ಮಗಳ ಮದುವೆಗೆ 25 ಲಕ್ಷ ಮೌಲ್ಯದ ಬೆಳ್ಳಿಯ ಆಮಂತ್ರಣ ಸಿದ್ಧಪಡಿಸಿದ ಉದ್ಯಮಿ: ಏನಿದರ ವಿಶೇಷತೆ

Published : Jan 20, 2026, 11:59 AM IST

ಜೈಪುರದ ಉದ್ಯಮಿ ಶಿವ್ ಜೊಹರಿ ತಮ್ಮ ಮಗಳ ಮದುವೆಗೆ 25 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಬೆಳ್ಳಿಯಿಂದ ಮಾಡಿದ ವಿಶಿಷ್ಟ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಿದ್ದಾರೆ. ಸುಮಾರು 3 ಕೆಜಿ ತೂಕದ ಈ ಪೆಟ್ಟಿಗೆಯಾಕಾರದ ಕಾರ್ಡ್, 65 ದೇವತೆಗಳ ಕೆತ್ತನೆ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

PREV
14
ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕೆಲವು ಮದುವೆಯ ಆಹ್ವಾನ ಪತ್ರಿಕೆಗಳು ಅವುಗಳ ಅದ್ದೂರಿತನದಿಂದಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅನೇಕರು ಆಹ್ವಾನ ಪತ್ರಿಕೆಯಲ್ಲೇ ತಮ್ಮ ಅದ್ದೂರಿತನ ಶ್ರೀಮಂತಿಕೆ ಸ್ಥಾನಮಾನವನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಮಾಜಿ ಸಚಿವ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಾಹ್ಮಿಣಿ ಅವರ ಮದುವೆಯ ಆಹ್ವಾನ ಪತ್ರಿಕೆಯೇ ಸಾಕಷ್ಟು ದೊಡ್ಡ ಸುದ್ದಿ ಮಾಡಿತ್ತು. ಹಾಗೆಯೇ ಈಗ ರಾಜಸ್ಥಾನದ ಜೈಪುರದ ವ್ಯಕ್ತಿಯೊಬ್ಬರು ತಮ್ಮ ಮಗಳ ಮದುವೆಗೆ ಮಾಡಿದ ಆಮಂತ್ರಣವೊಂದು ಈಗ ಭಾರಿ ವೈರಲ್ ಆಗ್ತಿದೆ. ಹೌದು ಈ ಮದುವೆ ಆಮಂತ್ರಣವೂ ಯಾವುದೇ ಮಾಸ್ಟರ್ ಪೀಸ್‌ಗಿಂತ ಕಡಿಮೆ ಏನಿಲ್ಲ. ತಮ್ಮ ಮಗಳ ವಿದಾಯವನ್ನು ಸಾಂಪ್ರದಾಯಿಕ ಆಚರಣೆಗಿಂತ ಹೆಚ್ಚಾಗಿ ಉದ್ಯಮಿ ಶಿವ ಜೋಹರಿ ಅದನ್ನು ನಂಬಿಕೆ, ಸಂಪ್ರದಾಯ ಮತ್ತು ಭಾವನೆಗಳ ಆಚರಣೆಯಾಗಿ ಪರಿವರ್ತಿಸಲು ನಿರ್ಧರಿಸಿದರು.

24
ಸಂಪೂರ್ಣ ಬೆಳ್ಳಿಯಿಂದ ನಿರ್ಮಿಸಲ್ಪಟ್ಟ ಮದುವೆ ಆಮಂತ್ರಣ

ಹೌದು ಜೈಪುರದ ಉದ್ಯಮಿಯಾಗಿರುವ ಶಿವ್ ಜೊಹರಿ ಅವರು ಸಂಪೂರ್ಣವಾಗಿ ಶುದ್ಧ ಬೆಳ್ಳಿಯಿಂದ ಮಾಡಿದ ಪೆಟ್ಟಿಗೆಯ ಆಕಾರದ ವಿವಾಹ ಆಮಂತ್ರಣ ಪತ್ರಿಕೆಯನ್ನು ನಿರ್ಮಾಣ ಮಾಡಿದ್ದಾರೆ. ಇದು ಸುಮಾರು ಮೂರು ಕಿಲೋ ಗ್ರಾಂಗಳಷ್ಟು ತೂಕವಿದ್ದು, ಇದಕ್ಕೆ ಸುಮಾರು 25 ಲಕ್ಷ ರೂ. ವೆಚ್ಚವಾಗಿದೆ. ಸುಮಾರು 8 x6.5 ಇಂಚು ಮತ್ತು 3 ಇಂಚು ಆಳವಿರುವ ಈ ಸಂಕೀರ್ಣವಾಗಿ ರಚಿಸಲಾದ ಈ ಮದುವೆಯ ಆಮಂತ್ರಣ ಕಾರ್ಡ್ ಈಗ ನಗರದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಆಹ್ವಾನ ಪತ್ರಿಕೆಯನ್ನು ಜೋಹಾರಿ ತನ್ನ ಸೊಸೆಯ ಅತ್ತೆಗೆ ನೀಡಿ, ತನ್ನ ಮಗಳನ್ನು ನಿಮ್ಮ ಮನೆಗೆ ಕಳುಹಿಸುವುದಷ್ಟೇ ಅಲ್ಲ, ಅವಳ ಭವಿಷ್ಯವನ್ನು ದೈವಿಕ ರಕ್ಷಣೆಗೆ ಒಪ್ಪಿಸುತ್ತಿದ್ದೇನೆ ಎಂದು ಸಾಂಕೇತಿಕವಾಗಿ ತಿಳಿಸಿದರು ಎಂದು ವರದಿಯಾಗಿದೆ. ನನ್ನ ಮಗಳ ಮದುವೆಗೆ ಸಂಬಂಧಿಕರನ್ನು ಮಾತ್ರವಲ್ಲದೆ ಎಲ್ಲಾ ದೇವರು ಮತ್ತು ದೇವತೆಗಳನ್ನು ಆಹ್ವಾನಿಸಬೇಕೆಂದು ನಾನು ಬಯಸುತ್ತೇನೆ ಎಂದು ಶಿವ್ ಜೊಹರಿ ಹೇಳಿದರು ನವ ದಂಪತಿಗಳು ಜೀವನ ಪೂರ್ತಿ ಖುಷಿಯಾಗಿರಲಿ ಎಂದು ಆಶೀರ್ವದಿಸುತ್ತೇನೆ ಎಂದು ಅವರು ಹೇಳಿದರು.

34
3 ಕೇಜಿ ತೂಕದ 25 ಲಕ್ಷ ಮೌಲ್ಯದ ಬೆಳ್ಳಿಯ ಮದುವೆ ಆಮಂತ್ರಣ

ಈ ಕಾರ್ಡ್‌ನಲ್ಲಿ 65 ದೇವತೆಗಳ ವಿವರವಾದ ಕೆತ್ತನೆಗಳಿದ್ದು, ಪ್ರತಿಯೊಂದನ್ನು ಬಹಳ ಯೋಚಿಸಿ ರಚಿಸಲಾಗಿದೆ. ಮೇಲ್ಭಾಗದಲ್ಲಿ ಗಣೇಶನಿದ್ದು, ಒಂದು ಬದಿಯಲ್ಲಿ ಪಾರ್ವತಿ ದೇವಿ ಮತ್ತು ಇನ್ನೊಂದು ಬದಿಯಲ್ಲಿ ಶಿವನಿದ್ದಾರೆ. ಅವರ ಕೆಳಗೆ ಲಕ್ಷ್ಮಿ ಮತ್ತು ವಿಷ್ಣು ದೇವತೆಗಳಿದ್ದಾರೆ. ನಂತರ ತಿರುಪತಿ ಬಾಲಾಜಿಯ ಎರಡು ರೂಪಗಳು ಮತ್ತು ಅವರ ದ್ವಾರಪಾಲಕರು ಇದ್ದಾರೆ. ಈ ವಿನ್ಯಾಸದಲ್ಲಿ ಬೀಸಣಿಕೆ ಮತ್ತು ದೀಪಗಳನ್ನು ಹಿಡಿದಿರುವ ದೇವತೆಗಳು ಮತ್ತು ಶಂಖ ಚಿಪ್ಪುಗಳು ಮತ್ತು ಡ್ರಮ್‌ಗಳನ್ನು ನುಡಿಸುವ ದೇವತೆಗಳನ್ನು ಸಹ ಒಳಗೊಂಡಿದೆ. ಕಾರ್ಡ್‌ನ ಮಧ್ಯಭಾಗದಲ್ಲಿ, ವಧು ಶ್ರುತಿ ಜೋಹಾರಿ ಮತ್ತು ವರ ಹರ್ಷ್ ಸೋನಿ ಅವರ ಹೆಸರುಗಳನ್ನು ಕಾವ್ಯಾತ್ಮಕ ಶೈಲಿಯಲ್ಲಿ ಕೆತ್ತಲಾಗಿದೆ. ಆನೆಗಳು ಅವರ ಹೆಸರನ್ನು ಸುತ್ತುವರೆದು ಹೂವುಗಳನ್ನು ಸುರಿಸುತ್ತವೆ, ಇದು ಸಮೃದ್ಧಿ ಮತ್ತು ಶುಭ ಆರಂಭವನ್ನು ಸಂಕೇತಿಸುತ್ತದೆ. ಆಮಂತ್ರಣ ಪತ್ರಿಕೆಯ ಹೊರಭಾಗದಲ್ಲಿ ಅಷ್ಟಲಕ್ಷ್ಮಿ ಮತ್ತು ಆಕೆಯ ಸೇವಕರಿದ್ದಾರೆ. ಹಾಗೆಯೇ ಹಿಂಭಾಗದಲ್ಲಿ ತಿರುಪತಿ ಬಾಲಾಜಿಯ ಮೇಲೆ ಪ್ರಕಾಶಮಾನವಾದ ಬೆಳಕು ಬೀರುವ ಸೂರ್ಯ ದೇವರನ್ನು ಕೆತ್ತಲಾಗಿದ್ದು, ಕಾರ್ಡ್ ಒಳಗೆ ಎರಡೂ ಕುಟುಂಬಗಳ ಹೆಸರುಗಳನ್ನು ಸಹ ಕೆತ್ತಲಾಗಿದೆ, ಇದು ಆಮಂತ್ರಣ ಪತ್ರಿಕೆಯನ್ನು ಕೇವಲ ಒಂದು ಘಟನೆಯಲ್ಲದೆ, ಇಡೀ ಕುಟುಂಬದ ಭಾವನೆಗಳು ಮತ್ತು ಪರಂಪರೆಯನ್ನು ದಾಖಲಿಸುವ ಸ್ಮರಣೆಯಾಗಿದೆ.

44
ದೇವಾನುದೇವತೆಗಳ ಮದುವೆಗೆ ಕರೆದ ಉದ್ಯಮಿ

ವಿನ್ಯಾಸದ ಮತ್ತೊಂದು ಅತ್ಯಂತ ಗಮನಾರ್ಹ ಅಂಶವೆಂದರೆ ಶ್ರೀಕೃಷ್ಣನ ಹುಟ್ಟಿನಿಂದ ಬಾಲ್ಯದವರೆಗಿನ ಜೀವನದ ಚಿತ್ರಣ. ದಕ್ಷಿಣ ಭಾರತೀಯ ಶೈಲಿಯ ಚಿತ್ರಣವು ಕೃಷ್ಣನನ್ನು ಒಂದು ಮುಖ ಮತ್ತು ಐದು ದೇಹಗಳನ್ನು ಹೊಂದಿದ್ದು, ಎಂಟು ಹಸುಗಳು ಅವನನ್ನು ಸುತ್ತುವರೆದಿದ್ದು, ಭಕ್ತಿಯಿಂದ ಅವನನ್ನು ನೋಡುತ್ತಿರುವುದನ್ನು ತೋರಿಸುತ್ತದೆ. ಕಾರ್ಡಿನ ಅಂಚುಗಳ ಸುತ್ತಲೂ, ವಿಷ್ಣುವಿನ ಹತ್ತು ಅವತಾರಗಳನ್ನು ಕೆತ್ತಲಾಗಿದೆ. ಇದರ ಮತ್ತೊಂದು ವಿಶಿಷ್ಟತೆ ಎಂದರೆ ಆಮಂತ್ರಣ ಪತ್ರಿಕೆಯನ್ನು ಒಂದೇ ಒಂದು ಮೊಳೆ ಅಥವಾ ಸ್ಕ್ರೂ ಇಲ್ಲದೆ 128 ಬೆಳ್ಳಿಯ ತುಂಡುಗಳನ್ನು ಬಳಸಿ ಜೋಡಿಸಲಾಗಿದೆ. ಕಾರ್ಡ್‌ನ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಸ್ವತಃ ರೂಪಿಸಲು ಮತ್ತು ವಿನ್ಯಾಸಗೊಳಿಸಲು ಜೋಹರಿ ಸುಮಾರು ಒಂದು ವರ್ಷ ತೆಗೆದುಕೊಂಡಿದ್ದಾರೆ., ಪ್ರತಿಯೊಂದು ವಿವರವು ತನ್ನ ಮಗಳ ಮೇಲಿನ ಭಕ್ತಿ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಶೇಷವಾದ ಆಹ್ವಾನ ಪತ್ರಿಕೆಯನ್ನು ಆರ್ಟ್ ಆಫ್ ವರ್ಕ್, ತಂದೆಯ ಪ್ರೀತಿ, ಬಹಳ ಅರ್ಥಪೂರ್ಣವಾದ ಮದುವೆ ಆಹ್ವಾನ ಪತ್ರಿಕೆ ಎಂದೆಲ್ಲಾ ಕರೆದಿದ್ದಾರೆ. ಇದು ಭಾರತೀಯ ಮದುವೆ ನಂಬಿಕೆ ಭಾವನೆಗಳನ್ನು ಬಹಳ ಅದ್ಭುತವಾಗಿ ತೋರಿಸುತ್ತಿದೆ ಎಂದು ಅನೇಕರು ಬಣ್ಣಿಸಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories