Swiss bank indian money drops by 3000 crore but customer deposits rise 2025 kannada ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಒಟ್ಟು ಹಣ 36 ಸಾವಿರ ಕೋಟಿ ರೂ.ಗೆ ಇಳಿದಿದ್ದರೂ, ವೈಯಕ್ತಿಕ ಮತ್ತು ಕಂಪನಿ ಖಾತೆಗಳ ಠೇವಣಿಯಲ್ಲಿ 50% ಏರಿಕೆ ದಾಖಲಾಗಿದೆ.
ನವದೆಹಲಿ/ಜ್ಯೂರಿಚ್: ಸ್ವಿಜರ್ಲೆಂಡ್‌ನ ರಾಷ್ಟ್ರೀಯ ಬ್ಯಾಂಕ್ (SNB) ಬಿಡುಗಡೆ ಮಾಡಿದ 2025ರ ವಾರ್ಷಿಕ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 3,000 ಕೋಟಿ ರೂ. ಇಳಿಕೆಯಾಗಿ 36,000 ಕೋಟಿ ರೂ. ಮಟ್ಟಕ್ಕೆ ತಲುಪಿದೆ.
2024ರಲ್ಲಿ ಭಾರತೀಯರ ಹಣದ ಪ್ರಮಾಣ ಭಾರೀ ಏರಿಕೆ ಕಂಡು ಸುಮಾರು 39,000 ಕೋಟಿ ರೂ. ತಲುಪಿತ್ತು. ಆದರೆ 2025ರಲ್ಲಿ ಒಟ್ಟು ಮೊತ್ತದಲ್ಲಿ ಸುಮಾರು 8% ಕುಸಿತ ಕಂಡುಬಂದಿದೆ. ಇದರಿಂದ ಭಾರತೀಯರ ಸ್ವಿಸ್ ಠೇವಣಿಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
24
ಆದರೆ ಗ್ರಾಹಕ ಖಾತೆಗಳಲ್ಲಿ ಹಣ ಹೆಚ್ಚಳ!
ಒಟ್ಟು ಠೇವಣಿ ಮೊತ್ತ ಕಡಿಮೆಯಾದರೂ, ಭಾರತೀಯ ವ್ಯಕ್ತಿಗಳು ಹಾಗೂ ಕಂಪನಿಗಳು ನೇರವಾಗಿ ಗ್ರಾಹಕ ಖಾತೆಗಳಲ್ಲಿ ಇಟ್ಟಿರುವ ಮೊತ್ತದಲ್ಲಿ ಸುಮಾರು 50% ಹೆಚ್ಚಳ ಕಂಡುಬಂದಿದೆ. ಈ ವಿಭಾಗದಲ್ಲಿ ಸುಮಾರು 6,000 ಕೋಟಿ ರೂ. ಹೆಚ್ಚಳ ದಾಖಲಾಗಿದ್ದು, ಇದು ಒಟ್ಟು ಭಾರತೀಯ ಹಣದ ಪ್ರಮಾಭ ಸುಮಾರು 16% ರಷ್ಟಾಗುತ್ತದೆ .
34
ಈ ಹಣವೆಲ್ಲ ಕಪ್ಪುಹಣವೇ?
ತಜ್ಞರ ಪ್ರಕಾರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ಎಲ್ಲಾ ಭಾರತೀಯ ಹಣವನ್ನು ಕಪ್ಪುಹಣ ಎಂದು ಪರಿಗಣಿಸುವುದು ತಪ್ಪು. ಇದರಲ್ಲಿ ಭಾರತೀಯ ಕಂಪನಿಗಳ ವ್ಯವಹಾರಿಕ ಖಾತೆಗಳು, ಬ್ಯಾಂಕ್‌ಗಳ ನಡುವಿನ ಹಣಕಾಸು , ವ್ಯವಹಾರಗಳು, ಹೂಡಿಕೆ ನಿಧಿಗಳು, ವೈಯಕ್ತಿಕ ಉಳಿತಾಯ ಖಾತೆಗಳು, ಷೇರು ಮತ್ತು ಬಾಂಡ್‌ಗಳಿಗೆ ಸಂಬಂಧಿಸಿದ ಹೂಡಿಕೆಗಳು ಇತ್ಯಾದಿ ಸೇರಿರುತ್ತವೆ.
44
ವರದಿಯಲ್ಲಿ ಸೇರದ ಹಣ ಯಾವುದು?
ಸ್ವಿಸ್ ರಾಷ್ಟ್ರೀಯ ಬ್ಯಾಂಕ್‌ನ ಅಧಿಕೃತ ಅಂಕಿಅಂಶಗಳಲ್ಲಿ ಬೇರೆ ದೇಶಗಳ ಹೆಸರಿನಲ್ಲಿ ಅಥವಾ ಟ್ರಸ್ಟ್‌ಗಳು, ಶೆಲ್ ಕಂಪನಿಗಳ ಮೂಲಕ ಇಡಲಾಗಿರುವ ಹಣವನ್ನು ಪ್ರತ್ಯೇಕವಾಗಿ ಗುರುತಿಸಲಾಗುವುದಿಲ್ಲ. ಆದ್ದರಿಂದ ಈ ಅಂಕಿಅಂಶಗಳು ಭಾರತೀಯರ ಒಟ್ಟು ಜಾಗತಿಕ ಆಸ್ತಿ ವಿವರವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ.
ಸರ್ಕಾರದ ಕ್ರಮಗಳ ಪರಿಣಾಮವೇ?
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ತೆರಿಗೆ ಮಾಹಿತಿ ವಿನಿಮಯ ಒಪ್ಪಂದ ಜಾರಿಯಲ್ಲಿದೆ. ಇದರ ಪರಿಣಾಮವಾಗಿ ವಿದೇಶಿ ಖಾತೆಗಳ ಪಾರದರ್ಶಕತೆ ಹೆಚ್ಚಾಗಿದ್ದು, ಅಕ್ರಮ ಹಣ ವರ್ಗಾವಣೆಯ ಮೇಲೆ ನಿಗಾ ಬಲಗೊಂಡಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.