ಷೇರು ಮಾರುಕಟ್ಟೆಯಲ್ಲಿ ನಾಳೆಯೂ ರಕ್ತದೋಕುಳಿ ಮುಂದುವರೆಯುತ್ತಾ? ಮಾರುಕಟ್ಟೆ ತಜ್ಞರು ಏನಂತಾರೆ?

Published : Jan 20, 2026, 08:44 PM IST

ಷೇರು ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಭಾರಿ ಕುಸಿತ ಉಂಟಾಗಿದ್ದು, ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಜಾಗತಿಕ ಮಾರುಕಟ್ಟೆಗಳ ದುರ್ಬಲ ಪ್ರವೃತ್ತಿಯಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಮಟ್ಟದಲ್ಲಿ ಕುಸಿದಿವೆ. ನಾಳೆಯ ವಹಿವಾಟಿನ ಬಗ್ಗೆ ತಜ್ಞರು ಏನ್ ಹೇಳ್ತಾರೆ..

PREV
16
ಷೇರು ಮಾರುಕಟ್ಟೆಯಲ್ಲಿ ಜೋರಾದ ಕರಡಿ ಕುಣಿತ

ಈ ವಾರದ ಆರಂಭದಿಂದಲೇ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಜೋರಾಗಿದ್ದು, ಇಂದು ಕೂಡ ಹಲವು ಷೇರುಗಳು ದಾಖಲೆ ಮಟ್ಟದ ಕುಸಿತ ಕಂಡಿದ್ದು, ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿಯೇ ನಡೆದಿದೆ. ಹೂಡಿಕೆದಾರರ ಕೋಟ್ಯಾಂತರ ರೂಪಾಯಿ ಹಣ ಒಂದೇ ದಿನದಲ್ಲಿ ಕೊಚ್ಚಿ ಹೋಗಿದ್ದು, ಅನೇಕ ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟಗಾರರು ದೊಡ್ಡ ಮಟ್ಟದಲ್ಲಿ ಷೇರುಗಳ ಮಾರಾಟ ಮಾಡಿದ್ದು, ಮತ್ತು ದುರ್ಬಲವಾಗಿರುವ ಕೆಲ ಜಾಗತಿಕ ಸೂಚನೆಗಳಿಂದಾಗಿ ಮಂಗಳವಾರವಾದ ಇಂದು ಕೂಡ ಸತತ ಎರಡನೇ ದಿನದ ವಹಿವಾಟಿನಲ್ಲೂ ಷೇರು ಮಾರುಕಟ್ಟೆಗಳು ನಷ್ಟವನ್ನು ಮುಂದುವರಿಸಿವೆ. ಇದರಿಂದ ಹೂಡಿಕೆದಾರರ 10 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ನಷ್ಟವಾಗಿದೆ.

26
ಹೂಡಿಕೆದಾರರ ಕೋಟ್ಯಾಂತರ ರೂಪಾಯಿ ಢಮಾರ್

ಹೀಗಾಗಿ ದಲ್ಲಾಲ್ ಸ್ಟ್ರೀಟ್‌ನಲ್ಲಿ ನಾಳೆ ವಹಿವಾಟು ಹೇಗಿರಬಹುದು, ನಾಳೆಯೂ ರಕ್ಯದೋಕುಳಿ ಮುಂದುವರೆಯಬಹುದೇ ಕರಡಿಯ ಬದಲು ಗೂಳಿ ಕುಣಿಯಬಹುದೇ? ಹೂಡಿಕೆದಾರರು ಅಲ್ಪಾವಧಿಯ ಪರಿಹಾರವನ್ನು ನಿರೀಕ್ಷಿಸಬಹುದೇ ಈ ಬಗ್ಗೆ ಮಾರುಕಟ್ಟೆ ತಜ್ಞರು ಏನು ಹೇಳುತ್ತಾರೆ ಈ ಬಗ್ಗೆ ಡಿಟೇಲ್ ಮಾಹಿತಿ ಇಲ್ಲಿದೆ.

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಇಂದು 1,065.71 ಪಾಯಿಂಟ್ ಅಥವಾ ಶೇಕಡಾ 1.28 ರಷ್ಟು ಕುಸಿತ ಕಂಡು 82,180.47 ಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,235.6 ಪಾಯಿಂಟ್ ಅಥವಾ ಶೇಕಡಾ 1.48 ರಷ್ಟು ಕುಸಿದು 82,010.58 ಕ್ಕೆ ತಲುಪಿದೆ. ಹಾಗೆಯೇ ಮತ್ತೊಂದು ಸೂಚ್ಯಂಕ ಶೇಕಡಾ 1.38 ರಷ್ಟು ಕುಸಿದು 25,232.50 ಕ್ಕೆ ತಲುಪಿದೆ. ಈ ಕುಸಿತವೂ 2025ರ ಏಪ್ರಿಲ್ 7ರ ನಂತರದ ಒಂದೇ ದಿನದ ಅತ್ಯಂತ ಹೆಚ್ಚು ಕುಸಿತವನ್ನು ಸೂಚಿಸುತ್ತದೆ. ಈ ಕುಸಿತವು 2025 ರ ಅಕ್ಟೋಬರ್ 15ರ ನಂತರದ ಅತ್ಯಂತ ಕಡಿಮೆ ಮುಕ್ತಾಯದ ಮಟ್ಟಕ್ಕೆ ಸೂಚ್ಯಂಕವನ್ನು ಎಳೆದಿದೆ.

36
ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ

ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ದುರ್ಬಲವಾಗಿಯೇ ನಿಫ್ಟಿ ಪ್ರಾರಂಭವಾಯಿತು ಮತ್ತು ವಹಿವಾಟಿನ ಬಹುಪಾಲು ಒತ್ತಡದಲ್ಲಿಯೇ ಇತ್ತು. ರಿಯಲ್ ಎಸ್ಟೇಟ್, ಆಟೋ ಮತ್ತು ಐಟಿ ಷೇರುಗಳು ಪ್ರಮುಖವಾಗಿ ಕುಸಿತ ಕಂಡರೆ, ಬ್ಯಾಂಕಿಂಗ್ ಷೇರುಗಳು ಸೀಮಿತ ಬೆಂಬಲವನ್ನು ನೀಡಿದ್ದು, ವಿವಿಧ ವಲಯಗಳಲ್ಲಿ ಮಾರಾಟ ಕಂಡುಬಂದಿದೆ.

ವಿಶಾಲ ಮಾರುಕಟ್ಟೆಯು ತೀವ್ರ ಒತ್ತಡದಲ್ಲಿಯೇ ಉಳಿಯಿತು, ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 3 ರಷ್ಟು ಕುಸಿದವು , ಇದು ಹೆಚ್ಚಿದ ಅಪಾಯದ ಹಿಂಜರಿಕೆ ಮತ್ತು ಹೂಡಿಕೆದಾರರ ದುರ್ಬಲ ವಿಶ್ವಾಸವನ್ನು ತೋರಿಸಿದವು.

46
ಮುಂದೆ ಏನನ್ನು ನಿರೀಕ್ಷಿಸಬಹುದು?

25,400 ರಿಂದ 25,600 ರ ವಲಯವು ನಿಫ್ಟಿಗೆ ತಕ್ಷಣದ ಅಡಚಣೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮಾರುಕಟ್ಟೆಯ ಈ ಏರಿಳಿತಕ್ಕೆ ಸಂಬಂಧಿಸಿಂದತೆ ರೆಲಿಗೇರ್ ಬ್ರೋಕಿಂಗ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಅಜಿತ್ ಮಿಶ್ರಾ ಮಾತನಾಡಿ, ನಿಫ್ಟಿ ತನ್ನ ದೀರ್ಘಕಾಲೀನ ಚಲಿಸುವ ಸರಾಸರಿಯ ಬಳಿ ನಿರ್ಣಾಯಕ ಬೆಂಬಲ ವಲಯವನ್ನು ತಲುಪಿದೆ.

ಈ ಕುಸಿತದ ನಂತರ, ನಿಫ್ಟಿ 25,150 ಹಂತದ ಆಸುಪಾಸಿನಲ್ಲಿ ಇರಿಸಲಾದ 200 DMAಯ ಹತ್ತಿರ ಸಾಗಿದೆ. ಈ ಹಂತಗಳಲ್ಲಿ ಸಂಕ್ಷಿಪ್ತ ವಿರಾಮ ಅಥವಾ ಮತ್ತೆ ಕುಸಿತವನ್ನು ತಳ್ಳಿಹಾಕಲಾಗುವುದಿಲ್ಲ. ಆದರೂ ಯಾವುದೇ ಚೇತರಿಕೆಯು ಬ್ಯಾಂಕಿಂಗ್ ಮತ್ತು ಐಟಿ ಷೇರುಗಳ ಕಾರ್ಯಕ್ಷಮತೆಯನ್ನು ಹೆಚ್ಚಾಗಿ ಅವಲಂಬಿಸಿದೆ, ಇವು ಇಲ್ಲಿಯವರೆಗೆ ತುಲನಾತ್ಮಕವಾಗಿ ಉತ್ತಮ ಸ್ಥಿರತೆಯನ್ನು ತೋರಿಸಿವೆ ಎಂದು ಮಿಶ್ರಾ ಹೇಳಿದ್ದಾರೆ.

56
ಮಾರುಕಟ್ಟೆ ತಜ್ಞರು ಏನಂತಾರೆ?

ಒಂದು ವೇಳೆ ಕುಸಿತ ಕಂಡುಬಂದರೆ, 25,400–25,600 ವಲಯವು ತಕ್ಷಣದ ಪ್ರತಿರೋಧವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ, ಆದರೆ ದೀರ್ಘಾವಧಿಯ ಚಲಿಸುವ ಸರಾಸರಿಗಿಂತ ಕಡಿಮೆ ನಿರ್ಣಾಯಕ ವಿರಾಮವು 24,900 ಮಟ್ಟಕ್ಕೆ ಮತ್ತಷ್ಟು ಕುಸಿತಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು. ಹೂಡಿಕೆದಾರರು ಸ್ಥಾನದ ಗಾತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಮತ್ತು ಚಾಲ್ತಿಯಲ್ಲಿರುವ ಪ್ರವೃತ್ತಿಗೆ ಅನುಗುಣವಾಗಿ ವ್ಯಾಪಾರ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

66
ಅತಿ ವೇಗದ ಅಲ್ಪಾವಧಿಯ ಕುಸಿತ

ಎಸ್‌ಬಿಐ ಸೆಕ್ಯುರಿಟೀಸ್‌ನ ತಾಂತ್ರಿಕ ಮತ್ತು ಉತ್ಪನ್ನ ಸಂಶೋಧನಾ ಮುಖ್ಯಸ್ಥ ಸುದೀಪ್ ಶಾ ಮಾತನಾಡಿ ಮಾರುಕಟ್ಟೆಯ ಮಾನದಂಡ ಸೂಚ್ಯಂಕವು ತೀವ್ರ ಮಾರಾಟಕ್ಕೆ ಸಾಕ್ಷಿಯಾಯಿತು, ವಹಿವಾಟಿನ ಉದ್ದಕ್ಕೂ ಮಾರಾಟದ ಒತ್ತಡ ಮೇಲುಗೈ ಸಾಧಿಸಿತು ಎಂದು ಹೇಳಿದರು. ಈ ಕುಸಿತದೊಂದಿಗೆ, ನಿಫ್ಟಿ ಕೇವಲ 10 ವಹಿವಾಟು ಅವಧಿಗಳಲ್ಲಿ 4 ಪ್ರತಿಶತಕ್ಕೂ ಹೆಚ್ಚು ತಿದ್ದುಪಡಿಯನ್ನು ಕಂಡಿದೆ ಇದು ಇತ್ತೀಚಿನ ತಿಂಗಳುಗಳಲ್ಲಿ ಅತಿ ವೇಗದ ಅಲ್ಪಾವಧಿಯ ಕುಸಿತಗಳಲ್ಲಿ ಒಂದಾಗಿದೆ ಎಂದು ಶಾ ಹೇಳಿದರು.

ವ್ಯಾಪಾರಿಗಳು ಮತ್ತು ಸಾಂಸ್ಥಿಕ ಹೂಡಿಕೆದಾರರು ಟ್ರ್ಯಾಕ್ ಮಾಡುವ ಪ್ರಮುಖ ದೀರ್ಘಕಾಲೀನ ಬೆಂಬಲ ಮಟ್ಟವಾದ 200-ದಿನಗಳ ಘಾತೀಯ ಚಲಿಸುವ ಸರಾಸರಿಯ ಬಳಿ ಸೂಚ್ಯಂಕವು ತೂಗಾಡುತ್ತಿದೆ . ದೈನಂದಿನ RSI 29.27ಕ್ಕೆ ಇಳಿದಿದೆ, ಇದು ಮಾರ್ಚ್ 2025 ರ ನಂತರದ ಅತ್ಯಂತ ದುರ್ಬಲ ಸ್ಥಿತಿಯಾಗಿದೆ, ಇದು ಬಲವಾದ ಕೆಳಮುಖ ಆವೇಗದೊಂದಿಗೆ ಓವರ್‌ಸೋಲ್ಡ್ ಪರಿಸ್ಥಿತಿಗಳನ್ನು ಸೂಚಿಸುತ್ತದೆ ಎಂದು ಹೇಳಿದರು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories