ಚಿನ್ನ ಖರೀದಿಸುವವರಿಗೆ ಶುಭ ಶುಕ್ರವಾರ; ಅಮೆರಿಕ-ಇರಾನ್ ಡೀಲ್ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 3650 ರುಪಾಯಿ ಕುಸಿತ!

Published : Jun 19, 2026, 11:10 AM IST

ಕಳೆದ ಕೆಲವು ದಿನಗಳಿಂದ ಆಕಾಶದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ಅಮೆರಿಕ-ಇರಾನ್ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮಹಾಪತನ ಕಂಡಿದೆ. ಜೂನ್ 19ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ನೋಡೋಣ. 

PREV
16
ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನದ ಬೆಲೆ

ಕಳೆದ ಮೂರೂವರೆ ತಿಂಗಳಿನಿಂದ ಮಧ್ಯಪ್ರಾಚ್ಯ ಯುದ್ದದಿಂದಾಗಿ ಪ್ರತಿ ದಿನ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯವಾಗಿದ್ದವು. ಅದರಲ್ಲೂ ಮದುವೆ ಹಬ್ಬ, ಹರಿದಿನಗಳ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಸಾಮಾನ್ಯ ವರ್ಗದ ಜನ ಚಿನ್ನ ಖರೀದಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

26
ಆಭರಣ ಪ್ರಿಯರಿಗೆ ಗುಡ್ ನ್ಯೂಸ್

ಇದೀಗ ಇರಾನ್ ಹಾಗೂ ಅಮೆರಿಕ ನಡುವಿನ ಯುದ್ದ ಉಭಯ ದೇಶಗಳ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ, ಭಾರತದ ಷೇರು ಮಾರುಕಟ್ಟೆ ಹಾಗೂ ರುಪಾಯಿ ಮೌಲ್ಯದಲ್ಲಿ ಕೊಂಚ ಏರಿಕೆ ಕಂಡಿದೆ. ಇನ್ನು ಇದರ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಮಹಾ ಕುಸಿತ ಕಂಡಿದ್ದು, ಆಭರಣ ಪ್ರಿಯರ ಪಾಲಿಗೆ ಇಂದು ಶುಭ ಶುಕ್ರವಾರವಾಗಿ ಪರಿಣಮಿಸಿದೆ.

36
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 3,650 ರುಪಾಯಿ ಕುಸಿತ

ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 3650 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,586 ರುಪಾಯಿಗಳಾಗಿವೆ. ಇದು ಬಂಗಾರದ ಮೇಲೆ ಹೂಡಿಕೆ ಮಾಡುವವರಿಗೆ ಶುಭ ಸುದ್ದಿಯಾಗಿದೆ.

46
22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 3,350 ರುಪಾಯಿ ಕುಸಿತ

ಇನ್ನೊಂದೆಡೆ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಸಹ ಗಣನೀಯ ಕುಸಿತವಾಗಿದೆ. ಇದೀಗ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು 3,350 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,370 ರುಪಾಯಿಗಳಾಗಿವೆ.

56
ಬೆಳ್ಳಿ ಬೆಲೆಯಲ್ಲಿಂದು 10 ಸಾವಿರ ರುಪಾಯಿ ಕುಸಿತ

ಇಂದು ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆಯಾಗಿದೆ. ಜೂನ್ 19ರಂದು ಒಂದು ಕೆಜಿ ಬೆಳ್ಳಿ ಬೆಲೆ 2,50,000 ರುಪಾಯಿಗಳಾಗಿದೆ.

66
ಚಿನ್ನ ಖರೀದಿಸುವವರ ಮುಖದಲ್ಲಿ ಮಂದಹಾಸ

ಒಟ್ಟಿನಲ್ಲಿ ಒಂದು ಕಡೆ ಷೇರು ಮಾರುಕಟ್ಟೆಯಲ್ಲಿ ಏರಿಕೆ, ಯುದ್ದದ ಕಾವು ತಣ್ಣಗಾದ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿರುವುದು ಚಿನ್ನ ಖರೀದಿಸುವವರ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಮುಖದಲ್ಲಿ ಮಂದಹಾಸ ಮೂಡಿಸಿರುವುದಂತೂ ಸುಳ್ಳಲ್ಲ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories