ಕೇಂದ್ರ ಬಜೆಟ್ 2026, ಗಂಡ ಹೆಂಡತಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ನಿರ್ಮಲಾ ಸೀತಾರಾಮನ್

Published : Jan 20, 2026, 01:46 PM IST

ಕೇಂದ್ರ ಬಜೆಟ್ 2026, ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಮದುವೆಯಾದ ಜೋಡಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದೆ. ಜೋಡಿಗಳ ಟ್ಯಾಕ್ಸ್ ಉಳಿತಾಯಕ್ಕೆ ಮಹತ್ವದ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.

PREV
17
ಕೇಂದ್ರ ಬಜೆಟ್ 2026

2026-27ರ ಸಾಲಿನ ಆಯವ್ಯಯಗಳ ಕೇಂದ್ರ ಬಜೆಟ್ ಮಂಡನೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಹಲವು ಕ್ಷೇತ್ರಗಳು ಹೊಸ ಘೋಷಣೆಯ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿ ತೆರಿಗೆ ವಿನಾಯಿತಿ, ಆರೋಗ್ಯ, ಔಷಧಿಗಳ ಮೇಲಿನ ತೆರಿಗೆ ಇಳಿಕೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳು ಹೊಸ ಯೋಜನೆಗಳ ನಿರೀಕ್ಷೆಯಲ್ಲಿದೆ. ಇದರ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಗಂಡ ಹೆಂಡತಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ.

27
ಮದುವೆಯಾದ ಜೋಡಿಗೆ ಬಿಗ್ ರಿಲೀಫ್

ಮದುವೆಯಾದ ಜೋಡಿಗಳಿಗೆ ಈ ಬಾರಿಯ ಬಜೆಟ್‌ಲ್ಲಿ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಇದೆ. ಹೌದು ಗಂಡ ಹೆಂಡತಿ ಜೊತೆಯಾಗಿ ತೆರಿಗೆ ಸಲ್ಲಿಕೆ ಮಾಡುವ ಅವಕಾಶ ನೀಡುವ ಸಾಧ್ಯತೆ ಇದೆ. ಇದರಿಂದ ಗಂಡ ಹೆಂಡತಿ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಈ ಕುರಿತು ಇಂಡಿಯನ್ ಚಾರ್ಟೆಡ್ ಅಕೌಂಟೆಂಟ್ (ICAI) ಮಹತ್ವದ ಸಲಹೆ ನೀಡಿದೆ.

37
ವಿದೇಶದಲ್ಲಿರುವಂತೆ ಜೊತೆಯಾಗಿ ಟ್ಯಾಕ್ಸ್ ಸಲ್ಲಿಕೆಗೆ ಅವಕಾಶ

ಕೆಲ ದೇಶಗಳಲ್ಲಿರುವಂತೆ ಪತಿ ಹಾಗೂ ಪತ್ನಿ ಇಬ್ಬರು ಜೊತೆಯಾಗಿ ಟ್ಯಾಕ್ಸ್ ಸಲ್ಲಿಕೆಗೆ ಅವಕಾಶ ನೀಡಬೇಕು ಎಂದು ICAI ಸಲಹೆ ನೀಡಿದೆ. ಈ ಸಲಹೆ ಬಜೆಟ್ ಸಭೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ICAI ಗಂಡ ಹೆಂಡತಿ ಟ್ಯಾಕ್ಸ್ ಸಲ್ಲಿಕೆಗೆ ಹಲವು ಸೂಚನೆ ಹಾಗೂ ಸಲಹೆಗಳನ್ನು ನೀಡಿದೆ. ಇದರಿಂದ ದಂಪತಿಗಳ ಟ್ಯಾಕ್ಸ್ ಉಳಿತಾಯ ಮಾಡಲು ನೆರವಾಗಲಿದೆ.

47
ಗಂಡ ಹೆಂಡತಿ ಟ್ಯಾಕ್ಸ್ ಸಲ್ಲಿಕೆ

ಸದ್ಯ ಗಂಡ ಹೆಂಡತಿ ಟ್ಯಾಕ್ಸ್ ಬೇರೆ ಬೇರೆ ಅಂದರೆ ಇಬ್ಬರು ಬೇರೆ ಬೇರೆ ಪ್ಯಾನ್ ಕಾರ್ಡ್ ಮೂಲಕ ಸಲ್ಲಿಕೆ ಮಾಡಲಾಗುತ್ತದೆ. ಒಂದು ವೇಳೆ ಹೆಂಡತಿ ಆದಾಯಗಳಿಸುತ್ತಿಲ್ಲದಿದ್ದರೆ ಅವರ ಟ್ಯಾಕ್ಸ್ ವಿನಾಯಿತಿಗಳು ಉಪಯೋಗ ಮಾಡಲು ಸಾಧ್ಯವಾಗುದಿಲ್ಲ. ಇತ್ತ ಗಂಡನಿಗೆ ಟ್ಯಾಕ್ಸ್ ಹೊರೆಯಾಗಲಿದೆ. ಆದರೆ ಇಬ್ಬರು ಜೊತೆಯಾಗಿ ಸಲ್ಲಿಕೆ ಮಾಡುವ ಅವಕಾಶ ನೀಡಿದರೆ ವಿನಾಯಿತಿ ಮೊತ್ತ ಸಡಿಲಿಕೆಯಾಗಲಿದೆ.

57
ತೆರಿಗೆ ವಿನಾಯಿತಿ ಮೊತ್ತ ಹೆಚ್ಚಳ

ಗಂಡ ಹೆಂಡತಿಯ ಒಟ್ಟು ಆದಾಯದ ಮೇಲೆ ತೆರಿಗೆ ಅನ್ವಯವಾಗಲಿದೆ. ಈ ವೇಳೆ ತೆರಿಗೆ ವಿನಾಯಿತಿ ಮೊತ್ತಗಳು ಹೆಚ್ಚಾಗಲಿದೆ. ಇದೇ ವೇಳೆ ಮನೆ ಸಾಲ, ವಿಮೆ, ಇತರ ಭತ್ಯೆಗಳಲ್ಲಿನ ವಿನಾಯಿತಿಗಳ ಮೊತ್ತವೂ ಹೆಚ್ಚಳವಾಗಲಿದೆ.ಇದು ದಂಪತಿಗಳಿಗೆ ಟ್ಯಾಕ್ಸ್ ಉಳಿತಾಯ ಮಾಡಲು ಸಾಧ್ಯವಾಗಲಿದೆ.

67
ಇಬ್ಬರು ಆದಾಯಗಳಿಸುತ್ತಿದ್ದರೆ ಏನು?

ಒಂದು ವೇಳೆ ಪತಿ ಹಾಗೂ ಪತ್ನಿ ಇಬ್ಬರು ಆದಾಯಗಳಿಸುತ್ತಾರೆ. ಇಬ್ಬರು ಜೊತೆಯಾಗಿ ತೆರಿಗೆ ಸಲ್ಲಿಕೆ ಮಾಡುವಾಗ ಒಟ್ಟು ಆದಾಯದ ಮೇಲೆ ವಿನಾಯಿತಿ ವಂಚಿತರಾಗುವಂತಿದ್ದರೆ, ಇಂತಹ ಸಂದರ್ಭಗಳಲ್ಲಿ ಸದ್ಯ ಇರುವಂತೆ ಬೇರೆ ಬೇರೆಯಾಗಿ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದು ICAI ಸಲಹೆ ನೀಡಿದೆ.

77
ಈ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

ಗಂಡ ಹೆಂಡತಿ ಜೊತೆಯಾಗಿ ಟ್ಯಾಕ್ಸ್ ಸಲ್ಲಿಕೆ ಘೋಷಣೆ ಈ ಬಜೆಟ್‌ನಲ್ಲಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಘೋಷಣೆ ಭಾರತದಲ್ಲಿ ಹಲವು ಕುಟುಂಬಗಳ ತೆರಿಗೆ ಹಣ ಉಳಿತಾಯ ಮಾಡಲಿದೆ. ಇಷ್ಟೇ ಅಲ್ಲ ಹಲವು ತೆರಿಗೆ ವಿನಾಯಿತಿ ಹಾಗೂ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ.

ಈ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories