EU ಟ್ರೇಡ್ ಡೀಲ್‌ನಿಂದ ಶೇ. 40 ರಷ್ಟು ತೆರಿಗೆ ಕಡಿತ, ಭಾರತದಲ್ಲಿ ಈ ಕಾರುಗಳ ಬೆಲೆ ಭಾರಿ ಇಳಿಕೆ

Published : Jan 27, 2026, 03:22 PM IST

EU ಟ್ರೇಡ್ ಡೀಲ್‌ನಿಂದ ಶೇ. 40 ರಷ್ಟು ತೆರಿಗೆ ಕಡಿತ, ಗಣರಾಜ್ಯೋತ್ಸವ ದಿನ ನಡೆದ ಮಹತ್ವದ ಒಪ್ಪಂದ ಮಾತುಕತೆ ಯಶಸ್ವಿಯಾಗಿದ್ದು, ಯೂರೋಪಿಯನ್ ಯೂನಿಯನ್ ಮೇಲಿನ ತರಿಗೆ ಕಡಿತಗೊಳ್ಳುತ್ತಿದೆ. ಇದರ ಪರಿಣಾಮ ಭಾರತದಲ್ಲಿ ಈ ಕಾರುಗಳ ಬೆಲೆ ಭಾರಿ ಇಳಿಕೆ.

PREV
16
ಭಾರತ ಯೂರೋಪಿಯನ್ ಒಕ್ಕೂಡ ಡೀಲ್

ಭಾರತ ಹಾಗೂ ಯೂರೋಪಿಯನ್ ಯೂನಿಯನ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೂರೋಪಿಯನ್ ಒಕ್ಕೂಟ ಭಾರತದ ಜೊತೆಗಿನ ಮಹತ್ವದ ಮಾತುಕತೆಯಲ್ಲಿ ವ್ಯಾವಾರ ವಹಿವಾಟು ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಭಾರತ ಹಾಗೂ ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ವಹಿವಾಟುಗಳ ಮೇಲಿನ ಸುಂಕ ಕಡಿತಗೊಳ್ಳುತ್ತಿದೆ.

26
ಯೂರೋಪ್ ಉತ್ಪನ್ನಗಳ ಆಮದು ಸುಂಕ ಕಡಿತ

ಮಹತ್ವದ ಒಪ್ಪಂದದಲ್ಲಿ ಯೋರೋಪಿಯನ್ ಯೂನಿಯನ್ ಉತ್ಪನ್ನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಇನ್ನುಮುಂದೆ ಬರೋಬ್ಬರಿ 40ರಷ್ಟು ತೆರಿಗೆ ಕಡಿತಗೊಳ್ಳಲಿದೆ. ಸದ್ಯ ಯೂರೋಪಿಯನ್ ಒಕ್ಕೂಟಗಳಿಂದ ಭಾರತ ವಸ್ತುಗಳ ಆಮದು ಮಾಡಿಕೊಳ್ಳಲು, ಯೂರೋಪಿಯನ್ ವಸ್ತುಗಳು ಭಾರತದಲ್ಲಿ ಮಾರಾಟ ಮಾಡಲು ಶೇಕಾಡ 110 ತೆರಿಗೆ ನೀಡಬೇಕಿತ್ತು. ಇದೀಗ ಈ ತೆರಿಗೆ ಕಡಿತಗೊಳ್ಳುತ್ತಿದೆ. ಇದರಿಂದ ಭಾರತದಲ್ಲಿ ಲಭ್ಯವಿರುವ ಯೂರೋಪಿಯನ್ ಕಾರುಗಳು ಬೆಲೆ ಭಾರಿ ಇಳಿಕೆಯಾಗುತ್ತಿದೆ

36
ಶೇ.110 ರಿಂದ ಶೇ.70ಕ್ಕೆ ತೆರಿಗೆ ಕಡಿತ

ಭಾರತ ಯೂರೋಪಿಯನ್ ಒಕ್ಕೂಟದ ಟ್ರೇಡ್ ಡೀಲ್‌ನಿಂದ ಆಮದು ವಸ್ತುಗಳ ಮೇಲಿನ ತೆರಿಗೆ 110 ರಿಂದ ಶೇಕಡಾ 70ಕ್ಕೆ ಇಳಿಸಲಾಗಿದೆ. ಬರೋಬ್ಬರಿ ಶೇಕಡಾ 40ರಷ್ಟು ತೆರಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಯೂರೋಪಿಯನ್ ಒಕ್ಕೂಟದಡಿಯ ಜರ್ಮನ್ ಸೇರಿದಂತೆ ಇತರ ಕಾರುಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ.

46
ಭಾರತದಲ್ಲಿ ಯಾವ ಕಾರುಗಳ ಬೆಲೆ ಇಳಿಕೆ

ಭಾರತದಲ್ಲಿ ಯೂರೋಪಿಯನ್ ಒಕ್ಕೂಟದಡಿಯ ಹಲವು ರಾಷ್ಟ್ರಗಳ ಕಾರುಗಳು ಭಾರತದಲ್ಲಿ ಲಭ್ಯವಿದೆ. ಟ್ರೇಡ್ ಡೀಲ್‌ನಿಂದ ಭಾರತದಲ್ಲಿ ಮರ್ಸಿಡಿಸ್ ಬೆಂಜ್, BMW, ಆಡಿ, ಪೊರ್ಶೆ, ವೋಲ್ವೋ, ವೋಕ್ಸ್‌ವ್ಯಾಗನ್ ಕಾರುಗಳ ಬೆಲೆ ಭಾರತದಲ್ಲಿ ಇಳಿಕೆಯಾಗಲಿದೆ. ಈ ಕಾರುಗಳ ಆಮದು ಮೇಲಿನ ಸುಂಕ ಇಳಿಕೆಯೇ ಬೆಲೆ ಇಳಿಕೆಗೆ ಕಾರಣವಾಗಲಿದೆ.

56
ಮಾರುತಿ, ಟಾಟಾ ಕಾರುಗಳಿಗೆ ಠಕ್ಕರ್

ಯೂರೋಪಿಯನ್ ಯೂನಿಯನ್ ಜೊತೆಗಿನ ಟ್ರೇಡ್ ಡೀಲ್‌ನಿಂದ ವೋಕ್ಸ್‌ವ್ಯಾಗನ್, ಸ್ಕೋಡಾ, ಬೆಂಜ್ ಸೇರಿದಂತೆ ಇತರ ಜರ್ಮನ್ ಸೇರಿ ಯೂರೋಪಿಯನ್ ಕಾರುಗಳು ಬೆಲೆ ಇಳಿಕೆಯಾಗುತ್ತಿದೆ. ಅದರಲ್ಲೂ ಎಂಟ್ರಿ ಲೆವಲ್ ಕಾರುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಇದರಿಂದ ಭಾರತದಲ್ಲಿ ಅಧಿಪತ್ಯ ಸಾಧಿಸಿರುವ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರ ಸೇರಿದಂತೆ ಇತರ ಕಾರುಗಳಿಗೆ ತೀವ್ರ ಹೊಡೆತ ನೀಡಲಿದೆ.

66
ಜರ್ಮನ್, ಬ್ರಿಟಿಷ್ , ಸ್ವೀಡನ್ ಕಾರು

ಭಾರತ ಯೂರೋಪಿಯನ್ ಒಕ್ಕೂಟ ಡ್ರೇಡ್ ಡೀಲ್‌ನಿಂದ ಇದೀಗ ಜರ್ಮನ್, ಬ್ರಿಟಿಷ್, ಸ್ವೀಡನ್ ಕಾರು ಖರೀದಿಸುವ ಕನಸು ಹೊಂದಿದ್ದ ಭಾರತೀಯರ ಕನಸು ನನಸಾಗಲಿದೆ. ಈ ಕಾರುಗಳ ಬೆಲೆ ಅತೀ ಕಡಿಮೆಯಾಗಲಿದೆ. ಸಾಮಾನ್ಯ ಬೆಲೆಗೆ ಐಷಾರಾಮಿ ಕಾರುಗಳು ಲಭ್ಯವಾಗಲಿದೆ. ಭಾರತದಲ್ಲಿ ತೆರಿಗೆ ಹೆಚ್ಚಿದ್ದ ಕಾರಣ ಈ ಕಾರುಗಳು ಯೂರೋಪ್ ರಾಷ್ಟ್ರಗಳಿಂದ ದುಬಾರಿಯಾಗಿತ್ತು.

ಜರ್ಮನ್, ಬ್ರಿಟಿಷ್ , ಸ್ವೀಡನ್ ಕಾರು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories