ಕೇವಲ 48 ಗಂಟೆಯಲ್ಲಿ ಬೆಳ್ಳಿ ಬೆಲೆ 35000 ರೂಪಾಯಿ ಏರಿಕೆ, ಚಿನ್ನಕ್ಕಿಂತ ಸಿಲ್ವರ್‌ನಲ್ಲಿ ದುಪ್ಪಟ್ಟು ರಿಟರ್ನ್ಸ್

Published : Jan 27, 2026, 03:56 PM IST

ಕೇವಲ 48 ಗಂಟೆಯಲ್ಲಿ ಬೆಳ್ಳಿ ಬೆಲೆ 35000 ರೂಪಾಯಿ ಏರಿಕೆ, ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗಿಂತ ಬೆಳ್ಳಿ ಮೇಲೆ ಹೂಡಿಕೆ ಮಾಡವರಿಗೆ ದುಪ್ಪಟ್ಟು ರಿಟರ್ನ್ಸ್ ಬರುತ್ತಿದೆ. ದಾಖಲೆ ಏರಿಕೆ ಬಳಿಕ ಬೆಳ್ಳಿ ಬೆಲೆ ಎಷ್ಟಾಗಿದೆ.

PREV
15
ಚಿನ್ನ, ಬೆಳ್ಳಿ ಬೆಲೆ ಏರಿಕೆ

ಚಿನ್ನ ಹಾಗೂ ಬೆಳ್ಳಿ ಬೆಲೆ ಭಾರಿ ಏರಿಕೆಯಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಇಂದು 159,820 ರೂಪಾಯಿಗೆ ಏರಿಕೆಯಾಗಿದೆ. ಇಂದ ಚಿನ್ನದ ಬೆಲೆಯಲ್ಲಿ ಶೇಕಡಾ 1.7 ರಷ್ಟು ಏರಿಕೆಯಾಗಿದೆ. ಚಿನ್ನದ ಬೆಲೆ ಭಾರಿ ಏರಿಕೆಯಾಗಿದ್ದು ನಿಜ. ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ. ಆದರೆ ಬೆಳ್ಳಿಗೆ ಹೋಲಿಸಿದರೆ ಚಿನ್ನದ ಬೆಲೆಯ ಏರಿಕೆ ಕಡಿಮೆ.

25
ಎರಡು ದಿನಕ್ಕೆ 35,000 ರೂಪಾಯಿ ಏರಿಕೆ ಕಂಡ ಬೆಳ್ಳಿ

ಕಳೆದ 48 ಗಂಟೆಯಲ್ಲಿ ಬೆಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 35,000 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಳ್ಳಿ ಎಲ್ಲಾ ದಾಖಲೆ ಮುರಿದಿದ್ದು ಮಾತ್ರವಲ್ಲ, ಬೆಳ್ಳಿಯ ಬೆಲೆ ಏರಿಕೆ ಪ್ರಮಾಣ ಮುಂದೆ ಬಂಗಾರ ಭಾರಿ ಹಿಂದಿದೆ. ಕಾರಣ ಬಂಗಾರ ಮೂರರಿಂದ ನಾಲ್ಕು ದಿನಕ್ಕೆ ಶೇಕಡಾ 1 ರಿಂದ 2ರಷ್ಟು ಏರಿಕೆ ಕಾಣುತ್ತಿದೆ. ಆದರೆ ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಆಗಿರುವ ಏರಿಕೆಗೆ ಬೆಚ್ಚಿ ಬೀಳುವುದು ಗ್ಯಾರೆಂಟಿ

35
10 ದಿನಗಳಲ್ಲಿ ಬೆಳ್ಳಿ ಬೆಲೆ ಏರಿಕೆ ಪ್ರಮಾಣ

ಕಳೆದ 10 ದಿನಗಳಲ್ಲಿ ಬೆಳ್ಳಿ ಬೆಲೆ ಬರೋಬ್ಬರಿ ಶೇಕಡಾ 25ರಷ್ಟು ಏರಿಕೆ ಕಂಡಿದೆ. ಹೀಗಾಗಿ ಹೂಡಿಕೆದಾರರು ಇದೀಗ ಬೆಳ್ಳಿ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಬೆಳ್ಳಿ ಪ್ರತ್ತಿ ವರ್ಷಕ್ಕೆ ಶೇಕಡಾ 70 ರಿಂದ 100ರಷ್ಟು ರಿಟನ್ಸ್ ನೀಡುತ್ತಿದೆ. ಅಂದರೆ ಈ ವರ್ಷ 100 ರೂಪಾಯಿ ಬೆಳ್ಳಿ ಮೇಲೆ ಹೂಡಿಕೆ ಮಾಜಿದ್ದರೆ, ಮುಂದಿನ ವರ್ಷಕ್ಕೆ ಡಬಲ್ ಆಗುತ್ತಿದೆ. ಹೀಗಾಗಿ ಬೆಳ್ಳಿ ಹೂಡಿಕೆದಾರರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ.

45
ಬಡವರ ಚಿನ್ನದ ಮೇಲೆ ಶ್ರೀಮಂತರ ಕಣ್ಣು

ಬೆಳ್ಳಿ ಒಂದು ಕಾಲದಲ್ಲಿ ಬಡವರ ಚಿನ್ನ ಎಂದೇ ಗುರುತಿಸಿಕೊಂಡಿತ್ತು. ಚಿನ್ನ ಖರೀದಿ ಅಸಾಧ್ಯವಾಗಿದ್ದ ಜನಸಾಮಾನ್ಯರು ಬೆಳ್ಳಿ ಖರೀದಿಸುತ್ತಿದ್ದರು. ಆದರೆ ಇದೀಗ ಇದೇ ಬಡವರ ಚಿನ್ನದ ಮೇಲೆ ಶ್ರೀಮಂತರು ಕಣ್ಣಿಟ್ಟಿದ್ದಾರೆ. ಕಾರಣ ಹೂಡಿಕೆ ಹಾಗೂ ಅದರಿಂದ ಬರುತ್ತಿರುವ ಆದಾಯ. ಇದಕ್ಕೆ ಬೆಳ್ಳಿ ಬೆಲೆ ಕಾಣುತ್ತಿರುವ ಏರಿಕೆ ಕಾರಣವಾಗಿದೆ.

55
ಇಂದು ಬೆಳ್ಳಿ ಬೆಲೆ

ಜನವರಿ 27ರಂದು ಬೆಳ್ಳಿ ಬೆಲೆ ಪ್ರತಿ ಕೆಜೆಗಿ 3.7 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಬೆಳ್ಳಿ ಕೂಡ ಇದೀಗ ದುಬಾರಿಯಾಗುತ್ತಿದೆ. 10 ಗ್ರಾಂ ಚಿನ್ನದ ಬೆಲೆ 3,751 ರೂಪಾಯಿ ಆಗಿದೆ. 2025ರಲ್ಲಿ ಬೆಳ್ಳಿ ಬೆಲೆಯ ಏರಿಕೆ ದುಪ್ಪಟ್ಟಾಗಿದೆ. ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆಯ ಏರಿಕೆ ಗಣನೀಯವಾಗಿದೆ.

ಇಂದು ಬೆಳ್ಳಿ ಬೆಲೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories