ಇಂಪೋರ್ಟೆಡ್ ಬಿಯರ್, ವೋಡ್ಕಾ ವಿಸ್ಕಿ ಬೆಲೆ ಬಾರಿ ಇಳಿಕೆ, 50% ಸುಂಕ ಇಳಿಕೆಯಿಂದ ಎಷ್ಟಾಗಲಿದೆ ದರ?

Published : Jan 27, 2026, 09:24 PM IST

ಇಂಪೋರ್ಟೆಡ್ ಬಿಯರ್, ವೋಡ್ಕಾ ವಿಸ್ಕಿ ಬೆಲೆ ಬಾರಿ ಇಳಿಕೆ, ಹೈನೆಕೆನ್, ಆ್ಯಬ್ಸಲ್ಯೂಟ್ ವೋಡ್ಕಾ, ಶಾಂಪೇನ್, ರಿಯೊಜಾ ವೈನ್, ಬಿಯರ್ ಸೇರಿದಂತೆ ಹಲವು ಮದ್ಯಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ.

PREV
16
ಮದ್ಯದ ಬೆಲೆ ಭಾರಿ ಇಳಿಕೆ

ಭಾರತದಲ್ಲಿ ವಸ್ತುಗಳ ಬೆಲೆ ದುಬಾರಿ, ಮದ್ಯ ದುಬಾರಿ ಅನ್ನೋದು ಹೊಸದೇನಲ್ಲ. ಆದರೆ ಇದೀಗ ಇದೇ ಮದ್ಯದ ಬೆಲೆ ಭಾರಿ ಇಳಿಕೆಯಾಗಲಿದೆ. ಹೌದು, ಯೂರೋಪಿಯನ್ ಒಕ್ಕೂಟ ದೇಶಗಳಿಂದ ಭಾರತಕ್ಕೆ ಆಮದಾಗುತ್ತಿದ್ದ ಮದ್ಯಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ. ಯೂರೋಪಿಯನ್ ಒಕ್ಕೂಟ ಜೊತೆಗೆ ವ್ಯಾಪಾರ ವಹಿವಾಟು ಒಪ್ಪಂದ ಈ ಬೆಲೆ ಇಳಿಕೆಗೆ ಕಾರಣ.

26
ಶೇಕಡಾ 50ರಷ್ಟು ಸುಂಕ ಇಳಿಕೆ

ಸ್ಪೀಡನ್, ಇಂಗ್ಲೆಂಡ್, ಇಟಲಿ, ಡಚ್, ಜರ್ಮನಿ ಸೇರಿದಂತೆ ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಿಂದ ಭಾರತಕ್ಕೆ ಆಮದಾಗುತ್ತಿದ್ದ ಬಿಯರ್ ಮೇಲಿನ ಸುಂಕ ಶೇಕಡಾ 50ರಷ್ಟು ಇಳಿಕೆ ಮಾಡಲಾಗಿದ್ದರೆ, ವಿಸ್ಕಿ ಸೇರಿದಂತೆ ಮದ್ಯದ ಮೇಲೆ ಶೇಕಡಾ 40ರಷ್ಟು ಬೆಲೆ ಇಳಿಕೆ ಮಾಡಲಾಗಿದೆ. ಇದರಿಂದ ಅತೀ ಕಡಿಮೆ ಬೆಲೆಯಲ್ಲಿ ಮದ್ಯ ಲಭ್ಯವಾಗಲಿದೆ.

36
ವೈನ್ ಮೇಲಿನ ಸುಂಕ ಶೇಕಡಾ 75ಕ್ಕೆ ಇಳಿಕೆ

ಇನ್ನು ವಿದೇಶಿ ವೈನ್ ಮೇಲಿನ ಸುಂಕವನ್ನು ಶೇಕಡಾ 150 ರಿಂದ ಶೇಕಡಾ 75ಕ್ಕೆ ಇಳಿಸಲಾಗುತ್ತದೆ. ಇದರಿಂದ ವಿದೇಶಿ ವೈನ್ ಕೂಡ ಭಾರತದಲ್ಲಿ ಸಾಮಾನ್ಯ ಬೆಲೆಗೆ ಲಭ್ಯವಾಗಲಿದೆ. ಯೂರೋಪಿಯನ್ ಒಕ್ಕೂಟದ 27 ದೇಶಗಳು ಅತೀ ದೊಡ್ಡ ಮದ್ಯ ಉತ್ಪಾದನೆ ದೇಶಗಳಾವಿದೆ. ಈ ಪೈಕಿ ಬಹುತೇಕ ದೇಶಗಳ ಮದ್ಯ ಭಾರತದಲ್ಲಿ ಲಭ್ಯವಿದೆ.

46
ಎಷ್ಟಾಗಲಿದೆ ಮದ್ಯದ ಬೆಲೆ

ಸದ್ಯ ವಿದೇಶಿ ಮದ್ಯದ ಮೇಲೆ ಶೇಕಡಾ 110ರಷ್ಟು ಸುಂಕ ವಿಧಿಸಲಾಗುತ್ತದೆ. ಅಂದರೆ 850 ರೂಪಾಯಿ ಫ್ಯಾಕ್ಟರಿ ಬಾಟಲ್ ಬೆಲೆ ಸುಂಕ ಸೇರಿದಾಗ ಭಾರತದಲ್ಲಿ 1,785 ರೂಪಾಯಿ ಆಗಲಿದೆ.ಇದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಾಗ 3,000 ರೂಪಾಯಿ ಆಗಲಿದೆ. ಇದೀಗ ಸುಂಕ ಕಡಿತದಿಂದ ಇದರ ಬೆಲೆ 2,000 ರೂಪಾಯಿಗೆ ಲಭ್ಯವಾಗಲಿದೆ.

56
ಆಬ್ಸಲ್ಯೂಟ್ ವೋಡ್ಕಾ ಬೆಲೆ ಎಷ್ಟು

ಸ್ವೀಡನ್ ದೇಶದ ಆಬ್ಸಲ್ಯೂಟ್ ವೋಡ್ಕಾ ಭಾರತದಲ್ಲಿ ಅತೀ ಜನಪ್ರಿಯವಾಗಿದೆ. ಸದ್ಯ ಆ್ಯಬ್ಸಲ್ಯೂಟ್ ವೋಡ್ಕಾ ಭಾರತದಲ್ಲಿ ಬೆಲೆ 4,000 ರೂಪಾಯಿ. ಆದರೆ ಸುಂಕ ಕಡಿತದಿಂದ ಇದರ ಬೆಲೆ 2,500 ರೂಪಾಯಿಯಿಂದ 3,000 ರೂಪಾಯಿಗೆ ಇಳಿಕೆಯಾಗಲಿದೆ. ಇನ್ನು ಫ್ರೆಂಚ್ ಜನಪ್ರಿಯ ವೈನ್‌ಗಳು ಭಾರತದಲ್ಲಿ 2,000 ರೂಪಾಯಿಗೆ ಲಭ್ಯವಿದೆ. ಸುಂಕ ಕಡಿತದಿಂದ ಇದು 1200 ರೂಪಾಯಿಗೆ ಲಭ್ಯವಾಗಲಿದೆ. ( ನಿಖರ ಬೆಲೆ ಆಯಾ ರಾಜ್ಯಗಳ ಸುಂಕದ ಮೇಲೆ ನಿರ್ಧಾರವಾಗಲಿದೆ)

66
ಕಡಿಮೆ ಬೆಲೆ ಮದ್ಯಗಳಿಗೆ ಭಾರಿ ಬೇಡಿಕೆ

ವಿದೇಶಗಳಿಂದ ಆಮದು ಮಾಡಿಕೊಳ್ಳುವ ಮದ್ಯಗಳ ಪೈಕಿ ಪ್ರವಾಸೋದ್ಯಮ ಹಾಗೂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿಲು ಕಡಿಮೆ ಬೆಲೆಯ ಮಧ್ಯಗಳಿಗೂ ಉತ್ತೇಜನ ನೀಡಲಾಗುತ್ತದೆ. ಸುಂಕ ಇಳಿಕೆಯಿಂದ ಈ ಮದ್ಯಗಳು ಭಾರತದಲ್ಲೇ ಉತ್ಪನ್ನವಾಗುವ ಮದ್ಯಗಳಿಗೆ ಪೈಪೋಟಿ ನೀಡಲಿದೆ.

ಕಡಿಮೆ ಬೆಲೆ ಮದ್ಯಗಳಿಗೆ ಭಾರಿ ಬೇಡಿಕೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories