಕ ಮಾಹಿತಿಯನ್ನು ನೀಡಿದೆ. ಈ ಚಿನ್ನದಲ್ಲಿ ನಿಮ್ಮ ಪಾಲೆಷ್ಟು?
ಭಾರತೀಯರಿಗೆ ಚಿನ್ನ ಅತ್ಯಂತ ಪ್ರಮುಖ ವಸ್ತು. ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ ಬೀದಿ ಬದಿಯಲ್ಲಿ ಕಡಲೆ ಕಾಯಿಯಂತೆ ಮಾರಾಟ ಮಾಡುತ್ತಿದ್ದರು. ಅಷ್ಟು ಸಂಪತ್ಬರಿತ ರಾಜ್ಯವಾಗಿತ್ತು ಕರ್ನಾಟಕ. ಈಗ ಚಿನ್ನದ ಬೆಲೆ ಬಲು ದುಬಾರಿಯಾಗಿದೆ. ಹಾಗಂತ ಭಾರತೀಯರು ಚಿನ್ನ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ. ಇಷ್ಟೇ ಅಲ್ಲ ಭಾರತೀಯರ ಚಿನ್ನದ ಸಂಪತ್ತು ನೋಡಿದರೆ ಜಗತ್ತೆ ಬೆಚ್ಚಿ ಬೀಳುತ್ತದೆ.
25
ಮಾರ್ಗನ್ ಸ್ಟಾನ್ಲಿ ವರದಿ
ಮಾರ್ಗನ್ ಸ್ಟಾನ್ಲಿ ವರದಿ ಪ್ರಕಾರ ಭಾರತೀಯರು ಖರೀದಿಸಿ ಮನೆಯಲ್ಲಿ ಅಥವಾ ಬ್ಯಾಂಕ್‌ನಲ್ಲಿ ಇಟ್ಟಿರುವ ಚಿನ್ನ ಬರೋಬ್ಬರಿ 34,600 ಟನ್. ಇಷ್ಟು ಚಿನ್ನ ಭಾತೀಯರ ಮನೆ ಹಾಗೂ ಬ್ಯಾಂಕ್ ಲಾಕ್‌ನಲ್ಲಿ ಭದ್ರವಾಗಿದೆ. ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತೀಯರು ಅತೀ ಹೆಚ್ಚು ಚಿನ್ನ ಶೇಖರಿಸಿ ಇಟ್ಟಿರುತ್ತಾರೆ.
35
34,600 ಟನ್ ಚಿನ್ನದ ಈಗಿನ ಮೌಲ್ಯ ಎಷ್ಟು?
ಭಾರತೀಯರು ಮನೆ ಹಾಗೂ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿರುವ ಒಟ್ಟು ಚಿನ್ನ ಸರಿಸುಮಾರು 34,600 ಟನ್. ಸದ್ಯ ಚಿನ್ನದ ಬೆಲೆ ಬಲು ದುಬಾರಿಯಾಗಿದೆ. ಈಗಿನ ಬೆಲೆಯಲ್ಲಿ ಲೆಕ್ಕಾಚಾರ ಹಾಕಿದರೆ ಈ ಚಿನ್ನದ ಒಟ್ಟು ಮೌಲ್ಯ 5 ಟ್ರಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ ಇದು 449.51 ಲಕ್ಷ ಕೋಟಿ ರೂಪಾಯಿ.
ಭಾರತೀಯರು ಮನೆಯಲ್ಲಿ ಭದ್ರವಾಗಿಟ್ಟಿರುವ ಚಿನ್ನದ ಮೌಲ್ಯ ಭಾರತದ ಒಟ್ಟು ಜಿಡಿಪಿಯನ್ನು ಹಿಂದಿಕ್ಕಿದೆ. ಅಂತಾರಷ್ಟ್ರೀಯ ಹಣಕಾಸು ನಿಧಿಯ ವರದಿ ಪ್ರಕಾರ ಭಾರತದ ಜಿಡಿಪಿ 4.1 ಟ್ರಿಲಿಯನ್ ಅಮೆರಿಕನ್ ಡಾಲರ್. ಚಿನ್ನದ ಮೌಲ್ಯ 5 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟಾಗಿದೆ.
ಜಿಡಿಪಿ ಹಿಂದಿಕ್ಕಿದ ಚಿನ್ನ
55
ಎಷ್ಟಾಗಿದೆ ಚಿನ್ನದ ಬೆಲೆ
ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,40,228 ರೂಪಾಯಿ. ಬೆಂಗಳೂರಿನಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 140,150 ರೂಪಾಯಿ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 128,471 ರೂಪಾಯಿ ಆಗಿದೆ.
ಎಷ್ಟಾಗಿದೆ ಚಿನ್ನದ ಬೆಲೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.